ಉದ್ದ ಕೂದಲಿಗೆ ಕತ್ತರಿ ಹಾಕಿದ ಸ್ಯಾಮ್; ಈಗೆಲ್ಲಿದ್ದಾರೆ, ಏನ್ಮಾಡ್ತಿದ್ದಾರೆ..?

sam
Published on

ಆಂಧ್ರಪ್ರದೇಶ: ಸ್ಯಾಮ್ ಸದ್ಯ ಉದ್ದನೆಯ ಕೂದಲಿಗೆ ಕತ್ತರಿ ಹಾಕಿದ್ದು, ಮತ್ತೊಮ್ಮೆ ತಮ್ಮ ಹೊಸ ಹೇರ್ ಸ್ಟೈಲ್ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್​​​​ನಲ್ಲಿ ಹೊಸ ರೀಲ್ ಹಂಚಿಕೊಂಡಿರುವ ಸಮಂತಾ ರಜೆಯ ಮೂಡ್‌ನಲ್ಲಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ. ವಿಡಿಯೋದಲ್ಲಿ ಖುಷಿ ಖುಷಿಯಾಗಿ ಕಾಣಿಸಿಕೊಂಡಿರುವ ಸಮಂತಾ ಸ್ನೇಹಿತೆಯೊಂದಿಗೆ ಬಾಲಿಗೆ ಹಾರಿದ್ದಾರೆ. ಜೊತೆಗೆ ಅಲ್ಲಿನ ಬೀಚ್‌ ಸೌಂದರ್ಯ ಸವಿಯುತ್ತಾ ಸಮಯ ಕಳೆಯುತ್ತಿದ್ದಾರೆ.

ಇದೀಗ, ಸಮಂತಾ ತಮ್ಮ ಆರೋಗ್ಯದ ಮೇಲೆ ಮಾತ್ರ ಗಮನಹರಿಸುತ್ತಿದ್ದಾರೆ. ಸ್ವಯಂ ನಿರೋಧಕ ಕಾಯಿಲೆಯಾದ ಮೈಯೋಸಿಟಿಸ್‌ನೊಂದಿಗೆ ಹೋರಾಡುತ್ತಿರುವ ಸಮಂತಾ ಸದ್ಯ ಗುಣಮುಖರಾಗಿದ್ದಾರೆ. ಏತನ್ಮಧ್ಯೆ, ಸಮಂತಾ ಕಾಯಿಲೆಯಿಂದ ಗುಣಮುಖರಾಗಲು ಬಯಸುತ್ತಿರುವುದರಿಂದ ಹೊಸ ಯೋಜನೆಗಳಿಂದ ದೂರ ಉಳಿದಿದ್ದು, ವಿರಾಮ ತೆಗೆದುಕೊಂಡಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಒಂದು ವರ್ಷ ವಿರಾಮ ತೆಗೆದುಕೊಂಡಿದ್ದು, ವರದಿಗಳ ಪ್ರಕಾರ ಸಮಂತಾ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ವೈದ್ಯಕೀಯ ತಜ್ಞರ ತಂಡ ಸ್ಯಾಮ್‌ಗೆ ಚಿಕಿತ್ಸೆ ನೀಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net