VIDEO | ಮಹಿಳಾ ಮೀಸಲಾತಿ ಮಸೂದೆ; ಹೋಳಿ ಆಡಿ ಸಂಭ್ರಮಿಸಿದ ಬಿಜೆಪಿ ಮಹಿಳಾ ಕಾರ್ಯಕರ್ತರು

Untitled design - 2023-09-19T161500.171
Published on

ಪಾಟ್ನಾ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾದ ಬೆನ್ನಲ್ಲೇ ಪಾಟ್ನಾದ ಬಿಜೆಪಿ ಮಹಿಳಾ ಕಾರ್ಯಕರ್ತರು ಹೋಳಿ ಆಡುವ ಮುಖೇನ ಸಂಭ್ರಮಿಸಿದ್ದಾರೆ.

ಇಂದು ದೆಹಲಿಯ ನೂತನ ಸಂಸತ್​ ಭವನದಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, "ಇದನ್ನು ‘ನಾರಿ ಶಕ್ತಿ ವಂದನ್ ಅಧಿನಿಯಮ್’ ಎಂದು ಕರೆಯಲಾಗುತ್ತದೆ. ಇದು ಅಧಿಕ ಸಂಖ್ಯೆಯ ಮಹಿಳೆಯರು ಸಂಸತ್, ವಿಧಾನಸಭೆಗಳ ಸದಸ್ಯರಾಗುವುದನ್ನು ಖಚಿತಪಡಿಸುತ್ತದೆ" ಎಂದು ಹೇಳಿದರು.

ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ ಪ್ರಧಾನಿ, “ಇದನ್ನು ಜಾರಿಗೊಳಿಸಲು ದೇವರು ನನ್ನನ್ನು ಆಯ್ಕೆ ಮಾಡಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಲವಾರು ಬಾರಿ ಮಂಡಿಸಲಾಗಿತ್ತು. ಆದ್ರೆ, ಹಲವು ಬಾರಿ ಇದಕ್ಕೆ ತಡೆ ಎದುರಾಗಿತ್ತು. ಮಸೂದೆಯನ್ನು ಅಂಗೀಕರಿಸಲು ಸಾಕಷ್ಟು ಬಹುಮತ ಇರಲಿಲ್ಲ ಮತ್ತು ಹಲವು ಕಾರಣಗಳಿಂದ ಈ ಕನಸು ಅಪೂರ್ಣವಾಗಿತ್ತು. ಆದ್ರೆ, ಇಂದು ದೇವರೇ ಇದನ್ನು ಮುಂದಕ್ಕೆ ಕೊಂಡೊಯ್ಯಲು ನನಗೆ ಅವಕಾಶ ನೀಡಿದ್ದಾರೆ” ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಇಂದು ಹೊಸ ಸಂಸತ್​ನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ ಬೆನ್ನಲ್ಲೇ ಹಲವೆಡೆ ಸಂಭ್ರಮ ಆರಂಭಗೊಂಡಿದ್ದು, ಪಾಟ್ನಾ ಬಿಜೆಪಿ ಮಹಿಳಾ ಕಾರ್ಯಕರ್ತರು ಪರಸ್ಪರ ಹೋಳಿ ಆಡುವ ಮುಖೇನ ಸಂಭ್ರಮಿಸಿದ ದೃಶ್ಯ ಇದೀಗ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net