More

    KCC 4 : ಎರಡನೇ ದಿನ ಡಬಲ್ ಥ್ರಿಲ್ ; ವಾರಿಯರ್ಸ್, ಲಯನ್ಸ್‌ಗೆ ಹ್ಯಾಟ್ರಿಕ್ ಗೆಲುವು

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಕನ್ನಡ ಚಲನಚಿತ್ರ ಕಪ್ 4ನೇ ಅವೃತ್ತಿ ಶನಿವಾರದಿಂದ (ಡಿ. 23) ಆರಂಭವಾಗಿವೆ. ವಿಜಯವಾಣಿ ಸಹಯೋಗದೊಂದಿಗೆ ಮೂರು ದಿನಗಳ ಸ್ಟಾರ್‌ಗಳ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮೊದಲ ದಿನ ಆರು ಪಂದ್ಯಗಳು ನಡೆದಿದ್ದು, ಗಂಗಾ ವಾರಿಯರ್ಸ್ ಮತ್ತು ಕದಂಬ ಲಯನ್ಸ್ ತಲಾ ಎರಡು ಪಂದ್ಯಗಳನ್ನು ಗೆದ್ದು ಬೀಗಿದ್ದವು. ಜತೆಗೆ ಭಾನವಾರವೂ ತಲಾ ಒಂದೊಂದು ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಕೆಸಿಸಿ 4 ಕಪ್ ಗೆಲ್ಲುವ ೇವರಿಟ್ ಎನಿಸಿಕೊಂಡಿವೆ.

    ಇದನ್ನೂ ಓದಿ : ದುಬೈನಲ್ಲಿ ಪ್ರೇಮ್, ಭಾವನಾ ; ‘ಪಿಂಕ್ ನೋಟ್’ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾದ ಜೋಡಿ

    KCC 4 : ಎರಡನೇ ದಿನ ಡಬಲ್ ಥ್ರಿಲ್ ; ವಾರಿಯರ್ಸ್, ಲಯನ್ಸ್‌ಗೆ ಹ್ಯಾಟ್ರಿಕ್ ಗೆಲುವು

    ರನ್ ಮಳೆ ಹರಿಸಿದ ಬ್ಯಾಟರ್‌ಗಳು:
    ಎರಡನೇ ದಿನ ಕೂಡ ಆರು ಪಂದ್ಯಗಳು ನಡೆದವು. ಮೊದಲ ಪಂದ್ಯದಲ್ಲಿ ಮೊದಲ ದಿನದ ಚಾಂಪಿಯನ್‌ಗಳಾದ ಕದಂಬ ಲಯನ್ಸ್ ಹಾಗೂ ಗಂಗಾ ವಾರಿಯರ್ಸ್ ಮುಖಾಮುಖಿಯಾದವು. ಮೊದಲು ಬ್ಯಾಟಿಂಗ್ ಮಾಡಿದ ಗಂಗಾ ವಾರಿಯರ್ಸ್ ಪರ ಅದ್ಭುಟ ಬ್ಯಾಟಿಂಗ್ ಮಾಡಿದ ಮುರಳಿ ವಿಜಯ್ 74 (31) ರನ್ ಸಹಾಯದಿಂದ ತಂಡ 110 ರನ್ ಕಲೆಹಾಕಿತು. ಅದನ್ನು ಬೆನ್ನತ್ತಿದ ಕದಂಬ ಲಯನ್ಸ್ 10 ಓವರ್‌ಗಳಲ್ಲಿ 76 ರನ್ ಗಳಿಸಿ, ಗಂಗಾ ವಾರಿಯರ್ಸ್ ವಿರುದ್ಧ 34ರನ್‌ಗಳ ಸೋಲೊಪ್ಪಿಕೊಂಡರು. ಎರಡನೇ ಪಂದ್ಯದಲ್ಲಿ ಒಡೆಯರ್ ಚಾರ್ಜರ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಹೊಯ್ಸಳ ಈಗಲ್ಸ್ 166 ರನ್ ಪೇರಿಸಿದರು. ಆರಂಭಿಕ ಬ್ಯಾಟರ್ ತಿಲಕರತ್ನೆ ದಿಲ್ಶಾನ್ ಸ್ಫೋಟಕ ಶತಕ ಬಾರಿಸಿ ಅಜೇಯ 101 ರನ್‌ಗಳಿಸಿದರೆ, ಡಾರ್ಲಿಂಗ್ ಕೃಷ್ಣ ಅಜೇಯ 57 ರನ್ ಬಾರಿಸಿ ಸಾಥ್ ನೀಡಿದರು. ಬೃಹತ್ ಟಾರ್ಗೆಟ್ ಚೇಸ್ ಮಾಡಿದ ಒಡೆಯರ್ ಚಾರ್ಜರ್ಸ್‌ಅನ್ನು 110 ರನ್‌ಗಳಿಗೆ ಕಡಿವಾಣ ಹಾಕಿ ಹೊಯ್ಸಳ ಈಗಲ್ಸ್ 56 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮೂರನೇ ಪಂದ್ಯದಲ್ಲಿ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ವಿಜಯನಗರ ಪೇಟ್ರಿಯಟ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪೇಟ್ರಿಯಟ್ಸ್ ಮೊದಲು ಬ್ಯಾಟಿಂಗ್‌ಗೆ ಇಳಿದರು. ಪ್ಯಾಂಥರ್ಸ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಪೇಟ್ರಿಯಟ್ಸ್ 8 ವಿಕೆಟ್ ನಷ್ಟಕ್ಕೆ ಕೇವಲ 73 ರನ್‌ಗಳಿಸಿದರು. ಚೇಸ್ ಮಾಡಿದ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡದ ಓಪನರ್‌ಗಳಾದ ಸುರೇಶ್ ರೈನಾ ಮತ್ತು ಪ್ರದೀಪ್ ಇಬ್ಬರೇ ತಂಡವನ್ನು ಗೆಲುವಿನ ದಡ ಸೇರಿಸಿದರು. ನಾಲ್ಕನೇ ಪಂದ್ಯದಲ್ಲಿ ಕದಂಬ ಲಯನ್ಸ್ ವಿರುದ್ಧ ಟಾಸ್ ಗೆದ್ದ ಹೊಯ್ಸಳ ಈಗಲ್ಸ್ ಬೌಲಿಂಗ್ ಆಯ್ದುಕೊಂಡರು. ರಾಬಿನ್ ಉತ್ತಪ್ಪ ಬಿರುಸಿನ 79 ರನ್ ಗಳಿಸುವ ಮೂಲಕ ತಂಡಕ್ಕೆ ಓಪನಿಂಗ್ ನೀಡಿದರು. ಲಯನ್ಸ್ 2 ವಿಕೆಟ್ ನಷ್ಟಕ್ಕೆ 142 ರನ್ ಕಲೆಹಾಕಿತು. ನಂತರ ಬ್ಯಾಟಿಂಗ್‌ಗೆ ಇಳಿದ ಈಗಲ್ಸ್‌ಗೆ ಲಯನ್ಸ್ ಪರ ಚಂದನ್ ಮಾರಕ ಬೌಲಿಂಗ್ ಮೂಲಕ ಕಾಡಿದರು. ಕೇವಲ 4 ರನ್ ನೀಡಿ ಐದು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು. ಐದನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಒಡೆಯರ್ ಚಾರ್ಜರ್ಸ್, ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧ 4 ವಿಕೆಟ್ ನಷ್ಟಕ್ಕೆ 91 ಸ್ಕೋರ್ ಮಾಡಿತು. ಸರಳ ಗುರಿ ಬೆನ್ನತ್ತಿದ ರಾಷ್ಟ್ರಕೂಟ ಪ್ಯಾಂಥರ್ಸ್ 7.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 92 ರನ್ ಬಾರಿಸಿ ಗೆದ್ದು ಬೀಗಿತು.

    ಇದನ್ನೂ ಓದಿ : ಅನಿಮಲ್ ಒಟಿಟಿ ಬಿಡುಗಡೆ?: ನಿರ್ದೇಶಕರು ಆ ಶಾಟ್‌ಗಳನ್ನು ಸೇರಿಸುತ್ತಿರುವುದು ಏಕೆ?

    KCC 4 : ಎರಡನೇ ದಿನ ಡಬಲ್ ಥ್ರಿಲ್ ; ವಾರಿಯರ್ಸ್, ಲಯನ್ಸ್‌ಗೆ ಹ್ಯಾಟ್ರಿಕ್ ಗೆಲುವು

    ಮೈದಾನಕ್ಕೆ ನುಗ್ಗಿದ ಅಭಿಮಾನಿ:
    ಕ್ರಿಕೆಟ್ ಪಂದ್ಯಗಳಲ್ಲಿ ಅಭಿಮಾನಿಗಳು ಮೈದಾನಕ್ಕೆ ನುಗ್ಗುವುದು ಆಗಾಗ ಕಾಣಬಹುದು. ಇಂತಹದೊಂದು ಘಟನೆಗೆ ಕೆಸಿಸಿ ಕೂಡ ಸಾಕ್ಷಿಯಾಯಿತು. ಸುದೀಪ್ ಅಭಿಮಾನಿಯೊಬ್ಬ ಬೇಲಿ ಹಾರಿ ಮೈದಾನಕ್ಕೆ ನುಗ್ಗಿ ಸುದೀಪ್ ಜತೆ ೆಟೋ ತೆಗೆಸಿಕೊಂಡ ಘಟನೆ ಎರಡನೇ ದಿನ ಕಂಡುಬಂತು.

    ಇದನ್ನೂ ಓದಿ : ಬಿಗ್​ಬಾಸ್​ ವಿಜೇತ, ರೈತ ಪಲ್ಲವಿ ಪ್ರಶಾಂತ್​ಗೆ ಶಾಕ್​ ಕೊಟ್ಟ ನ್ಯಾಯಾಲಯ!

    KCC 4 : ಎರಡನೇ ದಿನ ಡಬಲ್ ಥ್ರಿಲ್ ; ವಾರಿಯರ್ಸ್, ಲಯನ್ಸ್‌ಗೆ ಹ್ಯಾಟ್ರಿಕ್ ಗೆಲುವು

    ಕೆಸಿಸಿ ಸಮಾರೋಪ:
    ಮೂರು ದಿನಗಳ ಅದ್ದೂರಿ ಕ್ರಿಕೆಟ್ ಪಂದ್ಯಾವಳಿ ಇಂದು ಕೊನೆಯ ಹಂತ ತಲುಪಿದೆ. ಈವರೆಗೆ ಪ್ರತಿ ಆರು ತಂಡಗಳೂ ತಲಾ ಐದು ಪಂದ್ಯಗಳನ್ನಾಡಿದ್ದು, ಸಿನಿ ಪ್ರೇಕ್ಷಕರಿಗೆ ಈ ಬಾರಿ ಕ್ರಿಕೆಟ್ ಮೂಲಕ ಭರ್ಜರಿ ಮನರಂಜನೆ ನೀಡಲಾಗಿದೆ. ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಹಲವು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

    ಇದನ್ನೂ ಓದಿ : ಪತ್ನಿ ಸ್ಪಂದನಾ ಒಡವೆ, ಬಟ್ಟೆಗಳನ್ನು ಬೇರೆಯವರಿಗೆ ಕೊಟ್ಟುಬಿಟ್ರಾ? ವಿಜಯ್​ ರಾಘವೇಂದ್ರ ಭಾವುಕ ಮಾತು

    KCC 4 : ಎರಡನೇ ದಿನ ಡಬಲ್ ಥ್ರಿಲ್ ; ವಾರಿಯರ್ಸ್, ಲಯನ್ಸ್‌ಗೆ ಹ್ಯಾಟ್ರಿಕ್ ಗೆಲುವು

    ಪಂದ್ಯ ವಿಜೇತರು
    ಗಂಗಾ ವಾರಿಯರ್ಸ್- ಕದಂಬ ಲಯನ್ಸ್ ಗಂಗಾ ವಾರಿಯರ್ಸ್
    ಹೊಯ್ಸಳ ಈಗಲ್ಸ್- ಒಡೆಯರ್ ಚಾರ್ಜರ್ಸ್ ಹೊಯ್ಸಳ ಈಗಲ್ಸ್
    ರಾಷ್ಟ್ರಕೂಟ ಪ್ಯಾಂಥರ್ಸ್- ವಿಜಯನಗರ ಪೇಟ್ರಿಯಟ್ಸ್ ರಾಷ್ಟ್ರಕೂಟ ಪ್ಯಾಂಥರ್ಸ್
    ಕದಂಬ ಲಯನ್ಸ್- ಹೊಯ್ಸಳ ಈಗಲ್ಸ್ ಕದಂಬ ಲಯನ್ಸ್
    ರಾಷ್ಟ್ರಕೂಟ ಪ್ಯಾಂಥರ್ಸ್- ಒಡೆಯರ್ ಚಾರ್ಜರ್ಸ್ ರಾಷ್ಟ್ರಕೂಟ ಪ್ಯಾಂಥರ್ಸ್

    ಇದನ್ನೂ ಓದಿ : ತನಗಿಂತ 22 ವರ್ಷ ಕಿರಿಯ ಯುವತಿಯನ್ನು ವರಿಸಿದ ಅರ್ಬಾಜ್​ ಖಾನ್​! ಶುಭಕೋರಿದ ಪುತ್ರ ಅರ್ಹಾನ್​

    KCC 4 : ಎರಡನೇ ದಿನ ಡಬಲ್ ಥ್ರಿಲ್ ; ವಾರಿಯರ್ಸ್, ಲಯನ್ಸ್‌ಗೆ ಹ್ಯಾಟ್ರಿಕ್ ಗೆಲುವು

    ಇಂದಿನ ಪಂದ್ಯಗಳು:
    ಗಂಗಾ ವಾರಿಯರ್ಸ್- ಹೊಯ್ಸಳ ಈಗಲ್ಸ್
    ವಿಜಯನಗರ ಪೇಟ್ರಿಯಟ್ಸ್- ಒಡೆಯರ್ ಚಾರ್ಜರ್ಸ್
    ಕದಂಬ ಲಯನ್ಸ್-ರಾಷ್ಟ್ರಕೂಟ ಪ್ಯಾಂಥರ್ಸ್
    ಫೈನಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts