More

    ಅಮೇರಿಕಾ ತೆರಳಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತ್ಯು

    ಅಮರಾವತಿ/ಹೈದರಾಬಾದ್: ತೆಲಂಗಾಣ ಮತ್ತು ಆಂಧ್ರಪ್ರದೇಶದ ತಲಾ ಒಬ್ಬರು ವಿದ್ಯಾರ್ಥಿಗಳು ಅಮೇರಿಕಾದ ನ್ಯೂಯಾರ್ಕ್‌ನಲ್ಲಿರುವ ತಮ್ಮ ಕನೆಕ್ಟಿಕಟ್ ವಸತಿಗೃಹದಲ್ಲಿ ನಿಗೂಢ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಇದನ್ನೂ ಓದಿ:ಒಂದೇ ರಾತ್ರಿ 30 ಲಕ್ಷ​ ಜೇನುನೊಣ ಸಾವು; ರಹಸ್ಯ ಬಹಿರಂಗಪಡಿಸಿದ ತಜ್ಞರು

    ವಿದ್ಯಾರ್ಥಿಗಳನ್ನು ತೆಲಂಗಾಣದ ವನಪರ್ತಿಯ ಜಿ ದಿನೇಶ್ (22) ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂ ನಿವಾಸಿ ನಿಕೇಶ್ (21) ಎಂದು ಗುರುತಿಸಲಾಗಿದೆ. ಮೃತ ದಿನೇಶ್ ಸ್ನೇಹಿತರು ಶನಿವಾರ ರಾತ್ರಿ ನಮಗೆ ಕರೆ ಮಾಡಿ ಅವರ ಸಾವಿನ ಬಗ್ಗೆ ತಿಳಿಸಿದರು. ಅವರು ಹೇಗೆ ಸತ್ತರು ಎಂಬ ಮಾಹಿತಿ ಲಭ್ಯವಾಗಿಲ್ಲ ಎಂದು ದಿನೇಶ್​ ಕುಟುಂಬಸ್ಥರು ಸೋಮವಾರ ತಿಳಿಸಿದ್ದಾರೆ.

    ದಿನೇಶ್ ಡಿಸೆಂಬರ್ 28, 2023 ರಂದು ಉನ್ನತ ವ್ಯಾಸಂಗಕ್ಕಾಗಿ ಯುಎಸ್‌ನ ಕನೆಕ್ಟಿಕಟ್‌ನ ಹಾರ್ಟ್‌ಫೋರ್ಡ್‌ಗೆ ಹೋಗಿದ್ದರು. ನಿಕೇಶ್ ಕೆಲವು ದಿನಗಳ ನಂತರ ತಲುಪಿದರು. ಪರಸ್ಪರ ಗೊತ್ತಿರುವ ಗೆಳೆಯರು ಇದ್ದ ಕಾರಣ ಇವರಿಬ್ಬರು ಪರಸ್ಪರ ಸ್ನೇಹಿತರಾಗಿದ್ದರು. ಅಮೆರಿಕಕ್ಕೆ ಹೋದ ನಂತರ ಒಂದೇ ರೂಂ ನಲ್ಲಿ ವಾಸ ಮಾಡುತ್ತಿದ್ದರು ಎನ್ನಲಾಗಿದೆ.

    ದಿನೇಶ್ ಅವರ ಮೃತದೇಹ ತರಲು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರ ಸಹಾಯ ಕೋರಿದ್ದೇವೆ. ವನಪರ್ತಿ ಶಾಸಕಿ ಮೇಘಾ ರೆಡ್ಡಿ ಕೂಡ ದಿನೇಶ್ ಮೃತದೇಹವನ್ನು ತರಲು ಸಹಾಯ ಮಾಡಿದ್ದಾರೆ. ಅವರು ವಿದ್ಯಾರ್ಥಿಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು ಎಂದು ಮೃತ ದಿನೇಶ್​ ಕುಟುಂಬಸ್ಥರು ಹೇಳಿದ್ದಾರೆ.

    ಅದೇ ರೀತಿ ಶ್ರೀಕಾಕುಲಂ ಜಿಲ್ಲಾಡಳಿತಕ್ಕೂ ನಿಕೇಶ್ ಬಗ್ಗೆ ಇನ್ನೂ ಮಾಹಿತಿ ಇಲ್ಲ. ನಿಕೇಶ್ ಅಥವಾ ಅವರ ಕುಟುಂಬ ಸದಸ್ಯರ ಬಗ್ಗೆ ಜಿಲ್ಲಾಧಿಕಾರಿಗಳು ಸಹ ಮಾಹಿತಿ ಪಡೆದಿಲ್ಲ ಎಂದು ಶ್ರೀಕಾಕುಲಂ ಪೊಲೀಸ್ ವಿಶೇಷ ಬ್ರಾಂಚ್ ಡಿಎಸ್ಪಿ ಕೆ ಬಾಲರಾಜು ತಿಳಿಸಿದ್ದಾರೆ.

    ವಿದ್ಯಾರ್ಥಿಗಳ ಮೃತದೇಹವನ್ನು ಅಮೇರಿಕಾದಿಂದ ಭಾರತಕ್ಕೆ ತರುವ ಕುರಿತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೊಂದಿಗೆ ಶಾಸಕರು ಮಾತನಾಡಿದ್ದಾರೆ. ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೃತದೇಹವನ್ನು ಸ್ವಗ್ರಾಮಕ್ಕೆ ತರಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

    ಬಿಗ್​ಬಾಸ್‌ ತಮಿಳು ಸೀಸನ್‌ 7; ವಿನ್ನರ್​ಗೆ ಸಿಕ್ಕ ಮೊತ್ತವೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts