ಶಾಸಕ ಪ್ರದೀಪ್ ಈಶ್ವರ್ ಆರಾಧ್ಯ ದೈವ ಗ್ರಾಮಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಬಸ್ ವ್ಯವಸ್ಥೆ

KSRTC Bus
Published on

ಬೆಂಗಳೂರು: ಶಾಸಕ ಪ್ರದೀಪ್ ಈಶ್ವರ್ ಅವರ ಆರಾಧ್ಯ ದೈವ ಗ್ರಾಮಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ದೇವನಹಳ್ಳಿಯಿಂದ ಗಡ್ಡದನಾಯಕನಹಳ್ಳಿ ಗ್ರಾಮಕ್ಕೆ ಕೆಎಸ್​​ಆರ್​​​ಟಿಸಿ ಬಸ್ ಆರಂಭಿಸಿದ್ದು, ಸಚಿವ ಕೆಎಚ್ ಮುನಿಯಪ್ಪ ಹಾಗೂ ಶಾಸಕ ಪ್ರದೀಪ್ ಈಶ್ವರ್​​​​ರಿಂದ ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಲಾಗಿದೆ.

ದೇವನಹಳ್ಳಿಯಿಂದ ಕೆಲ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇರಲಿಲ್ಲ. ಅದರಲ್ಲೂ ಪ್ರದೀಪ್ ಈಶ್ವರ್ ನಂಬಿಕೆ ದೇವರು ಗಡ್ಡದನಾಯಕನಹಳ್ಳಿ ದುರ್ಗಾ ಪರಮೇಶ್ವರಿ ದೇವಾಲಯದ ಊರಿಗೆ ಬಸ್ ಇರಲಿಲ್ಲ.

ಈ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಸಚಿವರ ಗಮನ ಸೆಳೆದಿದ್ದರು. ಈ ಹಿನ್ನಲೆಯಲ್ಲಿ ಇಂದಿನಿಂದ ದೇವನಹಳ್ಳಿಯಿಂದ ಯಲಿಯೂರು, ದೊಡ್ಡತತ್ತಮಂಗಲ, ಗಡ್ಡದನಾಯಕನಹಳ್ಳಿ ವಿಜಯಪುರ ಮಾರ್ಗವಾಗಿ ಬಸ್ ಆರಂಭಕ್ಕೆ ಚಾಲನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net