

ತೆಲಂಗಾಣ: ಸ್ಯಾಂಡಲ್ವುಡ್ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಿರ್ದೇಶಕ ಪ್ರಶಾಂತ್ ನೀಲ್ ಸ್ಟಾರ್ ಡೈರೆಕ್ಟರ್ ಆಗಿ ಮಿಂಚುತ್ತಿದ್ದಾರೆ. ಸಲಾರ್ ಸಿನಿಮಾ ಅದ್ಧೂರಿಯಾಗಿ ತೆರೆ ಕಂಡಿದೆ. ಈ ಮೂಲಕ ಪ್ರಶಾಂತ್ ಹ್ಯಾಟ್ರಿಕ್ ಬ್ಲಾಕ್ಬಸ್ಟರ್ ನೀಡಿದ್ದಾರೆ.
ಪ್ರಶಾಂತ್ ನೀಲ್, ಸಲಾರ್ ಸಿನಿಮಾ ದೇಶ-ವಿದೇಶಗಳಲ್ಲಿ ಸಖತ್ ಸದ್ದು ಮಾಡ್ತಿದೆ. 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿದೆ.
ತೆಲುಗು ನಟ ಪ್ರಭಾಸ್‌ಗೆ ಕೊನೆಗೂ ಭರ್ಜರಿ ಸಕ್ಸಸ್ ಸಿಕ್ಕಿದೆ. ಪ್ರಭಾಸ್ ಅವರಿಗೆ ಬಾಹುಬಲಿ ಬಳಿಕ ಸಲಾರ್ ಸೂಪರ್ ಹಿಟ್ ತಂದುಕೊಟ್ಟಿದೆ. ಕಳೆದ ವರ್ಷ ಡಿಸೆಂಬರ್ 22 ರಂದು ತೆರೆಕಂಡ ಸಿನಿಮಾ ಈಗಲೂ ಸಿನಿಮಾ ಥಿಯೇಟರ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆಗಿ ಒಂದು ತಿಂಗಳು ಕಳೆಯುತ್ತಾ ಬರುತ್ತಿದ್ದಂತೆ ಸಿನಿಮಾದ ಓಟಿಟಿ ಸ್ಟ್ರೀಮ್ ಬಗ್ಗೆ ಚರ್ಚೆ ಎಲ್ಲೆಡೆ ಆರಂಭವಾಗಿದೆ.
ಸಲಾರ್ ಓಟಿಟಿ ರೈಟ್ಸ್ನ್ನು ನೆಟ್ಫ್ಲಿಕ್ಸ್ ಸುಮಾರು 160 ಕೋಟಿ ರೂಪಾಯಿಗಳ ದಾಖಲೆ ಬೆಲೆಗೆ ಪಡೆದುಕೊಂಡಿದೆ. ಶೀಘ್ರದಲ್ಲೇ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ ಎಂದು ನೆಟ್ಫ್ಲಿಕ್ಸ್ ಹೇಳಿದೆ. ನೆಟ್ಫ್ಲಿಕ್ಸ್ ಹಿಂದಿನ ಆವೃತ್ತಿಯ ಹಕ್ಕುಗಳನ್ನು ಸಹ ಪಡೆದುಕೊಂಡಿದೆ ಎನ್ನಲಾಗಿದ್ದು, ಆದರೆ ಸ್ಟ್ರೀಮಿಂಗ್ ವಿಳಂಬಗೊಳ್ಳುತ್ತಿದೆ. ಚಿತ್ರದ ಹಿಂದಿ ಆವೃತ್ತಿಯ ಓಟಿಟಿ ಪ್ಲಾಟ್‌ಫಾರ್ಮ್ ಅನ್ನು ತಯಾರಕರು ಇನ್ನೂ ಬಹಿರಂಗಪಡಿಸಿಲ್ಲ ಎಂದು ಟ್ವೀಟ್ ಮಾಡಿದೆ.
ಸಲಾರ್‌ನ ಒಟಿಟಿ ಬಿಡುಗಡೆ ದಿನಾಂಕವನ್ನು ಇನ್ನೂ ಅಧಿಕೃತವಾಗಿ ಘೋಷಿಸಬೇಕಾಗಿದ್ದರೂ, ಮೂಲಗಳ ಪ್ರಕಾರ ಗಣರಾಜ್ಯೋತ್ಸವ ದಿನದಂದು ಸಲಾರ್ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಅದರೆ ಈ ಕುರಿತು ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.