ಪಾಲಕರ ವಿಚ್ಛೇದನ & ಮೋಹಿನಿ ವದಂತಿಗೆ ರೆಹಮಾನ್​ ಪುತ್ರಿ ಕೌಂಟರ್​; ರಹೀಮಾ ಹೇಳಿದ್ದೇನು ಗೊತ್ತಾ? AR Rahman

Untitled design - 2024-11-22T143855.604
Published on

ಮುಂಬೈ: ಖ್ಯಾತ ಸಂಗೀತಗಾರ ಎಆರ್ ರೆಹಮಾನ್( AR Rahman) ಅವರು ತಮ್ಮ ಪತ್ನಿ ಸಾಯಿರಾ ಬಾನು ಅವರಿಂದ ಬೇರ್ಪಡುವುದಾಗಿ ತಮ್ಮ ವೈಯಕ್ತಿಕ ಜೀವನದ ವಿಷಯವನ್ನು ಅಭಿಮಾನಿಗಳಿಗೆ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ರೆಹಮಾನ್ ಮತ್ತು ಸೈರಾ ತಮ್ಮ 29 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಿರುವ ವಿಚಾರ ಕೇಳಿ ಫ್ಯಾನ್ಸ್ ಶಾಕ್​ ಆಗಿದ್ದರು. ​ಆದರೆ ಅದೇ ಸಮಯದಲ್ಲಿ ರೆಹಮಾನ್​​​ ಟೀಂನ ಬಾಸ್ ವಾದಕಿ ಮೋಹಿನಿ ಡೇ ಜಂಟಿ ಪೋಸ್ಟ್‌ನಲ್ಲಿ ತನ್ನ ಪತಿ ಮಾರ್ಕ್ ಹಾರ್ಟ್ಸ್‌ಚ್‌ನಿಂದ ಬೇರ್ಪಡುವುದಾಗಿ ಘೋಷಿಸಿದ್ದರು.

ಎಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಬೇರ್ಪಟ್ಟ ಕೆಲವೇ ಗಂಟೆಗಳ ನಂತರ ಮೋಹಿನಿ ಅವರ ಡಿವೋರ್ಸ್​​ ವಿಚಾರ ಹಂಚಿಕೊಳ್ಳುತ್ತಿದ್ದಂತೆ ಹೊಸ ವದಂತಿಯೊಂದು ಮುನ್ನೆಲೆಗೆ ಬಂದಿತು. ಮೋಹಿನಿ ಮತ್ತು ರೆಹಮಾನ್​​ ವಿವಾಹವಾಗಲಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಸದ್ಯ ಅದಕ್ಕೆ ಎಆರ್​ ರೆಹಮಾನ್​ ಅವರ ಮಗಳು ರಹೀಮಾ ಪ್ರತಿಕ್ರಿಯಿಸಿದ್ದಾರೆ.

ತನ್ನ ಪಾಲಕರ ವಿಚ್ಛೇದನವನ್ನು ಮೋಹಿನಿ ಡೇಗೆ ಅವರ ವಿಚಾರಕ್ಕೆ ತಳುಕು ಹಾಕಿ ಮಾತನಾಡುತ್ತಿರುವವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೌಂಟರ್​ ನೀಡಿದ್ದಾರೆ. "ಯಾವಾಗಲೂ ನೆನಪಿಡಿ ... Rumours are carried by haters, spread by fools, accepted by idiots ಎಂದು ಬರೆದಿದ್ದು ಜತೆಗೆ ಕೊನೆಯದಾಗಿ ಪ್ರಾಮಾಣಿಕ ಜೀವನವನ್ನು ಪಡೆಯಿರಿ ಎಂದು ಹೇಳಿದ್ದಾರೆ.

ಈ ಮೊದಲು ಎಆರ್ ರೆಹಮಾನ್ ಮತ್ತು ಸೈರಾ ಬಾನು ಅವರ ವಿಚ್ಛೇದನದ ವಕೀಲ ಮಾತನಾಡಿದ್ದರು. ರೆಹಮಾನ್​ ದಂಪತಿಗಳ ವಿಚ್ಛೇದನಕ್ಕೂ ಮೋಹಿನಿ ಡೇಗೂ ಯಾವುದೇ ಸಂಬಂಧವಿಲ್ಲ. ಸಾಯಿರಾ ಮತ್ತು ರೆಹಮಾನ್ ಅವರು ಈ ನಿರ್ಧಾರವನ್ನು ತಾವೇ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದರು. ಎಆರ್ ರೆಹಮಾನ್ ಇತ್ತೀಚೆಗೆ ಥಗ್ ಲೈಫ್ ಮತ್ತು ಧನುಷ್ ಅವರ ರಾಯನ್‌ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ. ಪ್ರಸ್ತುತ ಅವರು ವಿಕ್ಕಿ ಕೌಶಲ್ ಅವರ ಛಾವಾ ಸಂಗೀತದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net