More

    ಅಂಗವಿಕಲರಿಗೆ ಸೌಲಭ್ಯ ಕಲ್ಪಿಸಿ

    ಆಯನೂರು: ಆಯನೂರು ಕೋಹಳ್ಳಿ ನಾಡಕಚೇರಿ ಹಾಗೂ ಹಾರನಹಳ್ಳಿ ನಾಡಕಚೇರಿಯಲ್ಲಿ ಅಂಗವಿಕಲರು ಓಡಾಡಲು ರ‌್ಯಾಂಪ್, ರೀಲ್ ಮತ್ತು ಶೌಚಗೃಹ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಸಕ್ಷಮ ಸಂಘದ ಪದಾಧಿಕಾರಿಗಳು ನಾಡಕಚೇರಿಗೆ ಮನವಿ ಸಲ್ಲಿಸಿದರು.

    ನಾಡಕಚೇರಿಗಳಲ್ಲಿ ಮೂಲ ಸೌಲಭ್ಯ ಇಲ್ಲದಿರುವುದರಿಂದ ಅಂಗವಿಕಲರಿಗೆ ತುಂಬ ಸಮಸ್ಯೆಯಾಗುತ್ತಿದೆ. ನಡೆಯಲು ಆಗದವರಿಗೆ ವ್ಹೀಲ್‌ಚೇರ್‌ನಲ್ಲಿ ಬಂದು ಕೆಲಸಗಳನ್ನು ಮಾಡಿಕೊಳ್ಳಲು ತೊಂದರೆಯಾಗುತ್ತಿದೆ. ಓಡಾಡಲು ಅನುಕೂಲವಾಗುವಂತೆ ರ‌್ಯಾಂಪ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
    ನಿಯಮದ ಪ್ರಕಾರ ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಮೂಲ ಸೌಲಭ್ಯ ಕಲ್ಪಿಸಬೇಕು. ಆದರೆ ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ಇದರಿಂದ ನಿಗದಿತ ಸಮಯಕ್ಕೆ ಕಚೇರಿಗೆ ಬಂದು ಕೆಲಸ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಕಚೇರಿ ಪ್ರವೇಶ ದ್ವಾರ ಮತ್ತು ಒಳಪ್ರವೇಶ ಜಾಗದಲ್ಲಿ ರ‌್ಯಾಂಪ್, ರೀಲ್ಸ್, ಶೌಚಗೃಹ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
    ಜಿಲ್ಲಾ ಸಕ್ಷಮ ಸಂಘದ ಸಂಚಾಲಕ ಸಿ.ಆರ್.ಶಿವಕುಮಾರ್, ಯುವ ಸಕ್ಷಮ ಸಂಘದ ಮಂಜುನಾಥ್, ಪ್ರದೀಪ್, ಪ್ರಹ್ಲಾದ್, ಮುರಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts