More

    ಸಾಧನೆ ಕಡೆಗಣಿಸಬೇಡಿ: ವಿವಾದಗಳಿಗೆ ಉತ್ತರ ಕೊಟ್ಟ ಕಾರ್ಗಿಲ್​ಗರ್ಲ್

    ‘ಗುಂಜನ್ ಸಕ್ಸೇನಾ – ದಿ ಕಾರ್ಗಿಲ್ ಗರ್ಲ್’ ಚಿತ್ರದ ಬಗ್ಗೆ ಹಲವು ಟೀಕೆ-ಟಿಪ್ಪಣಿಗಳು ಕೇಳಿ ಬಂದಿದ್ದರೂ, ಇದುವರೆಗೂ ರಿಯಲ್ ಗುಂಜನ್ ಸಕ್ಸೇನಾ ಮಾತನಾಡಿರಲಿಲ್ಲ. ಕಾರ್ಗಿಲ್​ನಲ್ಲಿ ಫ್ಲೈಟ್ ಚಲಾಯಿಸಿದ ಮೊದಲ ಮಹಿಳೆ ಶ್ರೀವಿದ್ಯಾ ರಾಜನ್ ಹೊರತು, ಗುಂಜನ್ ಅಲ್ಲ ಎಂದು ಯಾವಾಗ ನಿವೃತ್ತ ವಿಂಗ್ ಕಮಾಂಡರ್ ನಮ್ರತಾ ಚಾಂಡಿ ಅವರು ಹೇಳಿದರೋ, ಇದೀಗ ಸ್ವತಃ ಗುಂಜನ್ ಅವರೇ ಅಖಾಡಕ್ಕೆ ಇಳಿದಿದ್ದಾರೆ.

    ತಮ್ಮ ಮೇಲಿನ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ. ‘ನನ್ನ ಬಯೋಪಿಕ್​ನಲ್ಲಿ ಕೆಲವೊಂದು ವಿಚಾರಗಳಲ್ಲಿ ಉತ್ಪ್ರೇಕ್ಷೆ ಮಾಡಿರುವುದು ಹೌದು. ಅದು ಚಿತ್ರಕ್ಕಾಗಿಯೇ ಹೊರತು, ಯಾರನ್ನೋ ಕೀಳಾಗಿ ತೋರಿಸಬೇಕು ಎಂಬ ಉದ್ದೇಶದಿಂದ ಮಾಡಲಾಗಿಲ್ಲ. ಈ ವಿಚಾರವನ್ನು ಮುಂದಿಟ್ಟುಕೊಂಡು, ನನ್ನ ಸಾಧನೆಯನ್ನು ಕಡೆಗಣಿಸಿ, ನನ್ನ ಹೆಸರಿಗೆ ಮಸಿ ಬಳಿಯುವುದಕ್ಕೆ ಒಂದು ಗುಂಪು ಪ್ರಯತ್ನಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕಾರ್ಗಿಲ್​ನಲ್ಲಿ ಮೊದಲಿಗೆ ಫ್ಲೈ ಮಾಡಿದ್ದು ತಾವೇ ಎಂದು ಹೇಳಿಕೊಂಡಿರುವ ಅವರು, ‘ಕಾಂಬ್ಯಾಟ್ ಜೋನ್​ನಲ್ಲಿ ಫ್ಲೈ, ಜಂಗಲ್ ಆಂಡ್ ಸ್ನೋ ಸರ್ವೆವಲ್ ಕೋರ್ಸ್​ನಲ್ಲಿ ಭಾಗವಹಿಸಿದ ಮೊದಲ ಮಹಿಳೆ ನಾನು. ಎಲ್ಲಕ್ಕಿಂತ ಹೆಚ್ಚಾಗಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಮೊದಲ ಮಹಿಳಾ ಪೈಲೆಟ್ ನಾನು. ಭಾರತೀಯ ವಾಯುಪಡೆಯಲ್ಲಿ ಈ ವಿಷಯ ಎಲ್ಲರಿಗೂ ಗೊತ್ತಿದೆ’ ಎಂದಿದ್ದಾರೆ.

    ಚಿತ್ರದಲ್ಲಿ ತೋರಿಸ ಲಾಗಿರುವ ಲಿಂಗ ತಾರತಮ್ಯದ ಕುರಿತು ಮಾತನಾಡಿರುವ ಅವರು, ‘ನಾನು ಫೋರ್ಸ್ ಸೇರಿದಾಗ ಸಾಂಸ್ಥಿಕ ಮಟ್ಟದಲ್ಲಿ ಯಾವುದೇ ತಾರತಮ್ಯವಿರಲಿಲ್ಲ. ಆದರೆ, ಮಹಿಳೆ ಎಂಬ ಕಾರಣಕ್ಕೆ ಕೆಲವರು ಪೂರ್ವಗ್ರಹದಿಂದ ನೋಡಿದರು. ಸಾಂಸ್ಥಿಕ ಮಟ್ಟದಲ್ಲಿ ನನಗೆ ಒಳ್ಳೆಯ ಅವಕಾಶಗಳೇ ಸಿಕ್ಕವು’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts