ಶಾಕಿಂಗ್‌! ಬ್ಲ್ಯಾಕ್‌ ಫಂಗಸ್‌ಗಿಂತಲೂ ಭೀಕರ ವೈಟ್‌ ಫಂಗಸ್‌ ಪತ್ತೆ- ಬಿಹಾರದ ನಾಲ್ವರ ಸ್ಥಿತಿ ಗಂಭೀರ

white fungus
Published on

ಪಟ್ನಾ: ಕೋವಿಡ್‌ ಒಂದನೆಯ ಅಲೆಯ ನಂತರ ಬದುಕನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದೆ ಎರಡನೆಯ ಅಲೆ. ಈ ಅಲೆಗೆ ಹೆಣಗಳ ರಾಶಿಯೇ ಬೀಳುತ್ತಿರುವ ನಡುವೆಯೇ ಸದ್ದಿಲ್ಲದೇ ಹಲವರ ಜೀವ ಪಡೆದಿದೆ ಬ್ಲ್ಯಾಕ್‌ ಫಂಗಸ್‌ (ಕಪ್ಪು ಶಿಲೀಂಧ್ರ). ಆದರೆ ಇನ್ನೂ ಭಯಾನಕ ಎನಿಸುವ ಬಿಳಿ ಶಿಲೀಂಧ್ರ (ವೈಟ್‌ ಫಂಗಸ್‌) ಪತ್ತೆಯಾಗಿದೆ.

.ಬಿಹಾರದ ಪಟ್ನಾದಲ್ಲಿ ನಾಲ್ವರಲ್ಲಿ ವೈಟ್ ಫಂಗಸ್ ಪತ್ತೆಯಾಗಿದ್ದು, ಇದೀಗ ವೈದ್ಯಕೀಯ ಲೋಕವನ್ನೇ ಬೆಚ್ಚಿಬೀಳಿಸುತ್ತಿದೆ. ಏಕೆಂದರೆ ಬಿಳಿ ಶಿಲೀಂಧ್ರವು, ಕಪ್ಪು ಶಿಲೀಂಧ್ರಕ್ಕಿಂತಲೂ ಅತಿಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಪಟ್ನಾದಲ್ಲಿ ಈ ಸೋಂಕಿತರನ್ನು ಆಕ್ಸಿಜನ್ ಹಾಗೂ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.

ಕರೊನಾ ಸೋಂಕಿನಿಂದ ಬಳಲುತ್ತಿದ್ದ ಈ ನಾಲ್ವರನ್ನು ಎಚ್‌ಆರ್‌ ಸಿಟಿ ಸ್ಕ್ಯಾನ್ ಮಾಡಿಸಿದಾಗ ಇವರಲ್ಲಿ ವೈಟ್ ಫಂಗಸ್ ಪತ್ತೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದು ಶ್ವಾಸಕೋಶ, ಚರ್ಮ, ಮೂತ್ರಪಿಂಡ, ಮೆದುಳು, ಬಾಯಿ ಹಾಗೂ ದೇಹದ ಇತರ ಅಂಗಾಂಗಗಳ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ. ಬ್ಲ್ಯಾಕ್ ಫಂಗಸ್ ನಂತೆಯೇ ಮಧುಮೇಹಿಗಳಲ್ಲಿ, ಕರೊನಾದಿಂದ ಗುಣಮುಖರಾಗುತ್ತಿರುವವರಲ್ಲಿಯೇ ಈ ವೈಟ್ ಫಂಗಸ್ ಕೂಡ ಪತ್ತೆಯಾಗುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net