More

    ಸಲಾರ್​ ಮುಂದೆ ಡಂಕಿ ಡುಮ್ಕಿ ! ಮೊದಲ ದಿನ ಶಾರುಖ್​ಗಿಂತ 120 ಕೋಟಿ ರೂ. ಹೆಚ್ಚು ಗಳಿಕೆ ಮಾಡಿಕೊಂಡ ಪ್ರಭಾಸ್​

    ಶಾರುಖ್ ಖಾನ್ ಅಭಿನಯದ, ರಾಜ್‌ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಸಿನಿಮಾ, ನಿರೀಕ್ಷಿಸಿದಂತೆಯೇ ಪ್ರಭಾಸ್, ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಪ್ಯಾನ್ ಇಂಡಿಯಾ ಚಿತ್ರ ‘ಸಲಾರ್’ ಮುಂದೆ ಮಂಕಾಗಿದೆ. ‘ಸಲಾರ್’ಗೂ ಒಂದು ದಿನ ಮುನ್ನ ಅರ್ಥಾತ್ ಗುರುವಾರವೇ ರಿಲೀಸ್ ಆದ ‘ಡಂಕಿ’ ಮೊದಲ ದಿನ ಭಾರತದಲ್ಲಿ 30 ಕೋಟಿ ರೂ. ಸೇರಿ ವಿಶ್ವಾದ್ಯಂತ 58 ಕೋಟಿ ರೂ. ಗಳಿಕೆ ಮಾಡಿಕೊಂಡಿತ್ತು. ಮತ್ತೊಂದೆಡೆ ಶುಕ್ರವಾರ ತೆರೆಗೆ ಬಂದ ‘ಸಲಾರ್’ ಮೊದಲ ದಿನದ ಗಳಿಕೆ ಭಾರತದಲ್ಲಿ 95 ಕೋಟಿ ರೂ. ಸೇರಿ ವಿಶ್ವಾದ್ಯಂತ 178 ಕೋಟಿ ರೂ. ದಾಟಿದೆ. ಆ ಮೂಲಕ ‘ಸಲಾರ್’ 2023ರಲ್ಲಿ ಮೊದಲ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿಕೊಂಡ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ.

    ಇದನ್ನೂ ಓದಿ : ಬಾಕ್ಸ್​ಆಫೀಸ್​ನಲ್ಲಿ ಮುಂದುವರೆದ ಸಲಾರ್​ ಅಬ್ಬರ; ಎರಡನೇ ದಿನ ಗಳಿಸಿದ್ದೆಷ್ಟು

    ಸಲಾರ್​ ಮುಂದೆ ಡಂಕಿ ಡುಮ್ಕಿ ! ಮೊದಲ ದಿನ ಶಾರುಖ್​ಗಿಂತ 120 ಕೋಟಿ ರೂ. ಹೆಚ್ಚು ಗಳಿಕೆ ಮಾಡಿಕೊಂಡ ಪ್ರಭಾಸ್​

    ಲಿಸಲಿಲ್ಲ ಶಾರುಖ್ ಪ್ಲ್ಯಾನ್!
    ‘ಡಂಕಿ’ ಚಿತ್ರತಂಡ ಡಿ. 22 ರಂದು ರಿಲೀಸ್ ಮಾಡುವುದಾಗಿ ಮೊದಲ ೋಷಣೆ ಮಾಡಿಕೊಂಡಿತ್ತು. ಆದರೆ, ಅದೇ ದಿನವೇ ‘ಸಲಾರ್’ ಕೂಡ ತೆರೆಗೆ ಬರುವುದಾಗಿ ಅನೌನ್ಸ್ ಮಾಡಿದ ಬೆನ್ನಲ್ಲೇ, ಶಾರುಖ್ ಮತ್ತು ತಂಡ ಒಂದು ದಿನ ಮುನ್ನ ರಿಲೀಸ್ ಮಾಡಲು ನಿರ್ಧರಿಸಿದ್ದರು. ಮಾತ್ರವಲ್ಲ ಈ ಮೊದಲು ಭಾರತದಾದ್ಯಂತ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್ ಚೈನ್‌ಗಳು ಎರಡೂ ಸ್ಟಾರ್ ಸಿನಿಮಾಗಳಿಗೆ ಸಮನಾಗಿ ಸ್ಕ್ರೀನ್‌ಗಳನ್ನು ಹಂಚುವುದಾಗಿ ನಿರ್ಧರಿಸಿದ್ದವು. ಆಗ ಐಡಿಯಾ ಮಾಡಿದ ಶಾರುಖ್ ತಾವೇ ಖುದ್ದಾಗಿ ಥಿಯೇಟರ್ ಮಾಲೀಕರ ಸಂಘಕ್ಕೆ ಕರೆ ಮಾಡಿ, ‘ಡಂಕಿ’ಗೆ ಹೆಚ್ಚು ಸ್ಕ್ರೀನ್ ನೀಡಲು ಒತ್ತಾಯಿಸಿದ್ದರಂತೆ. ಆದರೆ, ಅವರು ಅದಕ್ಕೆ ಒಪ್ಪರಿಲಿಲ್ಲ ಎನ್ನಲಾಗಿದೆ. ಬಳಿಕ ಪಿವಿಆರ್ – ಐನಾಕ್ಸ್ ಮತ್ತು ಮಿರಾಜ್ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಕರೆ ಮಾಡಿದ್ದು, ಅವರು ಶಾರುಖ್ ಒತ್ತಾಯಕ್ಕೆ ಮಣಿದು, ಹೆಚ್ಚು ಸ್ಕ್ರೀನ್ಸ್ ನೀಡಿದ್ದರು.

    ಇದನ್ನೂ ಓದಿ : ಹೊಸ ವ್ಯವಹಾರಕ್ಕೆ ಸ್ಟಾರ್​​ ನಟ ಎಂಟ್ರಿ; ISPL ಹೈದರಾಬಾದ್ ತಂಡದ ಮಾಲೀಕ ರಾಮ್ ಚರಣ್

    ಸಲಾರ್​ ಮುಂದೆ ಡಂಕಿ ಡುಮ್ಕಿ ! ಮೊದಲ ದಿನ ಶಾರುಖ್​ಗಿಂತ 120 ಕೋಟಿ ರೂ. ಹೆಚ್ಚು ಗಳಿಕೆ ಮಾಡಿಕೊಂಡ ಪ್ರಭಾಸ್​

    ಶಾರುಖ್ ವರ್ಸಸ್ ಹೊಂಬಾಳೆ ಮೊದಲೇನಲ್ಲ!
    ‘ಸಲಾರ್’ ಮತ್ತು ‘ಡಂಕಿ’ ಚಿತ್ರಗಳ ಮೂಲಕ ಹೊಂಬಾಳೆ ಫಿಲಂಸ್ ಮತ್ತು ಶಾರುಖ್ ಖಾನ್ ಮುಖಾಮುಖಿಯಾಗಿದ್ದಾರೆ. ಹಾಗಂತ ಬಾಕ್ಸಾಫೀಸಿನಲ್ಲಿ ಇವರು ಜಿದ್ದಾಜಿದ್ದಿಗೆ ಬಿದ್ದಿರುವುದು ಇದೇ ಮೊದಲೇನಲ್ಲ. 2018ರಲ್ಲಿ ಯಶ್, ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಕಾಂಬಿನೇಷನ್‌ನಲ್ಲಿ ‘ಕೆಜಿಎ್ ಚಾಪ್ಟರ್ 1’ ಮತ್ತು ಶಾರುಖ್ ಖಾನ್ ನಟಿಸಿದ್ದ ‘ಜೀರೋ’ ಚಿತ್ರಗಳೂ ಸಹ ಬಾಕ್ಸಾಫೀಸಿನಲ್ಲಿ ವಾರ್ ನಡೆಸಿದ್ದವು. ಆಗಲೂ ಹೊಂಬಾಳೆ ಗೆಲುವಿನ ನಗು ಬೀರಿತ್ತು.

    ಸಲಾರ್​ ಮುಂದೆ ಡಂಕಿ ಡುಮ್ಕಿ ! ಮೊದಲ ದಿನ ಶಾರುಖ್​ಗಿಂತ 120 ಕೋಟಿ ರೂ. ಹೆಚ್ಚು ಗಳಿಕೆ ಮಾಡಿಕೊಂಡ ಪ್ರಭಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts