VIDEO: ಗೋವಾ ಬೀಚ್​ನಲ್ಲಿ ಎಂಜಾಯ್ ಮಾಡ್ತಿದ್ದಾರೆ ಸಚಿನ್; ಮೀನೂಟದ ಸವಿಯುಂಡ ತೆಂಡೂಲ್ಕರ್...

Sachin
Published on

ಪಣಜಿ: ಸದ್ಯ ಮಾಜಿ ಕ್ರಿಕೆಟಿಗ ಸಚಿನ ತೆಂಡೂಲ್ಕರ್ ಗೋವಾ ಪ್ರವಾಸದಲ್ಲಿದ್ದಾರೆ. ಕಡಲ ತೀರದಲ್ಲಿ ಮೀನುಗಾರರೊಂದಿಗೆ ಹರಟೆ ಹೊಡೆಯುತ್ತಾ, ಎಂಜಾಯ್ ಮಾಡ್ತಿದ್ದಾರೆ. ಜತೆಗೆ ಅಲ್ಲೇ ಪಕ್ಕದಲ್ಲಿದ್ದ ರೆಸ್ಟೋರೆಂಟ್​​ಗೆ ತೆರಳಿ ಸಮುದ್ರದ ವಿಶೇಷ ಮೀನುಗಳ ತಿನಿಸಿನ ರುಚಿ ನೋಡಿದ್ದಾರೆ.

ಗೋವಾದ ಸಮುದ್ರ ಕಿನಾರೆಯಲ್ಲಿ ಸ್ಥಳಿಯ ಮೀನುಗಾರರೊಂದಿಗೆ ಸಚಿನ್ ತೆಂಡೂಲ್ಕರ್ ಮಾತುಕತೆ ನಡೆಸಿದ್ದಾರೆ. ಈ ವಿಡಿಯೋವನ್ನು ಸಚಿನ್ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸ್ಥಳೀಯ ಮೀನುಗಾರರೊಂದಿಗೆ ಮಾತನಾಡುತ್ತಾ, ಹೇಗೆ ಸಾಂಪ್ರದಾಯಿಕ ಶೈಲಿಯಲ್ಲಿ ಸಮುದ್ರದಿಂದ ಮೀನು ಹಿಡಿಯುತ್ತಾರೆ ಎಂಬುವುದನ್ನು ತಿಳಿದುಕೊಂಡಿದ್ದಾರೆ.

ಈ ವೇಳೆ ಸಚಿನ್​ಗೆ ಮಾಹಿತಿ ನೀಡುತ್ತಿದ್ದ ಮೀನುಗಾರನಿಗೆ ಸಂತೋಷವಾಗಿದೆ. ಸಚಿನ್ ಜತೆಗೆ ಮಾತನಾಡುತ್ತಾ, ಇಂದಿನ ದಿನ ಈ ಭೂಮಿಯ ಮೇಲೆ ನನ್ನಷ್ಟು ಸಂತೋಷಗೊಂಡ ವ್ಯಕ್ತಿ ಯಾರೂ ಇಲ್ಲ. ಇಡೀ ಜಗತ್ತೇ ಮೆಚ್ಚಿದ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಈ ಹೊತ್ತಿನಲ್ಲಿ ನನ್ನ ಜತೆಗಿದ್ದಾರೆ ಎಂದಿದ್ದಾನೆ. ಅಲ್ಲದೇ, ಇಲ್ಲೆ ಪಕ್ಕದಲ್ಲಿ ನನ್ನ ರೆಸ್ಟೋರೆಂಟ್ ಇದೆ. ಅಲ್ಲಿಗೆ ಬಂದು ಊಟ ಮಾಡುವಂತೆ ಆಮಂತ್ರಿಸಿದ್ದಾನೆ. ಇದಕ್ಕೆ ಒಪ್ಪಿದ ಸಚಿನ್ ಕುಟುಂಬದೊಂದಿಗೆ ತೆರಳಿ, ಮೀನಿನ ಊಟ ಸವಿದಿದ್ದಾರೆ.

ಸಚಿನ್ ಗೋವಾಗೆ, ಬೆಳಗಾವಿ ಮಾರ್ಗವಾಗಿ ತೆರಳಿದ್ದರು. ಈ ವೇಳೆ ಬೆಳಗಾವಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗೂಡಂಗಡಿಯೊಂದರಲ್ಲಿ ಟೀ ಸೇವಿಸಿ ಸುದ್ದಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net