ಜನಪ್ರಿಯ ತಮಿಳು ಹಾಸ್ಯನಟ ಬೋಂಡಾ ಮಣಿ ಮೃತ್ಯು

bondamani
Published on

ಚೆನ್ನೈ: ಜನಪ್ರಿಯ ಹಾಸ್ಯನಟ ಬೋಂಡಾ ಮಣಿ ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಡಿ.23ರಂದು ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಇತ್ತೀಚೆಗೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ನಟ ಬೋಂಡಾಮಣಿ ಅವರು ಪೊಜಿಚಲೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮೂರ್ಛೆ ಹೋಗಿದ್ದರು. ಬಳಿಕ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆದಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು ಎನ್ನಲಾಗಿದೆ.

ಬೋಂಡಾ ಮಣಿ ಅವರ ಪಾರ್ಥಿವ ಶರೀರವನ್ನು ಪೊಜಿಚಲೂರಿಯ ಅವರ ನಿವಾಸದಲ್ಲಿ ಇರಿಸಲಾಗಿದೆ. ಸಂಜೆ 5ರ ಸುಮಾರಿಗೆ ಕ್ರೋಂಪೇಟೆಯಲ್ಲಿರುವ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿವೆ ಎಂದು ಕುಟುಂಬಸ್ಥರು ಮಾಹಿತಿ ಹಂಚಿಕೊಂಡಿದ್ದಾರೆ.

ನಟ ಧನುಷ್ ಮತ್ತು ವಿಜಯ್ ಸೇತುಪತಿ ಅವರು ಬೋಂಡಾ ಮಣಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಆರ್ಥಿಕವಾಗಿ ಸಹಾಯ ಮಾಡಿದ್ದರು. ಬೋಂಡಾ ಮಣಿ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟ. ಅವರು 270 ಚಿತ್ರಗಳಲ್ಲಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಭಾಗ್ಯರಾಜ್ ಅವರ ‘ಪಾವುನ್ನು ಪಾವುನುಧಾನ್’ ಚಿತ್ರದ ಮೂಲಕ ಪರಿಚಯವಾದ ಅವರು ‘ಪೊನ್ವಿಲಾಂಗು’, ‘ಪೊಂಗಲೋ ಪೊಂಗಲ್’, ‘ಸುಂದರ ಟ್ರಾವೆಲ್ಸ್’, ‘ಮರುದಮಲೈ’, ‘ವಿನ್ನರ್‌’, ‘ವೇಲಾಯುಧಂ’ ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿದರು. ಬೋಂಡಾ ಮಣಿ ಅವರ ನಿಧನಕ್ಕೆ ಅವರ ಫ್ಯಾನ್ಸ್‌ ಸೇರಿದಂತೆ ಸಿನಿ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net