ನ್ಯೂಯಾರ್ಕ್: ಹೋಟೆಲ್ ಲಾಬಿಯಲ್ಲಿ ಮೂತ್ರ ವಿಸರ್ಜನೆ ಮಾಡಿದ ತನ್ನ ನೌಕರನನ್ನು ಲೆನೊವೊ ಕಂಪನಿ ಕೆಲಸದಿಂದ ವಜಾ ಮಾಡಿದೆ. ವಜಾಗೊಂಡ ವ್ಯಕ್ತಿ ತನ್ನ ಆರೋಗ್ಯ ಸಮಸ್ಯೆಯನ್ನು ವಿವರಿಸಿದರು ಸಂಸ್ಥೆಯೂ ಅದನ್ನು ಕೇಳದೆ ನನ್ನನ್ನ ಕೆಲಸದಿಂದ ವಜಾ ಮಾಡಿದೆ ಎಂದು ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾನೆ.
ಇದನ್ನು ಓದಿ: 23 ಜನರನ್ನು ಗುಂಡಿಟ್ಟು ಕೊಂದ ಭಯೋತ್ಪಾದಕರು; ಹತ್ಯಾಕಾಂಡದ ಹಿಂದಿದೆ ಕ್ಷುಲ್ಲಕ ಕಾರಣ..
ಸರಿಯಾದ ಕಾರಣವಿಲ್ಲದೆ ಕಂಪನಿ ನನ್ನನ್ನು ಕೆಲಸದಿಂದ ತೆಗೆದುಹಾಕಿದೆ. ಆದ್ದರಿಂದ ಕಂಪನಿಯು ಕನಿಷ್ಟ 1.5 ಮಿಲಿಯನ್ ಡಾಲರ್ (12 ಕೋಟಿ ರೂಪಾಯಿ) ಪರಿಹಾರ ನೀಡಬೇಕೆಂದು 66 ವರ್ಷದ ರಿಚರ್ಡ್ ಬೇಕರ್ ನ್ಯೂಯಾರ್ಕ್ ಸ್ಟೇಟ್ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದ್ದಾರೆ.
ಅಸಲಿಗೆ ರಿಚರ್ಡ್ ಅವರು ಭೋಜನದ ನಂತರ ಹೋಟೆಲ್ಗೆ ಹಿಂತಿರುಗಿದ್ದಾರೆ. ಆ ಸಮಯದಲ್ಲಿ ಲಾಬಿ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದನ್ನು ನೋಡಿದ ಸಹದ್ಯೋಗಿಯೊಬ್ಬರು ದುರುದ್ದೇಶದಿಂದ ರಿಚರ್ಡ್ ಉದ್ದೇಶಪೂರ್ವಕವಾಗಿ ಹೋಟೆಲ್ ಲಾಬಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾನೆ ಎಂದು ಭಾವಿಸಿ ಎಚ್ಆರ್ಗೆ ದೂರು ನೀಡಿದ್ದಾರೆ. ಬಳಿಕ ಎಚ್ಆರ್ ಡಿಪಾರ್ಟ್ಮೆಂಟ್ನಿಂದ ಕ್ರಮಕೈಗೊಳ್ಳಲಾಗಿದೆ.
ಆದರೆ ರಿಚರ್ಡ್ ಹೇಳುವುದೆ ಬೇರೆ. ತಾನು 2016ರಿಂದ ಮೂತ್ರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ. ಈ ಸಮಸ್ಯೆಯಿಂದ ಶೌಚಾಲಯಕ್ಕೆ ತೆರಳಲಾಗದೆ ಅಂದು ಲಾಬಿಯಲ್ಲಿ ಮೂತ್ರ ವಿಸರ್ಜನೆ ಮಾಡಿದೆ. ಆದರೆ ಸಂಸ್ಥೆಯು ಈ ಬಗ್ಗೆ ತಿಳಿದಿದ್ದರೂ ಸಹಾನುಭೂತಿ ತೋರುವ ಬದಲು ನನ್ನನ್ನು ವಜಾಗೊಳಿಸಿದ್ದಾರೆ ಎಂದು ಹೇಳುತ್ತಾರೆ.
ಕಂಪನಿಯೂ ಮಾನವ ಹಕ್ಕಗಳು ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಸುಮಾರು 12 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಕಂಪ್ಯೂಟರ್ ತಯಾರಿಕೆಯಲ್ಲಿ ಹೆಸರಾಗಿರುವು ಲೆನೊವೊ ಕಂಪನಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. (ಏಜೆನ್ಸೀಸ್)
ಲಡಾಖ್ನಲ್ಲಿ 5 ಹೊಸ ಜಿಲ್ಲೆಗಳ ರಚನೆಗೆ ನಿರ್ಧಾರ; ತೀರ್ಮಾನದ ಹಿಂದಿನ ಕಾರಣ ತಿಳಿಸಿದ ಅಮಿತ್ ಷಾ