

ಆಗಸ್ಟ್ 05ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ನಟಿ ಆಶಿಕಾ ರಂಗನಾಥ್ಗೆ ಇಂದು ಮತ್ತೆ ವಿಶೇಷವಾದ ದಿನ. ಯಾಕೆ ಗೊತ್ತಾ? ಆಶಿಕಾ ಅಭಿನಯದ ಮೊದಲ ಕನ್ನಡ ಚಿತ್ರ 'ಕ್ರೇಜಿ ಬಾಯ್' ಇಂದು ಬಿಡುಗಡೆಯಾಗಿ ನಾಲ್ಕು ವರ್ಷ.
ಇದನ್ನೂ ಓದಿ: ‘ಜೋಗಿ’ ಹೆಸರಲ್ಲಿದೆ ಇಷ್ಟೆಲ್ಲಾ ದಾಖಲೆಗಳು!
ಈ ವಿಷಯವನ್ನು ಆಶಿಕಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. 'ಕ್ರೇಜಿ ಬಾಯ್ ಚಿತ್ರ, ಕಪಾಲಿ ಚಿತ್ರಮಂದಿರ, ಫಸ್ಟ್ ಡೇ ಫಸ್ಟ್ ಶೋ, ನಾಲ್ಕು ವರ್ಷಗಳ ಹಿಂದೆ ... ಎಂಥಾ ಅದ್ಭುತವಾದ ಅನುಭವ ಅದು. ಈ ಜೀವನದಲ್ಲಿ ಮರೆಯಲಿಕ್ಕೆ ಸಾಧ್ಯವಾಗದೇ ಇರುವ ಅನುಭವ ಅದು. ಎಲ್ಲರಿಗೂ ಧನ್ಯವಾದಗಳು' ಎಂದು ಪೋಸ್ಟ್ ಹಾಕಿದ್ದಾರೆ.
ಆಶಿಕಾ ಕನ್ನಡ ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷವಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಕಾಮನ್ ಡಿಸ್ಪ್ಲೇ ಪಿಕ್ಚರ್ (ಸಿಡಿಪಿ) ಹಾಕಿಕೊಂಡು ತಮ್ಮ ಮೆಚ್ಚಿನ ನಟಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಇದನ್ನೂ ಓದಿ: ಸೂಪರ್ ಸ್ಟಾರ್ಗೆ ರಾಕಿಂಗ್ ಸ್ಟಾರ್ ಧ್ವನಿ…
'ಕ್ರೇಜಿ ಬಾಯ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಆಶಿಕಾ ನಂತರದ ವರ್ಷಗಳಲ್ಲಿ 'ಮಾಸ್ ಲೀಡರ್', 'ಮುಗುಳು ನಗೆ', 'ರಾಜು ಕನ್ನಡ ಮೀಡಿಯಂ', 'ರಾಂಬೋ 2', 'ತಾಯಿಗೆ ತಕ್ಕ ಮಗ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ 'ಅವತಾರ್ ಪುರುಷ', 'ರೆಮೋ', 'ಮದಗಜ' ಮುಂತಾದ ಚಿತ್ರಗಳು ಇನ್ನೂ ಬಿಡುಗಡೆಯಾಗುವುದಕ್ಕಿದೆ.