

ಮುಂಬೈ: ಖ್ಯಾತ ಸಂಗೀತ ಸಂಯೋಜಕ ಎಆರ್ ರೆಹಮಾನ್(AR Rahman) ಮತ್ತು ಅವರ ಪತ್ನಿ ಸಾಯಿರಾ ಬಾನು ತಮ್ಮ 29 ವರ್ಷದ ದಾಂಪತ್ಯ ಜೀವನದಿಂದ ಬೇರ್ಪಡುತ್ತಿರುವುದಾಗಿ ಇತ್ತೀಚೆಗೆ ಘೋಷಿಸಿದರು. ಎಆರ್ ರೆಹಮಾನ್ ಅವರು ತಮ್ಮ ಪತ್ನಿಯಿಂದ ಬೇರ್ಪಡುವುದಾಗಿ ಘೋಷಿಸಿದ ದಿನವೇ ಅವರ ತಂಡದ ಮೋಹಿನಿ ಡೇ ಕೂಡ ತಮ್ಮ ಪತಿಯಿಂದ ಬೇರ್ಪಡುವುದಾಗಿ ಘೋಷಿಸಿದರು. ಇದರ ನಂತರ ಸಾಮಾಜಿಕ ಜಾಲತಾಣದಲ್ಲಿ ಎಆರ್ ರೆಹಮಾನ್ ಮತ್ತು ಮೋಹಿನಿ ಡೇ ಮದುವೆಯಾಗುತ್ತಾರಾ ಎಂಬ ಸುದ್ದಿ ಹರಿದಾಡುತಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ರೆಹಮಾನ್ ಮತ್ತು ಅವರ ಮಕ್ಕಳು ಪ್ರತಿಕ್ರಿಯಿಸಿದ್ದರು. ರೆಹಮಾನ್, ಮಾನಹಾನಿ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದರು. ಈ ವದಂತಿಗೆ ಇದೀಗ ರೆಹಮಾನ್ ಪತ್ನಿ ಸಾಯಿರಾ ಬಾನು ಪ್ರತಿಕ್ರಿಯಿಸಿದ್ದಾರೆ. ರೆಹಮಾನ್ ವಿರುದ್ಧದ ಸುಳ್ಳು ಪ್ರಚಾರಗಳನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ.
ತಮ್ಮ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿದ ಐದು ದಿನಗಳ ಬಳಿಕ ಸಾಯಿರಾ ಬಾನು ಮೊದಲ ಬಾರಿಗೆ ತಮ್ಮ ಸಂದೇಶವನ್ನು ಕಳುಹಿಸಿದ್ದಾರೆ. ರೆಹಮಾನ್ ಅವರ ಇಮೇಜ್ ಹಾಳು ಮಾಡಬೇಡಿ ಎಂದು ಎಲ್ಲರಿಗೂ ಮನವಿ ಮಾಡಿದ್ದಾರೆ. ರೆಹಮಾನ್ ಮತ್ತು ಅವರ ಕುಟುಂಬವನ್ನು ನೋಯಿಸದಂತೆ ಯೂಟ್ಯೂಬರ್‌ಗಳು ಮತ್ತು ಮಾಧ್ಯಮಗಳನ್ನು ವಿನಂತಿಸಿದ್ದಾರೆ. ಇದೇ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆಯೂ ಮಾತನಾಡಿದ್ದಾರೆ.
ನಾನು ಸಾಯಿರಾ ರೆಹಮಾನ್ ಪ್ರಸ್ತುತ ಮುಂಬೈನಲ್ಲಿದ್ದೇನೆ. ಕಳೆದ ಹಲವು ತಿಂಗಳುಗಳಿಂದ ನಾನು ಇಲ್ಲಿದ್ದೇನೆ.ನನ್ನ ಆರೋಗ್ಯದ ಸಮಸ್ಯೆಯಿಂದ ನಾನು ಚೆನ್ನೈಗೆ ಹೋಗಲು ಸಾಧ್ಯವಾಗಲಿಲ್ಲ. ನಾನು ಚೆನ್ನೈನಲ್ಲಿ ಇರದಿದ್ದರೆ ಸಾಯಿರಾ ಎಲ್ಲಿದ್ದಾಳೆ ಎಂದು ಜನರು ಆಶ್ಚರ್ಯ ಪಡುತ್ತಾರೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸುತ್ತಿದ್ದೇನೆ.ಅಲ್ಲದೆ ಎಆರ್ ರೆಹಮಾನ್ ಅವರು ವಿಶ್ವದ ಅತ್ಯುತ್ತಮ ವ್ಯಕ್ತಿ ಎಂದು ಹೊಗಳಿದ್ದಾರೆ.
ಈ ಕಷ್ಟದ ಸಮಯದಲ್ಲಿ ಇಬ್ಬರ ಗೌಪ್ಯತೆಯನ್ನು ಗೌರವಿಸಿ. ರೆಹಮಾನ್ ಮತ್ತು ತಾನು ಇನ್ನೂ ಪ್ರೀತಿಸುತ್ತಿದ್ದೇವೆ ಮತ್ತು ಅವರ ನಿರ್ಧಾರವು 100 ಪ್ರತಿಶತ ಪರಸ್ಪರ ಎಂದು ಹೇಳಿದರು. ಅವರು ಒಳ್ಳೆಯ ವ್ಯಕ್ತಿ. ಅವರು ಇದ್ದಂತೆ ಇರಲಿ. ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ. ಅವರ ಹೆಸರನ್ನು ಹಾಳು ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)