ಹರಿಣಗಳ ಆರ್ಭಟಕ್ಕೆ ಬೆಚ್ಚಿದ ಆಂಗ್ಲರು; ದಕ್ಷಿಣ ಆಫ್ರಿಕಾಗೆ 229 ರನ್​ಗಳ ಭರ್ಜರಿ ಜಯ

South Africa
Published on

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್​ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್ ವಿರುದ್ಧ ಆಲ್​ರೌಂಡ್ ಪ್ರದರ್ಶನದ ಫಲವಾಗಿ ದಕ್ಷಿಣ ಆಫ್ರಿಕಾ ತಂಡವು 229 ರನ್​ಗಳ ಭರ್ಜರಿ ಜಯಗಳಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಹೆನ್ರಿಚ್​ ಕ್ಲಾಸಿನ್ (109 ರನ್, 67 ಎಸೆತ, 12 ಬೌಂಡರಿ, 4 ಸಿಕ್ಸರ್), ರೀಜಾ ಹೆನ್ಡ್ರಿಕ್ಸ್​ (85 ರನ್, 75 ಎಸೆತ, 9 ಬೌಂಡರಿ, 3 ಸಿಕ್ಸರ್), ಮಾರ್ಕೋ ಜೇನ್​ಸನ್​ (75 ರನ್, 42 ಎಸೆತ, 3 ಬೌಂಡರಿ, 6 ಸಿಕ್ಸರ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (60 ರನ್, 61 ಎಸೆತ, 8 ಬೌಂಡರಿ) ಬಿರುಸಿನ ಬ್ಯಾಟಿಂಗ್ ಫಲವಾಗಿ 7 ವಿಕೆಟ್​ ನಷ್ಟಕ್ಕೆ 50 ಓವರ್​ಗಳಲ್ಲಿ 399 ರನ್​ ಗಳಿಸಿತ್ತು.

ಸವಾಲಿನ ಮೊತ್ತ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡವು ಯಾವುದೇ ಪ್ರತಿರೋಧವನ್ನು ತೋರದೆ 22 ಓವರ್​ಗಳಲ್ಲಿ 170 ರನ್​ಗಳಿಗೆ ಆಲೌಟ್​ ಆಯಿತು. ದಕ್ಷಿಣ ಆಫ್ರಿಕಾ ಪರ ಗೆರಾಲ್ಡ್​ ಕೋಟ್​ಜೀ (4-0-35-3), ಲುಂಗಿ ಎನ್​ಗಿಡಿ (5-1-26-2), ಮಾರ್ಕೋ ಜೇನ್​ಸನ್ (5-0-35-2), ಕಗಿಸೋ ರಬಾಡ (6-1-38-1), ಕೇಶವ್ ಮಹಾರಾಜ್ (2-0-27-1) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net