More

    ಕೆಸಿಸಿ ಕಪ್​​ನಲ್ಲಿ ಭರ್ಜರಿ ಕ್ರಿಕೆಟ್ಟು, ಕಿರಿಕ್ಕು… ಮೊದಲ ದಿನ ಗೆದ್ದವರ್ಯಾರು? ಸೋತವರ್ಯಾರು?

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಕನ್ನಡ ಚಲನಚಿತ್ರ ಕಪ್ 4ನೇ ಆವೃತ್ತಿಗೆ ಶನಿವಾರ ಅದ್ದೂರಿ ಚಾಲನೆ ದೊರೆತಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ವಿಜಯವಾಣಿ ಸಹಯೋಗದೊಂದಿಗೆ ಕೆಸಿಸಿ ಕಪ್ ಆಯೋಜಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಅರ್ಜುನ್ ಜನ್ಯ ಸಂಗೀತದ ಜತೆಗೆ 40 ಅಡಿ ಎತ್ತರದ ಕೆಸಿಸಿ ಟ್ರೋಫಿ ಪ್ರತಿಕೃತಿಯನ್ನು ಪ್ರದರ್ಶಿಸಲಾಯಿತು. ಗಂಗಾ ವಾರಿಯರ್ಸ್, ಕದಂಬ ಲಯನ್ಸ್, ಒಡೆಯರ್ ಚಾರ್ಜರ್ಸ್, ಹೊಯ್ಸಳ ಈಗಲ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ ಮತ್ತು ವಿಜಯನಗರ ಪೇಟ್ರಿಯಟ್ಸ್ ತಂಡಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಪ್‌ಗಾಗಿ ಸ್ಪರ್ಧಿಸುತ್ತಿವೆ. ಮೊದಲ ದಿನವೇ ಕ್ರಿಕೆಟ್ ಮೈದಾನದಲ್ಲಿ ಸ್ಟಾರ್ ವಾರ್ ಭರ್ಜರಿಯಾಗಿ ನಡೆದಿದ್ದು, ಪ್ರೇಕ್ಷಕರಿಗೆ ಭರ್ಜರಿ ಮನರಂಜನೆಯ ಸವಿಯೂಟ ನೀಡಿದೆ.

    ಇದನ್ನೂ ಓದಿ : ಹೌದು ಇದು ಮೊಬೈಲ್​ ಚಾರ್ಜರ್ರೇ ಆದ್ರೆ… ಸತ್ಯ ಒಪ್ಕೊಂಡ ಮೈಕಲ್​, ಯಾರಪ್ಪ ಆ ಭಗವಂತ ಅಂದ್ರು ವಿನಯ್!​

    ಕೆಸಿಸಿ ಕಪ್​​ನಲ್ಲಿ ಭರ್ಜರಿ ಕ್ರಿಕೆಟ್ಟು, ಕಿರಿಕ್ಕು... ಮೊದಲ ದಿನ ಗೆದ್ದವರ್ಯಾರು? ಸೋತವರ್ಯಾರು?

    ಗಂಗಾ ವಾರಿಯರ್ಸ್‌ಗೆ ಡಬಲ್ ಧಮಾಕಾ
    ಮೊದಲ ದಿನದ ಮೊದಲ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ಹಾಗೂ ಒಡೆಯರ್ ಚಾರ್ಜರ್ಸ್ ಮುಖಾಮುಖಿಯಾಗಿದ್ದು, ಗಂಗಾ ವಾರಿಯರ್ಸ್ ಗೆದ್ದು ಬೀಗಿದೆ. ಒಡೆಯರ್ ಚಾರ್ಜರ್ಸ್ ವಿರುದ್ಧ ಗಂಗಾ ವಾರಿಯರ್ಸ್ 10 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 106 ರನ್ ಗಳಿಸಿತು. ಅದಕ್ಕೆ ಉತ್ತರವಾಗಿ ಒಡೆಯರ್ ಚಾರ್ಜರ್ಸ್ ಕೇವಲ 89 ರನ್ ಗಳಿಸಲಷ್ಟೇ ಶಕ್ತವಾಯಿತು. ನಂತರ ರಾಷ್ಟ್ರಕೂಟ ಪ್ಯಾಂಥರ್ಸ್ ಮತ್ತು ಹೊಯ್ಸಳ ಈಗಲ್ಸ್ ನಡುವಿನ ಪಂದ್ಯದಲ್ಲಿ ಶಿವರಾಜಕುಮಾರ್ ಹಾಗೂ ಸುದೀಪ್ ಮುಖಾಮುಖಿಯಾದರು. ಮೊದಲು ಬ್ಯಾಟಿಂಗ್ ಮಾಡಿದ ಪ್ಯಾಂಥರ್ಸ್ 10 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 100 ರನ್ ಗಳಿಸಿತು. ಸರಳ ಸ್ಕೋರ್ ಬೆನ್ನತ್ತಿದ ಈಗಲ್ಸ್ ಕೇವಲ 79 ರನ್ ಗಳಿಸುವ ಮೂಲಕ, ಪ್ಯಾಂಥರ್ಸ್‌ಗೆ ಶರಣಾಯಿತು. ಮೂರನೇ ಪಂದ್ಯದಲ್ಲಿ ವಿಜಯನಗರ ಪೇಟ್ರಿಯಟ್ಸ್ ವಿರುದ್ಧ ಟಾಸ್ ಸೋತು ಮೊದಲ ಬ್ಯಾಟಿಂಗ್‌ಗಿಳಿದ ಕದಂಬ ಲಯನ್ಸ್ ಪರ ರಾಬಿನ್ ಉತ್ತಪ್ಪ ಮತ್ತು ಕ್ಯಾಪ್ಟನ್ ರಾಜೀವ್ ಬಿರುಸಿನ ಆಟವಾಡಿ ಮೊದಲ ವಿಕೆಟ್‌ಗೆ 114 ರನ್ ಸೇರಿಸಿದರು. ಕೇವಲ 1 ವಿಕೆಟ್‌ಗೆ ಲಯನ್ಸ್ ಬೃಹತ್ 174 ರನ್ ಪೇರಿಸಿದರು. ಅದಕ್ಕೆ ಉತ್ತರವಾಗಿ ಪೇಟ್ರಿಯಟ್ಸ್ 94 ರನ್ ಗಳಿಸಲಷ್ಟೇ ಶಕ್ತವಾದರು. ದಿನದ ನಾಲ್ಕನೇ ಪಂದ್ಯದಲ್ಲಿ ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಬ್ಯಾಟಿಂಗ್ ಇಳಿದ ಗಂಗಾ ವಾರಿಯರ್ಸ್ 2 ವಿಕೆಟ್‌ಗೆ 137 ರನ್ ಗಳಿಸಿದರು. ಅದಕ್ಕೆ ಉತ್ತರವಾಗಿ ಪ್ಯಾಂಥರ್ಸ್ 91 ರನ್ ಗಳಿಸಿ ಸೋಲೊಪ್ಪಿಕೊಂಡರು. ಐದನೇ ಪಂದ್ಯದಲ್ಲಿ ಟಾಸ್ ಗೆದ್ದ ಕದಂಬ ಲಯನ್ಸ್ ಬೌಲಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಮಾಡಿದ ಒಡೆಯರ್ ಚಾರ್ಜರ್ಸ್ 10 ಓವರ್‌ಗಳಲ್ಲಿ 6 ವಿಕೆಟ್‌ಗೆ 109 ರನ್ ಗಳಿಸಿದರು.

    ಇದನ್ನೂ ಓದಿ : ಜನಪ್ರಿಯ ತಮಿಳು ಹಾಸ್ಯನಟ ಬೋಂಡಾ ಮಣಿ ಮೃತ್ಯು

    ಕೆಸಿಸಿ ಕಪ್​​ನಲ್ಲಿ ಭರ್ಜರಿ ಕ್ರಿಕೆಟ್ಟು, ಕಿರಿಕ್ಕು... ಮೊದಲ ದಿನ ಗೆದ್ದವರ್ಯಾರು? ಸೋತವರ್ಯಾರು?

    ತಂಡಗಳು ಫಲಿತಾಂಶ

    • ಗಂಗಾ ವಾರಿಯರ್ಸ್ – ಒಡೆಯರ್ ಚಾರ್ಜರ್ಸ್ ಗಂಗಾ ವಾರಿಯರ್ಸ್
    • ಹೊಯ್ಸಳ ಈಗಲ್ಸ್ – ರಾಷ್ಟ್ರಕೂಟ ಪ್ಯಾಂಥರ್ಸ್ ರಾಷ್ಟ್ರಕೂಟ ಪ್ಯಾಂಥರ್ಸ್
    • ವಿಜಯನಗರ ಪೇಟ್ರಿಯಾಟ್ಸ್ – ಕದಂಬ ಲಯನ್ಸ್ ಕದಂಬ ಲಯನ್ಸ್
    • ರಾಷ್ಟ್ರಕೂಟ ಪ್ಯಾಂಥರ್ಸ್ – ಗಂಗಾ ವಾರಿಯರ್ಸ್ ಗಂಗಾ ವಾರಿಯರ್ಸ್
    • ಒಡೆಯರ್ ಚಾರ್ಜರ್ಸ್ – ಕದಂಬ ಲಯನ್ಸ್

    ಇದನ್ನೂ ಓದಿ : ಬಾಕ್ಸ್​ಆಫೀಸ್​ನಲ್ಲಿ ಮುಂದುವರೆದ ಸಲಾರ್​ ಅಬ್ಬರ; ಎರಡನೇ ದಿನ ಗಳಿಸಿದ್ದೆಷ್ಟು

    ಕೆಸಿಸಿ ಕಪ್​​ನಲ್ಲಿ ಭರ್ಜರಿ ಕ್ರಿಕೆಟ್ಟು, ಕಿರಿಕ್ಕು... ಮೊದಲ ದಿನ ಗೆದ್ದವರ್ಯಾರು? ಸೋತವರ್ಯಾರು?

    ಇಂದಿನ ಪಂದ್ಯಗಳು

    • ಗಂಗಾ ವಾರಿಯರ್ಸ್ – ಕದಂಬ ಲಯನ್ಸ್
    • ಒಡೆಯರ್ ಚಾರ್ಜರ್ಸ್ – ಹೊಯ್ಸಳ ಈಗಲ್ಸ್
    • ರಾಷ್ಟ್ರಕೂಟ ಪ್ಯಾಂಥರ್ಸ್ – ವಿಜಯನಗರ ಪೇಟ್ರಿಯಟ್ಸ್
    • ಕದಂಬ ಲಯನ್ಸ್ – ಹೊಯ್ಸಳ ಈಗಲ್ಸ್
    • ರಾಷ್ಟ್ರಕೂಟ ಪ್ಯಾಂಥರ್ಸ್ – ಒಡೆಯರ್ ಚಾರ್ಜರ್ಸ್
    • ವಿಜಯನಗರ ಪೇಟ್ರಿಯಟ್ಸ್ – ಗಂಗಾ ವಾರಿಯರ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts