ಸ್ಯಾಂಡಲ್​ವುಡ್​ನಲ್ಲಿ ಯಶ್​ ನಂ.1 , ಪುನೀತ್​ ನಂ. 2; ಯಾವ ವಿಷ್ಯದಲ್ಲಿ ಗೊತ್ತ?

467c67835ae82b2779236d664a8e7476
Published on

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಯಾರು ನಂಬರ್​ 1, ಯಾರು ನಂಬರ್​ 2 ಎಂಬ ಪ್ರಶ್ನೆ ಆಗಾಗ ಅಭಿಮಾನಿ ವಲಯದಿಂದ ತೂರಿ ಬರುತ್ತಿರುತ್ತದೆ. ಕೊನೆಗೆ ಅವರವರ ಅಭಿಮಾನಿಗಳೇ ನಮ್ಮ ಹೀರೋ ನಂ 1 ಎಂದು ಹೇಳಿಕೊಂಡು ಖುಷಿ ಪಡುತ್ತಾರೆ. ಇದೀಗ ಈ ಒಂದು ವಿಚಾರವನ್ನು ಅಳತೆಗೋಲಿಗೆ ಹಚ್ಚಿದರೆ, ರಾಕಿಂಗ್​ ಸ್ಟಾರ್ ಯಶ್ ನಂ. 1, ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್ ನಂ. 2 ಎನ್ನಬಹುದು.

ಹೌದು, ಸ್ಯಾಂಡಲ್​ವುಡ್​ನಲ್ಲಿ ಅತೀ ಹೆಚ್ಚು ಇನ್​ಸ್ಟಾಗ್ರಾಂ ಫಾಲೋವರ್ಸ್​ ಹೊಂದಿದವರಲ್ಲಿ ಯಶ್​ ಮೊದಲ ಸ್ಥಾನದಲ್ಲಿದ್ದಾರೆ. ಬರೋಬ್ಬರಿ 2.9 (29 ಲಕ್ಷ) ಮಿಲಿಯನ್​ ಹಿಂಬಾಲಕರನ್ನು ಹೊಂದಿದ್ದಾರೆ. ಇಲ್ಲಿಯವರೆಗೂ ನಾಯಕರ ಪಟ್ಟಿಯಲ್ಲಿ ಯಶ್​ ಹೊರತುಪಡಿಸಿ ಕನ್ನಡದ ಬೇರಾವ ನಟ ಮಿಲಿಯನ್​ ಗಡಿ ದಾಟಿರಲಿಲ್ಲ. ಇದೀಗ ಯಶ್​ ನಂತರ ಪವರ್​ಸ್ಟಾರ್​ ಪುನೀತ್​ 1 (10ಲಕ್ಷ) ಮಿಲಿಯನ್​ ಫಾಲೋವರ್ಸ್​ ಹೊಂದಿದ್ದಾರೆ.

ಹಾಗಾದರೆ ಇನ್ನುಳಿದ ಸ್ಯಾಂಡಲ್​ವುಡ್​ ಸ್ಟಾರ್​ಗಳ ಇನ್ಸ್ಟಾ ಹಿಂಬಾಲಕರೆಷ್ಟು? ಇಲ್ಲಿದೆ ನೋಡಿ ಅದರ ವಿವರ. ರ್ಯಾಪರ್​ ಚಂದನ್ ಶೆಟ್ಟಿ 9.5 ಲಕ್ಷ, ಶ್ರೀಮುರಳಿ 7.9 ಲಕ್ಷ ಸುದೀಪ್​ 6.8 ಲಕ್ಷ, ರಕ್ಷಿತ್​ ಶೆಟ್ಟಿ, 6.4 ಲಕ್ಷ, ಗಣೇಶ್​ 5.4 ಲಕ್ಷ, ದರ್ಶನ್​, 4.5 ಲಕ್ಷ, ಧ್ರುವ 3.3 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net