More

    ಬಾಕ್ಸ್​ಆಫೀಸ್​ನಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದ ಪ್ರಶಾಂತ್​ ನೀಲ್; 500 ಕೋಟಿ ರೂ. ಕ್ಲಬ್​ ಸೇರಿದ ಸಲಾರ್​!

    ಬೆಂಗಳೂರು: ಯಂಗ್​ ರೆಬೆಲ್​​ ಸ್ಟಾರ್​, ಡಾರ್ಲಿಂಗ್​ ಪ್ರಭಾಸ್​ ನಟನೆಯ, ಪ್ರಶಾಂತ್​ ನೀಲ್​ ನಿರ್ದೇಶನದ ಬಹುನಿರೀಕ್ಷಿತ ಸಲಾರ್​ ಚಿತ್ರ ಶುಕ್ರವಾರ (ಡಿಸೆಂಬರ್ 22) ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರಕ್ಕೆ ಪಾಸಿಟಿವ್​ ರೆಸ್ಪಾನ್ಸ್​ ದೊರೆತ್ತಿದ್ದು, ಬಾಕ್ಸ್​ಆಫೀಸ್​ ಗಳಿಕೆಯಲ್ಲಿ ಚಿತ್ರ ಹಿಂದೆ ಬಿದ್ದಂತೆ ಕಾಣುತ್ತಿಲ್ಲ.

    ಪ್ರಭಾಸ್​ ಕಮ್​ಬ್ಯಾಕ್​ ಸಿನಿಮಾ ಎಂದೇ ಹೇಳಲಾಗಿರುವ ಸಲಾರ್​ ಚಿತ್ರ ಬಿಡುಗಡೆಯಾದ ಎಂಟನೇ ದಿನಕ್ಕೆ 300 ಕೋಟಿ ಕ್ಲಬ್​ ಸೇರಿದ್ದು, ಬಾಕ್ಸ್ ಆಫೀಸ್ ವಿಜೇತರಾಗಿ ಚಿತ್ರ ಹೊರಹೊಮ್ಮಿದೆ. ವಿಶ್ವದಾದ್ಯಂತ ಚಿತ್ರ 500 ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ ಪ್ರಶಾಂತ್​ ನೀಲ್​ ನಿರ್ದೇಶನದ ಮತ್ತೊಂದು ಚಿತ್ರ 500 ಕೋಟಿ ರೂ. ಕ್ಲಬ್​ ಸೇರಿದೆ.

    ಜಗತ್ತಿನಾದ್ಯಂತ ಸಲಾರ್ ಸಿನಿಮಾ ಸುಮಾರು 500 ಕೋಟಿಗೂ ಹೆಚ್ಚು ಕೆಲೆಕ್ಷನ್ ಮಾಡಿದ್ದರೆ ಭಾರತದಲ್ಲೇ ಸುಮಾರು 300 ಕೋಟಿ ರೂ. ಗಳಿಸಿದೆ ಎನ್ನಲಾಗಿದೆ. ಈ ಮೂಲಕ ಕನ್ನಡಿಗರ ತೆಲುಗು ಸಿನಿಮಾ, ಭರ್ಜರಿಯಾಗಿ ಗಳಿಕೆ ಮಾಡುತ್ತಿದೆ. ಮತ್ತೊಂದು ಕಡೆ ಸಾಲು ಸಾಲು ಸೋಲಿನಿಂದ ಕಂಗೆಟ್ಟಿದ್ದ ಪ್ರಭಾಸ್ಗೆ ಈ ಸಿನಿಮಾ ದೊಡ್ಡ ಬ್ರೇಕ್ ನೀಡಿದೆ. ಹೀಗೆ ಸಲಾರ್ ಗೆಲುವಿನ ಬೆನ್ನಲ್ಲೇ ನಟ ಪ್ರಭಾಸ್ ಅವರು ಮುಂದಿನ ಸಿನಿಮಾಗೆ ಸಜ್ಜಾಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts