ಎಆರ್ ರೆಹಮಾನ್ & ಮೋಹಿನಿ ಡೇ ಮದುವೆಯಾಗ್ತಾರಾ?; ಈ ಕುರಿತು Mohini ಮೊದಲ ರಿಯಾಕ್ಷನ್​​

Untitled design - 2024-11-23T171736.302
Published on

ಮುಂಬೈ: ಎಆರ್ ರೆಹಮಾನ್ ಮತ್ತು ಅವರ ಬ್ಯಾಂಡ್ ಸದಸ್ಯೆ ಮೋಹಿನಿ ಡೇ(Mohini) ಒಂದೇ ದಿನದಲ್ಲಿ ತಮ್ಮ ವೈವಾಹಿಕ ಜೀವನದಿಂದ ಬೇರ್ಪಡುವುದಾಗಿ ತಿಳಿಸಿದ್ದು ಎಲ್ಲರಿಗೂ ಗೊತ್ತೆ ಇದೆ. ಎಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ತಮ್ಮ 29 ವರ್ಷದ ದಾಂಪತ್ಯ ನವೆಂಬರ್ 19 ರಂದು ಕೊನೆಗೊಳಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದರು. ಇದಾದ ಕೆಲವೇ ಸಮಯದಲ್ಲಿ ಮೋಹಿನಿ ಡೇ ತನ್ನ ಪತಿಯಿಂದ ವಿಚ್ಛೇದನ ಪಡೆಯುವುದಾಗಿ ಸುದೀರ್ಘ ಪೋಸ್ಟ್​​​ವೊಂದನ್ನು ಹಂಚಿಕೊಂಡಿದ್ದರು.

ಆದರೆ ಇಬ್ಬರು ಘೋಷಣೆಯು ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಲದ್ಲಿ ಎಆರ್​ ರೆಹಮಾನ್​ ಮತ್ತು ಮೋಹಿನಿ ಡೇ ವಿವಾಹವಾಗುತ್ತಾರೆ. ಈ ಕಾರಣದಕ್ಕೆ ಇಬ್ಬರು ತಮ್ಮ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದಾರೆ ಎಂಬ ವದಂತಿ ಹರಿದಾಡುತಿತ್ತು. ಆದರೀಗ ಈ ಊಹಾಪೋಹಗಳ ಬಗ್ಗೆ ಮೋಹಿನಿ ಡೇ ಮೌನ ಮುರಿದು ಪ್ರತಿಕ್ರಿಯಿಸಿದ್ದಾರೆ.

ಸಂದರ್ಶನಕ್ಕಾಗಿ ನನ್ನನ್ನು ಹಲವರು ಸಂಪರ್ಕಿಸುತ್ತಿದ್ದಾರೆ. ಆದರೆ ಅವರು ಪದೇಪದೆ ಹೇಳುತ್ತಿರುವ ವಿಷಯಕ್ಕೆ ಸ್ಪಷ್ಟೀಕರಣಗಳನ್ನು ನೀಡಲು ಆಸಕ್ತಿ ಹೊಂದಿಲ್ಲ ಎಂದು ಮೋಹಿನಿ ಡೇ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಮಾಡಿರುವ ಪೋಸ್ಟ್​ನಲ್ಲಿ ಬರೆದಿದ್ದಾರೆ. ನನಗೆ ಸಂದರ್ಶನಗಳಿಗಾಗಿ ಹೆಚ್ಚಿನ ಸಂಖ್ಯೆಯ ವಿನಂತಿಗಳು ಬರುತ್ತಿವೆ ಮತ್ತು ಅದು ಏನು ಎಂದು ನನಗೆ ತಿಳಿದಿದೆ. ಆದ್ದರಿಂದ ನಾನು ಪ್ರತಿಯೊಂದನ್ನು ಗೌರವದಿಂದ ತಿರಸ್ಕರಿಸಬೇಕು, ಏಕೆಂದರೆ ಅಂತಹ ವದಂತಿಗಳನ್ನು ಉತ್ತೇಜಿಸಲು ನನಗೆ ಆಸಕ್ತಿಯಿಲ್ಲ. ವದಂತಿಗಳಿಗೆ ನನ್ನ ಶಕ್ತಿಯನ್ನು ವ್ಯಯಿಸುವುದು ಯೋಗ್ಯವಲ್ಲ ಎಂದು ನಾನು ನಂಬುತ್ತೇನೆ. ದಯವಿಟ್ಟು ನನ್ನ ಗೌಪ್ಯತೆಯನ್ನು ಗೌರವಿಸಿ ಎಂದು ತಿಳಿಸಿದ್ದಾರೆ.

ಮೋಹಿನಿ ಮತ್ತು ಮಾರ್ಕ್ ತಮ್ಮ ಜಂಟಿ ಪೋಸ್ಟ್‌ನಲ್ಲಿ ಭಾರವಾದ ಹೃದಯದಿಂದ ಮಾರ್ಕ್ ಮತ್ತು ನಾನು ನಾವು ಬೇರ್ಪಟ್ಟಿದ್ದೇವೆ ಎಂದು ಘೋಷಿಸುತ್ತೇವೆ. ಮೊದಲನೆಯದಾಗಿ ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧರಾಗಿ, ನಾವು ಪರಸ್ಪರ ಒಪ್ಪಿಗೆಯೊಂದಿಗೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಮ್ಮ ನಡುವೆ ಪರಸ್ಪರ ತಿಳುವಳಿಕೆ ಇದೆ. ಆದರೂ ನಾವು ಒಳ್ಳೆಯ ಸ್ನೇಹಿತರಾಗಿ ಉಳಿದಿದ್ದೇವೆ. ನಾವು ಜೀವನದಿಂದ ವಿಭಿನ್ನ ವಿಷಯಗಳನ್ನು ಬಯಸುತ್ತೇವೆ. ಪರಸ್ಪರ ಪ್ರತ್ಯೇಕತೆಯು ಮುಂದುವರಿಯಲು ಉತ್ತಮ ಮಾರ್ಗವಾಗಿದೆ. ನೀವು ನಮಗೆ ನೀಡಿದ ಎಲ್ಲಾ ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ. ದಯವಿಟ್ಟು ಈ ಸಮಯದಲ್ಲಿ ನಾವು ಮಾಡಿದ ನಿರ್ಧಾರವನ್ನು ಧನಾತ್ಮಕವಾಗಿ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸುವ ಮೂಲಕ ಗೌರವಿಸಿ. ನಾವು ಯಾವುದೇ ನಿರ್ಧಾರವನ್ನು ಪ್ರಶಂಸಿಸುವುದಿಲ್ಲ ಎಂದು ಬರೆದಿದ್ದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net