More

    ಆಫೀಸ್‌ಗೆ ಬರ್ತಾನೆ, ಪದೇ ಪದೇ ಟಾಯ್ಲೆಟ್‌ಗೆ ಓಡ್ತಾನೆ- ಏನ್‌ ಮಾಡೋದು? ಇಂಟರ್‌ನೆಟ್‌ ಮೊರೆ ಹೋದ ಕಂಪೆನಿ!

    ಕೆನ್‌ಬೆರ್ರಾ (ಆಸ್ಟ್ರೇಲಿಯಾ): ಇಂಟರ್‌ನೆಟ್‌ನಲ್ಲಿ ನಮಗೆ ಅಗತ್ಯ ಇರುವ, ಅಗತ್ಯ ಇಲ್ಲದೇ ಇರುವ ಎಲ್ಲಾ ವಿಷಯಗಳನ್ನು ತಡಕಾಡುವುದು, ಪ್ರಶ್ನೆ ಕೇಳುವುದು ಸಾಮಾನ್ಯ. ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ಕಂಪೆನಿಯೊಂದು ಇಂಟರ್‌ನೆಟ್‌ನಲ್ಲಿ ತನ್ನ ಒಳ್ಳೆಯ ಉದ್ಯೋಗಿಯೊಬ್ಬನ ಬಗ್ಗೆ ಕುತೂಹಲದ ಜತೆಗೆ ಅಷ್ಟೇ ವಿಚಿತ್ರವಾದ ಪ್ರಶ್ನೆ ಕೇಳಿದ್ದು, ಇದೀಗ ಈ ಸುದ್ದಿ ಭಾರಿ ವೈರಲ್‌ ಆಗಿದೆ.

    ಅಷ್ಟಕ್ಕೂ ಕಂಪೆನಿ ಕೇಳಿರುವ ಪ್ರಶ್ನೆ, ತನ್ನ ಉದ್ಯೋಗಿಯೊಬ್ಬನು ಕಚೇರಿಗೆ ಬಂದಾಗ ಪದೇ ಪದೇ ಟಾಯ್ಲೆಟ್‌ಗೆ ಹೋಗಿರುವ ಬಗ್ಗೆ. ರೆಡ್‌ ಇಟ್‌ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವ ಕಂಪೆನಿ ಇದಕ್ಕೆ ಪರಿಹಾರವೇನು ಎಂದು ಪ್ರಶ್ನಿಸಿದೆ.

    ಅದರಲ್ಲಿ ಕಂಪೆನಿ ’ನಮ್ಮ ಕಂಪನಿಯಲ್ಲಿ ಉದ್ಯೋಗಿಯೊಬ್ಬರು ಇದ್ದಾರೆ. ತುಂಬಾ ಒಳ್ಳೆಯ ಕೆಲಸಗಾರ. ಅವರನ್ನು ಬಿಟ್ಟುಕೊಡಲು ಇಷ್ಟವಿಲ್ಲ. ಆದರೆ ಒಂದೇ ಸಮಸ್ಯೆ ಎಂದರೆ ಕಚೇರಿಗೆ ಬಂದ ಕೂಡಲೇ ಶೌಚಗೃಹಕ್ಕೆ ಓಡುತ್ತಾರೆ. ಅಲ್ಲಿ ಏನಿಲ್ಲವೆಂದರೂ 20 ನಿಮಿಷ ಕಳೆಯುತ್ತಾರೆ. ಪುನಃ ತಮ್ಮ ಜಾಗಕ್ಕೆ ಬಂದು ಕೆಲಸ ಮಾಡುವ ವೇಳೆಗೆ ಅರ್ಧ ಗಂಟೆ ಹೋಗಿರುತ್ತದೆ.

    ನಂತರ ಅಲ್ಲಿ ಇಲ್ಲಿ ಸುತ್ತಾಡಿ ಸೀಟಿನಲ್ಲಿ ಕುಳಿತುಕೊಂಡ ತಕ್ಷಣ ಮತ್ತೆ ಟಾಯ್ಲೆಟ್‌ಗೆ ಓಡ್ತಾರೆ. ಅಲ್ಲಿ ಮೊಬೈಲ್ ಹಿಡಿದುಕೊಂಡು ಹೋಗುವುದನ್ನೂ ಮರೆಯುವುದಿಲ್ಲ. ಇದು ಪ್ರತಿದಿನವೂ ನಡೆಯುತ್ತಿದೆ. ಕಚೇರಿಯಲ್ಲಿ ಕುಳಿತು ಕೆಲಸ ಮಾಡುವುದಕ್ಕಿಂತ ಹೆಚ್ಚು ಹೊತ್ತು ಶೌಚಗೃಹದಲ್ಲಿಯೇ ಕಳೆಯುವುದು ತಲೆನೋವಾಗಿದೆ. ಇದನ್ನು ಲೆಕ್ಕ ಹಾಕಿದರೆ ವಾರದಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ ಒಂದೆರಡು ದಿನ ಸಂಪೂರ್ಣ ಶೌಚಗೃಹದಲ್ಲಿಯೇ ಕಳೆಯುತ್ತಿದ್ದಾರೆ. ಈ ಕೆಲಸಕ್ಕೆ ನಾವು ಸಂಬಳ ಕೊಡುವಂತಾಗಿದೆ ಎಂದು ಗೋಳು ತೋಡಿಕೊಂಡಿದೆ.

    ಜತೆಗೆ, ಒಳ್ಳೆಯ ಕೆಲಸಗಾರ ಆಗಿರುವ ಕಾರಣ, ಕೆಲಸದಿಂದ ಕಿತ್ತು ಹಾಕಲು ಇಷ್ಟವಿಲ್ಲ, ಅಷ್ಟೇ ಅಲ್ಲದೇ ನಮ್ಮಲ್ಲಿ (ಆಸ್ಟ್ರೇಲಿಯಾದಲ್ಲಿ) ಕಾರ್ಮಿಕ ನೀತಿ ಬಹಳ ಸ್ಟ್ರಿಕ್ಟ್‌ ಆಗಿದ್ದು, ಸುಲಭದಲ್ಲಿ ತೆಗೆಯಲೂ ಆಗುವುದಿಲ್ಲ, ಇದಕ್ಕೆ ಏನು ಪರಿಹಾರ ಎಂದು ಕೇಳಿದೆ.

    ಇದಕ್ಕೆ ರೆಡ್‌ ಇಟ್‌ ಬಳಕೆದಾರರು ಹಲವಾರು ಸಲಹೆ ಕೊಟ್ಟಿದ್ದಾರೆ. ಧೂಮಪಾನದ ಚಟ ಇರಬಹುದು ಎಂದು ಕೆಲವರು ಹೇಳಿದ್ದರೆ, ಗರ್ಲ್‌ಫ್ರೆಂಡ್‌ಗೆ ಫೋನ್‌ ಮಾಡಲು ಹೋಗುತ್ತಿರಬಹುದು ಎಂದಿದ್ದಾರೆ. ಆದರೆ ಯಾರಿಂದಲೂ ಇದನ್ನು ಬಿಡಿಸಲು ಸರಿಯಾದ ಸಲಹೆ ಬಂದಿಲ್ಲ. ಒಬ್ಬರಂತೂ ಆತ ಏನೇ ಮಾಡಲಿ, ಕಷ್ಟವೇನು? ಕೆಲಸದ ಗುಣಮಟ್ಟವನ್ನ ಗಮನಿಸಿ. ಎಷ್ಟು ಗಂಟೆ ಕೆಲಸ ಮಾಡುತ್ತಾನೆ ಎನ್ನೋದು ಮುಖ್ಯವಲ್ಲ. ಕೊಟ್ಟಿರುವ ಕೆಲಸ ಸರಿಯಾಗಿ ಮಾಡಿದರೆ ಸಾಕಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಕಂಪೆನಿಗೆ ಏನು ಮಾಡಬೇಕೋ ತಿಳಿಯದಾಗಿದೆ.

    ದೇಹ ಒಪ್ಪಿಸಿದ್ದೇನೆ, ಕಿಡ್ನಿ ಮಾರಿ 20 ಲಕ್ಷ ರೂ ಕೊಡುವೆ ಎಂದ್ರೂ ಕೇಳದೇ ಬೇರೆ ಮದ್ವೆಯಾಗ್ತಿದ್ದಾನೆ- ಏನು ಮಾಡಲಿ?

    ಬ್ಲ್ಯಾಕ್‌ ಫಂಗಸ್‌ ಗುರುತಿಸುವುದು ಹೇಗೆ? ಚಿಕಿತ್ಸೆ, ಪರಿಹಾರವೇನು? ವೈದ್ಯಕೀಯ ವಿಜ್ಞಾನ ಸಂಸ್ಥೆ ಮಾರ್ಗಸೂಚಿ ಇಲ್ಲಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts