ಬಿಗ್​ಬಾಸ್‌ ತಮಿಳು ಸೀಸನ್‌ 7; ವಿನ್ನರ್​ಗೆ ಸಿಕ್ಕ ಮೊತ್ತವೆಷ್ಟು?

bigboss tamil-7
Published on

ಚೆನ್ನೈ: ಬಿಗೆಸ್ಟ್ ರಿಯಾಲಿಟಿ ಶೋ ಬಿಗ್​ಬಾಸ್‌ ತಮಿಳು ಸೀಸನ್‌ 7 ಶೋಗೆ ಅದ್ಧೂರಿ ತೆರೆಬಿದ್ದಿದೆ. 105 ದಿನಗಳ ಕಾಲ ನಡೆದ ಈ ಶೋನಲ್ಲಿ ವಿಜೆ ಅರ್ಚನಾ ರವಿಚಂದ್ರನ್ ಅವರು ಟ್ರೋಫಿ ಗೆದ್ದಿದ್ದಾರೆ.

ಶೋನ ವಿನ್ನರ್ ಆಗಿರುವ ಅವರಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿದೆ. ಮಣಿಚಂದ್ರನ್ ಮೊದಲ ರನ್ನರ್ ಅಪ್ ಆಗಿದ್ದಾರೆ. ವಿಜೇತರಿಗೆ ಹಾಗೂ ರನ್ನರ್​ ಅಪ್​ಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು ಗೊತ್ತಾ ?

ವೈಲ್ಡ್ ಕಾರ್ಡ್ ಎಂಟ್ರಿ ಪಡೆದು 28ನೇ ದಿನಕ್ಕೆ ಮನೆಗೆ ಕಾಲಿಟ್ಟ ಅರ್ಚನಾ ರವಿಚಂದ್ರನ್ 77 ದಿನಗಳ ಕಾಲ ಮನೆಯಲ್ಲಿದ್ದರು. ಅದ್ಭುತವಾಗಿ ಆಡಿ ವಿಜೇತರಾದರು. ವಿಜೇತರಾದ ಅರ್ಚನಾಗೆ ಬಿಗ್​ಬಾಸ್ ಟ್ರೋಫಿಯ ಜೊತೆಗೆ 50 ಲಕ್ಷ ರೂಪಾಯಿ ನಗದು ಬಹುಮಾನ, ಒಂದು ಮಾರುತಿ ಸ್ವಿಫ್ಟ್ ಗ್ರಾಂಡ್ ವಿಟಾರಾ ಕಾರು ನೀಡಲಾಗಿದೆ. ಮಾರುತಿ ಸ್ವಿಫ್ಟ್ ಗ್ರಾಂಡ್ ವಿಟಾರಾ ಕಾರಿನ ಬೇಸಿಕ್ ಬೆಲೆಯೇ 11 ಲಕ್ಷ ರೂಪಾಯಿಗಳಿವೆ. ಇದರ ಜೊತೆಗೆ 15 ಲಕ್ಷ ಮೌಲ್ಯದ ಸೈಟು ಒಂದು ನೀಡಲಾಗಿದೆ ಎನ್ನಲಾಗಿದೆ.

ರನ್ನರ್ ಅಪ್ ಆದ ಮಣಿಚಂದ್ರನ್​ಗೆ ಯಾವುದೇ ಟ್ರೋಫಿ, ನಗದು ಬಹುಮಾನ ಯಾವುದೂ ಸಹ ಲಭಿಸಿಲ್ಲ. ಹಾಗೆಂದು ಅವರು ಬರಿಗೈಲಿ ಹೋಗಿಲ್ಲ. ಬಿಗ್​ಬಾಸ್ ಮನೆಯಲ್ಲಿ ಅವರ ಸಂಭಾವನೆಯೇ ಹೆಚ್ಚು. ವಾರಕ್ಕೆ ಸುಮಾರು 2 ಲಕ್ಷ ರೂಪಾಯಿಗಳನ್ನು ಅವರು ಸಂಭಾವನೆಯಾಗಿ ಪಡೆಯುತ್ತಿದ್ದರು ಎನ್ನಲಾಗಿದೆ.

ಕನ್ನಡ ಬಿಗ್​ಬಾಸ್ ನಲ್ಲಿ ಈ ಬಾರಿ ವಿಜೇತರಿಗೆ 45 ಲಕ್ಷ ರೂಪಾಯಿ ಹಣ ನೀಡಲಾಗುತ್ತದೆ.

ಜೊತೆಗೆ ಒಂದು ಮಾರುತಿ ಸುಜುಕಿ ಗ್ರಾಂಡ್ ವಿಟಾರ ಕಾರು ಲಭಿಸಲಿದೆ. ನಮ್ಮಲ್ಲಿಯೂ ಸಹ ರನ್ನರ್ ಅಪ್​ಗೆ ಯಾವುದೇ ಬಹುಮಾನ ನೀಡುವುದು ಅನುಮಾನ. ಕಳೆದ ಬಿಗ್​ಬಾಸ್​ನಲ್ಲಿ ರನ್ನರ್ ಅಪ್​ಗೆ ಐದು ಲಕ್ಷ ರೂಪಾಯಿ ನಗದು ಬಹುಮಾನವನ್ನು ಬ್ರ್ಯಾಂಡ್ ಒಂದರ ಮೂಲಕ ನೀಡಲಾಗಿತ್ತು. ಈ ಬಾರಿಯೂ ಹಾಗೆಯೇ ಆಗುವ ನಿರೀಕ್ಷೆ ಇದೆ.

ಶೋನಲ್ಲಿ ಯಾರೆಲ್ಲಾ ಇದ್ರು?: ಅಕ್ಟೋಬರ್ 1 ರಂದು ಶುರುವಾದ ಬಿಗ್ ಬಾಸ್‌' ತಮಿಳು ಸೀಸನ್‌ ನಿನ್ನೆಯಷ್ಟೆ ಫಿನಾಲೆ ನೆರವೇರಿದೆ. ಒಟ್ಟು 18 ಮಂದಿ ಸ್ಪರ್ಧಿಗಳು ಬಿಗ್​ಬಾಸ್​ ಮನೆಗೆ ಬಂದಿದ್ದರು. ಜೋವಿಕಾ ವಿಜಯ್ ಕುಮಾರ್, ಅಕ್ಷಯ್ ಉದಯಕುಮಾರ್, ವಿನುಷಾ ದೇವಿ ದೇವಿ, ವಿಷ್ಣು, ಮಾಯಾ ಎಸ್ ಕೃಷ್ಣನ್, ಶರವಣ ವಿಕ್ರಮ್,‌ ಯುಗೇಂದ್ರನ್, ಭವ ಚೆಲ್ಲಾದುರೈ, ಕೂಲ್ ಸುರೇಶ್, ಪೂರ್ಣಿಮಾ ರವಿ, ರವೀನಾ, ಪ್ರದೀಪ್ ಆಂಟನಿ, ಮಣಿಚಂದ್ರ, ವಿಚಿತ್ರಾ, ಅನನ್ಯಾ ರಾವ್ ಮುಂತಾದವರು ಸ್ಪರ್ಧಿಗಳಾಗಿ ಆಗಮಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net