Salaar movie: ಬಾಹುಬಲಿ ಸಿನಿಮಾ ಬಳಿಕ ಪ್ಯಾನ್-ಇಂಡಿಯಾ ಸ್ಟಾರ್ ಪ್ರಭಾಸ್, ಒಂದೇ ಒಂದು ಹಿಟ್ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದೇ ಅಭಿಮಾನಿಗಳ ಬೇಸರವಾಗಿದೆ. ಸದ್ಯ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಬ್ಯುಸಿಯಾಗಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಸಲಾರ್ ಸಿನಿಮಾದ ಬಿಡುಗಡೆ ಇನ್ನಷ್ಟು ವಿಳಂಬವಾಗಲಿದೆ ಎನ್ನಲಾಗುತ್ತಿದೆ. ಇದು ಏಪ್ರಿಲ್ 2024 ರ ಕೊನೆಯ ವಾರದಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗ್ತಿದೆ. ವರದಿಯ ಪ್ರಕಾರ, ಪ್ರಭಾಸ್ ತಮ್ಮ ಮೊಣಕಾಲಿನ ಗಾಯದ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ. ಸಲಾರ್ ಗೆ ಸಂಬಂಧಿಸಿದ ಕೆಲವು ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿದಿವೆ. ಈ ಕಾರಣದಿಂದಾಗಿ, ನವೆಂಬರ್ 2023 ರಿಂದ ಏಪ್ರಿಲ್ 2024 ಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡಲು ತಯಾರಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಲಾರ್ ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆಯಾಗಬಹುದು ಎಂಬ ವರದಿಗಳು ಇದ್ದವು. ವರದಿಗಳ ಪ್ರಕಾರ, ಪ್ರಭಾಸ್ ಹಿಂದಿ ಆವೃತ್ತಿಗೆ ತಾವೇ ಡಬ್ಬಿಂಗ್ ಮಾಡಲು ಬಯಸಿದ್ದರು. ಇದರಿಂದಾಗಿ ಬಿಡುಗಡೆ ದಿನಾಂಕವನ್ನು ಮತ್ತಷ್ಟು ಮುಂದೂಡಲಾಗಿದೆ ಎಂದು ಹೇಳಲಾಗಿದೆ.
ಸೂಪರ್‌ಹಿಟ್ ಚಿತ್ರ RRR ನಲ್ಲಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಮಲಯಾಳಂ ಹೊರತುಪಡಿಸಿ ಎಲ್ಲಾ ಭಾಷೆಗಳಿಗೆ ಡಬ್ ಮಾಡಲಾಗಿದೆ. ವರದಿಯ ಪ್ರಕಾರ, ಪ್ರಭಾಸ್ ಇದರಿಂದ ಸ್ಫೂರ್ತಿ ಪಡೆಯಲು ಪ್ರಯತ್ನಿಸಿದ್ದಾರೆ ಮತ್ತು ಸಲಾರ್‌ನ ಹಿಂದಿ ಆವೃತ್ತಿಗೆ ಸ್ವಂತವಾಗಿ ಡಬ್ಬಿಂಗ್ ಮಾಡಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಸಲಾರ್ ವಿಳಂಬದ ಹಿಂದೆ ಊಹಿಸಲಾದ ಮತ್ತೊಂದು ಕಾರಣವೆಂದರೆ ಶಾರುಖ್ ಖಾನ್ ಅವರ ಜವಾನ್ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಿದೆ.