

ಮುಂಬೈ: ಶುಕ್ರವಾರ ವಿಶ್ವದೆಲ್ಲೆಡೆ ಕ್ರಿಸ್‌ಮಸ್ ಹಬ್ಬದ ಸಂಭ್ರಮ. ಕ್ರೀಡಾತಾರೆಯರು ಕೂಡ ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಶುಭಾಶಯ ತಿಳಿಸುವ ಸಲುವಾಗಿ ಕ್ರಿಸ್‌ಮಸ್ ತಾತಾ ಸಾಂತಾಕ್ಲಾಸ್ ವೇಷದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದರು.
ಸಚಿನ್ ತೆಂಡುಲ್ಕರ್ ಸಾಂತಾಕ್ಲಾಸ್ ವೇಷ ಧರಿಸಿ ಕ್ರಿಸ್‌ಮಸ್ ಶುಭಾಶಯ ತಿಳಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ‘ಒಗ್ಗಟ್ಟಾಗಿರುವುದು ಮತ್ತು ನೀಡುವುದೇ ಕ್ರಿಸ್‌ಮಸ್‌ನ ವಿಶೇಷತೆ. ಸಣ್ಣ ರೀತಿಯಲ್ಲಾದರೂ ಸರಿ, ಎಲ್ಲರಿಗೂ ಈ ಹಬ್ಬವನ್ನು ವಿಶೇಷವನ್ನಾಗಿ ಮಾಡೋಣ’ ಎಂದೂ ಸಚಿನ್ ಹೇಳಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
ಸದ್ಯ ಲಂಡನ್‌ನಲ್ಲಿರುವ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅಲ್ಲಿಂದಲೇ ಕ್ರಿಸ್‌ಮಸ್ ಶುಭಾಶಯ ಹೇಳಿದ್ದರೆ, ಕ್ರಿಕೆಟರ್‌ಗಳಾದ ಸುರೇಶ್ ರೈನಾ, ಕನ್ನಡತಿ ವೇದಾ ಕೃಷ್ಣಮೂರ್ತಿ, ಕುಸ್ತಿಪಟು ರಿತು ಪೋಗಟ್, ಜಿಮ್ನಾಸ್ಟ್ ದೀಪಾ ಕರ್ಮಾಕರ್ ಮತ್ತಿತರ ಕ್ರೀಡಾತಾರೆಯರು ಶುಭಾಶಯ ತಿಳಿಸಿದ್ದಾರೆ.