More

    ‘ಸೂಪರ್ ಸ್ಟಾರ್​’ಗೆ ‘ರಾಕಿಂಗ್​ ಸ್ಟಾರ್’ ಧ್ವನಿ; ನಾಳೆ ಬೆ. 11.30 ಟೀಸರ್​ ರಿಲೀಸ್

    ಬೆಂಗಳೂರು: 2002ರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಉಪೇಂದ್ರ ನಾಯಕತ್ವದಲ್ಲಿ ‘ಸೂಪರ್​ಸ್ಟಾರ್’ ಸಿನಿಮಾ ತೆರೆಕಂಡಿತ್ತು. ಇದೀಗ ಅದೇ ಶೀರ್ಷಿಕೆಯ ಹೊಸ ಸಿನಿಮಾದಲ್ಲಿ ಉಪೇಂದ್ರ ಅವರ ಅಣ್ಣನ ಮಗ, ನಿರಂಜನ್ ಸುಧೀಂದ್ರ ನಟಿಸುತ್ತಿದ್ದಾರೆ. ಆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸ್ವತಃ ಉಪೇಂದ್ರ ಮತ್ತು ಪ್ರಿಯಾಂಕಾ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ್ದಾರೆ. ಇದೀಗ ಟೀಸರ್​ ರಿಲೀಸ್​ಗೆ ಸಮಯ ಬಂದಿದೆ.

    ಇದನ್ನೂ ಓದಿ: ಗಾಳಿಪಟದ ನೆರಳಿನ ಜತೆ ಮತ್ತೆ ಬಂದ ಶ್ರುತಿ

    ಗುರುವಾರ ಬೆಳಗ್ಗೆ 11.30ಕ್ಕೆ ’ಸೂಪರ್​ಸ್ಟಾರ್‘ ಚಿತ್ರದ ಟೀಸರ್​ ರಿಲೀಸ್​ ಆಗಲಿದೆ. ವಿಶೇಷ ಏನೆಂದರೆ, ಈ ಚಿತ್ರದ ಟೀಸರ್​ಗೆ ರಾಕಿಂಗ್​ ಸ್ಟಾರ್​ ಯಶ್ ಧ್ವನಿ ನೀಡಿದ್ದು, ಯಶ್​ ಅಭಿಮಾನಿಗಳಲ್ಲಿಯೂ ಕುತೂಹಲ ಮೂಡಿಸಿದೆ. ಈಗಾಗಲೇ ಟೀಸರ್​ಗೆ ಬೇಕಾದ ದೃಶ್ಯಗಳನ್ನು ಸೆರೆಹಿಡಿದಿರುವ ಚಿತ್ರತಂಡ, ಸೆಪ್ಟಂಬರ್​ನಿಂದ ಶೂಟಿಂಗ್​ ಸಹ ಆರಂಭಿಸಿಕೊಳ್ಳಲಿದೆ.

    ಅಂದಹಾಗೆ, ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್​ಗಳನ್ನು ನೋಡಿದರೆ, ಇದೊಂದು ಪಕ್ಕಾ ಮಾಸ್​ ಅವತಾರದಲ್ಲಿ ಸಿದ್ಧವಾಗಲಿರುವ ಸಿನಿಮಾ ಎಂಬಂಥ ಕಾಣಿಸುತ್ತಿದೆ. ಮೊದಲ ಚಿತ್ರಕ್ಕಾಗಿ ದೇಹವನ್ನೂ ಹುರಿಗೊಳಿಸಿಕೊಂಡಿರುವ ನಿರಂಜನ್​, ರಗಡ್​ ಲುಕ್​ನಲ್ಲಿ ಎದುರಾಗುವ ಸೂಚನೆ ನೀಡಿದ್ದಾರೆ.

    ಈ ಹಿಂದೆ ಪ್ರಿಯಾಂಕಾ ಉಪೇಂದ್ರ ಜತೆಗೆ ‘ಸೆಕೆಂಡ್ ಹ್ಯಾಂಡ್’ ಚಿತ್ರದ ಮೂಲಕ ನಿರಂಜನ್ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟಿದ್ದರು. ಆ ಸಿನಿಮಾ ನಿರಂಜನ್​ಗೆ ಅಷ್ಟೊಂದು ಯಶಸ್ಸು ತಂದುಕೊಟ್ಟಿರಲಿಲ್ಲ. ಬಳಿಕ ‘ಅದ್ಧೂರಿ 2’ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತಾದರೂ, ಸದ್ಯಕ್ಕೆ ಆ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ್ಲ ಈ ನಡುವೆಯೇ ರಮೇಶ್ ವೆಂಕಟೇಶ್ ಬಾಬು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಸೂಪರ್ ಸ್ಟಾರ್’ ಸಿನಿಮಾ ಸೆಟ್ಟೇರಿದೆ. ಸೆ ಮೊದಲ ವಾರದಲ್ಲಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಸಹ ಮಾಡಿಕೊಳ್ಳುವ ಪ್ಲ್ಯಾನ್​ ರೂಪಿಸಿದೆ ಚಿತ್ರತಂಡ.

    ಇದನ್ನೂ ಓದಿ: ಸಾಧನೆ ಕಡೆಗಣಿಸಬೇಡಿ: ವಿವಾದಗಳಿಗೆ ಉತ್ತರ ಕೊಟ್ಟ ಕಾರ್ಗಿಲ್​ಗರ್ಲ್

    ಇತ್ತ ನಾಯಕಿಗಾಗಿಯೂ ಚಿತ್ರತಂಡ ಹುಡುಕಾಟ ಆರಂಭಿಸಿದ್ದು, ಈಗಾಗಲೇ ಒಂದಷ್ಟು ನಾಯಕಿಯರನ್ನು ಪಟ್ಟಿ ಮಾಡಿದೆ. ಅವರಲ್ಲಿ ಯಾರು ಅಂತಿಮ ಆಗಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳಿಕೊಳ್ಳಲಿದೆ ಚಿತ್ರತಂಡ.

    ಬಾಲಿವುಡ್​ ಕಾಮಕಾಂಡದಲ್ಲಿ ನಾನಿಲ್ಲ; ಮಹೇಶ್​ ಭಟ್​ ಕೊಟ್ಟ ಸ್ಪಷ್ಟನೆ ಇದು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts