More

  ಮಸ್ಟರಿಂಗ್ ಕೇಂದ್ರದಲ್ಲಿ ಸಕಲ ಸಿದ್ಧತೆ

  ಹೊಳೆನರಸೀಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನಲ್ಲಿ ಮಸ್ಟರಿಂಗ್ ಕೇಂದ್ರ ತೆರೆದು ಚುನಾವಣೆ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ಮತದಾನ ಯಂತ್ರ, ಕಂಟ್ರೋಲ್ ಯೂನಿಟ್, ವಿವಿ ಪ್ಯಾಟ್ ಮತ್ತು ಅಗತ್ಯ ಪರಿಕರಗಳನ್ನು ವಿತರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

  ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಶಿಕ್ಷಕರು ಪೊಲೀಸರು ಕರ್ತವ್ಯ ನಿರ್ವಹಿಸುವ ಮತಗಟ್ಟೆ ಸಂಖ್ಯೆ ಮತ್ತು ಇತರ ಮಾಹಿತಿಯನ್ನು ಸಹಾಯಕ ಚುನಾವಣಾಧಿಕಾರಿ ಸತೀಶ್ ಬಾಬು ಹಾಗೂ ತಹಸೀಲ್ದಾರ್ ಪಿ.ಸಿ.ಪ್ರವೀಣ್ ಕುಮಾರ್ ಅವರಿಂದ ಪಡೆದರು. ಮಾಸ್ಟರ್ ಟ್ರೈ ನರ್‌ಗಳಾದ ಗಿರೀಶ್, ಕುಮಾರಸ್ವಾಮಿ, ಪ್ರಭುಶಂಕರ್, ಸುಜಾತಾ ಹಾಗೂ ಬಿ.ಆರ್.ರಾಮಚಂದ್ರಪ್ಪ ಅಗತ್ಯ ಮಾರ್ಗದರ್ಶನ ನೀಡಿದರು.

  ಚುನಾವಣಾ ವಿಭಾಗದ ಶಿರಸ್ತೇದಾರ್ ಉದಯ್, ತಾ.ಪಂ. ಇಒ ಕುಸುಮಾಧರ್, ತಾ.ಪಂ. ಯೋಜನಾಧಿಕಾರಿ ಪಿ.ಆರ್.ಗೋಪಾಲ್, ಉಪ ತಹಸೀಲ್ದಾರ್ ರೂಪೇಶ್, ಡಿವೈಎಸ್‌ಪಿ ಅಶೋಕ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ವೃತ್ತ ನಿರೀಕ್ಷಕ ಸುರೇಶ್‌ಕುಮಾರ್, ನಗರ ಠಾಣೆ ಪಿಎಸ್ಸೆ ಅಜಯ್ ಕುಮಾರ್, ಇಸಿಒ ಸೈಯದ್ ಖಾದ್ರಿ, ಕಂದಾಯ ಇಲಾಖೆಯ ಪ್ರಸಾದ್, ಗ್ರಾಮ ಲೆಕ್ಕಾಧಿಕಾರಿ ಉದಯ್ ಬಣಕರ್ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts