ನಾಗಚೈತನ್ಯ ನಟನೆಯ NC23 ಸಿನಿಮಾಗೆ ಖ್ಯಾತ ನಟಿ ಎಂಟ್ರಿ!

Untitled design - 2023-09-19T172113.959
Published on

ಆಂಧ್ರಪ್ರದೇಶ: ನ್ಯಾಚುರಲ್​ ಬ್ಯೂಟಿ, ಬಹುಭಾಷಾ ನಟಿ ಸಾಯಿ ಪಲ್ಲವಿ ಇದೀಗ ಟಾಲಿವುಡ್​ ನಟ ನಾಗಚೈತನ್ಯ ಅವರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ಇತ್ತೀಚಿನ ವರದಿ ದೃಢಪಡಿಸಿದೆ.

'ಎನ್​ಸಿ23' ಸಿನಿಮಾ ಸೆಟ್ಟೇರಿದ ಮೊದಲ ದಿನದಿಂದಲೂ ನಾಗಚೈತನ್ಯ ಅಭಿಮಾನಿಗಳಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿದೆ. ಗೀತಾ ಆರ್ಟ್ಸ್‌ನ ಬ್ಯಾನರ್​ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಚಂದೂ ಮೊಂಡೇಟಿ ನಿರ್ದೇಶಿಸಲಿದ್ದಾರೆ.

ಇದನ್ನೂ ಓದಿ: https://youtu.be/lLF3aN4Im6I

ಸಿನಿಮಾದಲ್ಲಿ ನಾಗಚೈತನ್ಯಗೆ ಯಾರು ನಾಯಕಿಯಾಗಲಿದ್ದಾರೆ ಎಂಬ ಹಲವು ಪ್ರಶ್ನೆಗಳು ಈ ಹಿಂದಿನಿಂದಲೂ ಕೇಳಿಬಂದಿತ್ತು. ಇದಕ್ಕೆ ಈಗ ಉತ್ತರ ಲಭಿಸಿದ್ದು, ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾಹಿತಿ ಪ್ರಕಟಗೊಂಡಿದೆ. ಕಳೆದ ಒಂದು ವರ್ಷಗಳ ನಂತರ ಇದೀಗ ಮತ್ತೊಮ್ಮೆ ನಟಿ ಬೆಳ್ಳಿತೆರೆಗೆ ಎಂಟ್ರಿ ಕೊಡಲು ಸಜ್ಜಾಗಿರುವ ಸಂಗತಿ ತಿಳಿದ ಅಭಿಮಾನಿಗಳು ಭಾರೀ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ನಾಯಕಿಯ ಆಗಮನದ ಸುಳಿವು ನೀಡಿದ ಚಿತ್ರತಂಡ, ಕಿರು ವಿಡಿಯೋವೊಂದನ್ನು ಹಂಚಿಕೊಳ್ಳುವ ಮುಖೇನ ಪರೋಕ್ಷವಾಗಿ ನಟಿಯ ಪರಿಚಯವನ್ನು ಮಾಡಿಕೊಟ್ಟಿದೆ. ಆದ್ರೆ, ಈ ಬಗ್ಗೆ ಮುಂದಿನ ದಿನಗಳಲ್ಲಿ ಮತ್ತೊಂದು ಅಧಿಕೃತ ಘೋಷಣೆಗೆ ಕಾಯಬೇಕಿದೆ.

ಇದೊಂದು ಲವ್ ಸ್ಟೋರಿ ಸಿನಿಮಾ ಎಂದು ಹೇಳಲಾಗಿದ್ದು, ಚಿತ್ರದಲ್ಲಿ ನಾಗಚೈತನ್ಯ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಕಾಕುಳಂ, ವಿಶಾಖಪಟ್ಟಣಂ, ಅಮದಾಲವಲಸ ಮತ್ತು ಗುಜರಾತ್‌ ಸೇರಿದಂತೆ ಹಲವು ಪ್ರಮುಖ ಸ್ಥಳಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದ್ದು, ಸಿನಿಮಾದ ತಾರಾಗಣದ ಬಗ್ಗೆ ಚಿತ್ರತಂಡ ಶೀಘ್ರವೇ ಮಾಹಿತಿ ಪ್ರಕಟಿಸಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net