ಪ್ರಭಾಸ್​ ಹೀರೋ ಆದರೆ, ಸೈಫ್​ ವಿಲನ್​ ... ಇದು ಆದಿಪುರುಷ್​ ಸ್ಪೆಷಾಲಿಟಿ

Saif - Adipurush - Final
Published on

'ಆದಿಪುರುಷ್​' ಎಂಬ ಚಿತ್ರದಲ್ಲಿ ಪ್ರಭಾಸ್​ ಹೀರೋ ಆಗಿ ಅಭಿನಯಿಸುತ್ತಿದ್ದಾರೆ, ಇದೊಂದು ಬಹುಕೋಟಿ ವೆಚ್ಚದ ಥ್ರೀಡಿ ಚಿತ್ರ ಎಂಬ ಸುದ್ದಿ ಇತ್ತೀಚೆಗಷ್ಟೇ ಬಂದಿದೆ. ಈ ಚಿತ್ರದ ಕಥೆ ಏನು, ಇದರ ವಿಶೇಷತೆ ಏನು ಎಂಬಂತಹ ವಿಷಯಗಳ ಬಗ್ಗೆ ಚಿತ್ರತಂಡ ಇನ್ನಷ್ಟೇ ಮಾತನಾಡಬೇಕಿದೆ.

ಅಷ್ಟರಲ್ಲಾಗಲೇ, ಈ ಚಿತ್ರದಲ್ಲಿ ಪ್ರಭಾಸ್​ಗೆ ವಿಲನ್​ ಆಗಿ ಸೈಫ್​ ಅಲಿ ಖಾನ್​ ನಟಿಸುತ್ತಿದ್ದಾರೆ ಎಂಬ ಎಕ್ಸ್​ಕ್ಲೂಸಿವ್​ ಸುದ್ದಿಯೊಂದು ಕೇಳಿ ಬರುತ್ತಿದೆ. ಪ್ರಭಾಸ್​ ಎದುರು ಸೈಫ್​ ಬಹಳ ಪೀಚಾಗಿ ಕಾಣುವುದಿಲ್ಲವಾ ಎಂಬ ಪ್ರಶ್ನೆ ಬರುವುದು ಸಹಜ. ಆದರೂ ಈ ಪಾತ್ರಕ್ಕೆ ಅವರೇ ಸೂಕ್ತ ಎಂದು ಚಿತ್ರತಂಡ ತೀರ್ಮಾನಿಸಿದೆಯಂತೆ.

ಹಾಗಂತ ವಿಲನ್ ಪಾತ್ರ ಮಾಡೋಕೆ ಸೈಫ್​ ಒಪ್ಪಿಕೊಂಡರಾ? ಆ ಕೆಲಸವನ್ನು ನಿರ್ದೇಶಕ ಓಂ ರೌತ್​ ಬಹಳ ಸುಲಭವಾಗಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಓಂ ರೌತ್​, ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ತಾನಾಜಿ' ಎಂಬ ಚಿತ್ರ ನಿರ್ದೇಶಿಸಿದ್ದರು. ಆ ಚಿತ್ರದಲ್ಲಿ ಸೈಫ್​ ಜತೆಗೆ ಕೆಲಸ ಮಾಡಿದ್ದರು. ಓಂ ಮತ್ತು ಸೈಫ್​ ನಡುವೆ ಒಳ್ಳೆಯ ಸ್ನೇಹ ಇರುವುದರಿಂದ, ಸೈಫ್​ಗೆ ಪಾತ್ರ ಹೇಳಿ ಒಪ್ಪಿಸಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಸೈಫ್​ ಸಹ ಕಥೆ ಕೇಳಿ ಸೂಪರ್​ ಎಕ್ಸೈಟ್​ ಆಗಿ, ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರಂತೆ. ಈಗ ಚಿತ್ರದ ಎರಡು ಮುಖ್ಯ ಪಾತ್ರಧಾರಿಗಳ ಆಯ್ಕೆ ಆಗಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಕಲಾವಿದರು ಮತ್ತು ತಂತ್ರಜ್ಱರ ಆಯ್ಕೆ ಪೂರ್ಣವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಚಿತ್ರವನ್ನು ಟಿ-ಸೀರೀಸ್​ನ ಭೂಷಣ್​ ಕುಮಾರ್​ ನಿರ್ಮಿಸುತ್ತಿದ್ದು, ಸದ್ಯಕ್ಕೆ ಪ್ರೀ-ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿವೆ. ಬಹುಶಃ 2021ರ ಮಧ್ಯಭಾಗದಲ್ಲಿ ಈ ಚಿತ್ರ ಪ್ರಾರಂಭವಾಗಿ 2022ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net