ಲಾಕ್​ಡೌನ್​ನಲ್ಲಿ ಸಲ್ಮಾನ್​ ಖಾನ್​ ಬಾಡಿ ಶೇಪೇ ಬದಲಾಗೋಯ್ತು!

salman
Published on

ಸಲ್ಮಾನ್​ ಖಾನ್​ ಅಂದರೆ ಮೊದಲು ನೆನಪಾಗೋದು ಅವರ ಹುರಿಗಟ್ಟಿದ ದೇಹ. ಕಟ್ಟುಮಸ್ತಾದ ಶರೀರ. ಪ್ರತಿ ಸಿನಿಮಾದಲ್ಲೂ ಸಲ್ಮಾನ್​ ಖಾನ್​ ಶರ್ಟ್​​ಲೆಸ್​ ಅವತಾರದಲ್ಲಿ ಕಾಣಿಸಿಕೊಳ್ಳಲೇಬೇಕು. ನುಣುಪಾಗಿ ಹೊಳೆಯೋ ಬೇರ್​ಬಾಡಿಯಲ್ಲಿಯೇ ವಿಲನ್​ಗಳನ್ನು ಅಟ್ಟಾಡಿಸಿ ಹೊಡೆಯಬೇಕು. ಸಲ್ಮಾನ್​ ಅಂದ್ರೆ ಹಾಗೇ. ಅದನ್ನು ಅವರ ಅಭಿಮಾನಿಗಳೂ ಇಷ್ಟಪಡುತ್ತಾರೆ.

ಹೀಗಿರುವಾಗ ಕಳೆದೊಂದು ತಿಂಗಳಿಂದ ಸಲ್ಮಾನ್​ ಖಾನ್​ ಲಾಕ್​ಡೌನ್​ ಹಿನ್ನೆಲೆಯಲ್ಲಿ ಫಾರ್ಮ್​ ಹೌಸ್​ ಸೇರಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಸಲ್ಮಾನ್​, ಭರ್ಜರಿ ವರ್ಕೌಟ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಅದ್ಯಾವ ಮಟ್ಟಿಗೆ ಅಂದರೆ, ಅವರ ಬಾಡಿ ಶೇಪೇ ಬದಲಾಗೋಗಿದೆ!

ಹೌದು, ಈ ಹಿಂದೆ ಜಿಮ್​ನಲ್ಲಿ ಬೆವರಿಳಿಸುವ ಫೋಟೋಗಳನ್ನು ಆಗಾಗ ಹಂಚಿಕೊಳ್ಳುವ ಸಲ್ಮಾನ್​, ಲಾಕ್​ಡೌನ್​ ಹೊತ್ತಲ್ಲಿ ಫಾರ್ಮ್​ಹೌಸ್​ನ ಜಿಮ್​ನಲ್ಲಿ ಬೆವರಿಳಿಸುತ್ತಿರುವ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಿಯರ್ಡ್​ ಲುಕ್​ನಲ್ಲಿ, ಕಟ್ಟುಮಸ್ತಾದ ಫೋಟೋವನ್ನು ಪೋಸ್ಟ್​ ಮಾಡಿದ್ದಾರೆ. ಹಾಗೇ ಫೋಟೋ ಹಾಕಿದ್ದೇ ತಡ, ಇದು ರಾಧೆ ಚಿತ್ರದ ಹೊಸ ಲುಕ್​ ಇರಬಹುದಾ? ಅಥವಾ ಟೈಗರ್ ಚಿತ್ರಕ್ಕಾಗಿನ ತಯಾರಿಯಾ ಎಂಬ ಪ್ರಶ್ನೆ ಅಭಿಮಾನಿ ವಲಯದಿಂದ ಕೇಳಿಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net