More

    ಹೆತ್ತ ಮಗನನ್ನೇ ಕೊಂದ ಸಿಇಓ ಸುಚನಾ ಸೇಠ್​ ತನಿಖೆಗೆ ಸಹಕರಿಸುತ್ತಿಲ್ಲ; ಕಸ್ಟಡಿ ಅವಧಿ ವಿಸ್ತರಣೆ

    ಪಣಜಿ: ತನ್ನ ನಾಲ್ಕು ವರ್ಷದ ಮಗನನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿರುವ ಮೈಂಡ್​ಫುಲ್​ ಎ.ಐ ಲ್ಯಾಬ್​ ನವೋದ್ಯಮ ಕಂಪನಿಯ ಸಿಇಒ ಸುಚನಾ ಸೇಠ್​ಳನ್ನು ಪೊಲೀಸ್​ ಕಸ್ಟಡಿಯನ್ನು ಸೋಮವಾರ ಐದು ದಿನಗಳವರೆಗೆ ವಿಸ್ತರಿಸಲಾಗಿದೆ. ಆದರೆ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಗೋವಾ ನ್ಯಾಯಾಲಯ ತಿಳಿಸಿದೆ.

    ಇದನ್ನೂ ಓದಿ:ಅಮೇರಿಕಾ ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತ್ಯು

    ಆರು ದಿನಗಳ ಆರಂಭಿಕ ಬಂಧನ ಅವಧಿ ಮುಗಿದ ನಂತರ ಸೇಠ್​ಳನ್ನು ಗೋವಾ ಮಕ್ಕಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಅಪರಾಧದ ಉದ್ದೇಶವನ್ನು ಕಂಡುಹಿಡಿಯಬೇಕಿದೆ. ಮತ್ತು ಆಕೆಯ ಪರಿತ್ಯಕ್ತ ಪತಿ ವೆಂಕಟೇಶ್​ರಾಮನ್​ ನೀಡಿದ ಹೇಳಿಕೆಯ ವಿವರಗಳೊಂದಿಗೆ ಅವಳ ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

    ಗೋವಾದಲ್ಲಿ ನಾಲ್ಕು ವರ್ಷದ ಮಗನನ್ನೇ ಹತ್ಯೆಗೈದ ಸುಚನಾಳನ್ನು ಮಾಪುಸಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಗೋವಾದ ಕ್ಯಾಲಂಗುಟ್ ಪೊಲೀಸರು ಮಾಹಿತಿ ಮೇರೆಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಗೋವಾ ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಹೋಟೆಲ್​​​​ ಸಿಬ್ಬಂದಿ ಸುಚನಾ ಸೇಠ್ ಉಳಿದಿದ್ದ ಕೊಠಡಿಯನ್ನು ಸ್ವಚ್ಛಗೊಳಿಸಲು ಹೋದಾಗ ಟವೆಲ್‌ನಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಇದಾದ ನಂತರ ಹೋಟೆಲ್ ಆಡಳಿತ ಮಂಡಳಿಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಹಿಳೆ ಹೋಟೆಲ್​​​​ನಿಂದ ಹೊರಬಂದಾಗ, ಆಕೆಯ ನಾಲ್ಕು ವರ್ಷದ ಮಗ ಅವಳೊಂದಿಗೆ ಕಾಣಲಿಲ್ಲ ಮತ್ತು ಅವಳು ಭಾರವಾದ ಚೀಲವನ್ನು ಸಹ ಹೊತ್ತಿದ್ದಳು ಎಂದು ಸಿಬ್ಬಂದಿ ವರದಿ ಮಾಡಿದ್ದಾರೆ. ಚಿತ್ರದುರ್ಗದ (ಕರ್ನಾಟಕ) ಪೊಲೀಸರು ನಂತರ ಮಹಿಳೆಯ ಬ್ಯಾಗ್ ಅನ್ನು ಪರಿಶೀಲಿಸಿದಾಗ ಮಗನ ಶವ ಪತ್ತೆಯಾಗಿತ್ತು.

    ಬಿಗ್​ಬಾಸ್‌ ತಮಿಳು ಸೀಸನ್‌ 7; ವಿನ್ನರ್​ಗೆ ಸಿಕ್ಕ ಮೊತ್ತವೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts