More

    ಬಂಧಿತ ಮುಸ್ಲಿಮರ ಬಳಕೆ- ಕಂಪ್ಯೂಟರ್,​ ಹತ್ತಿ, ಕೂದಲಾಯ್ತು ಬ್ಯಾನ್:​ ಚೀನಾಕ್ಕೆ ಶಾಕ್​ ಕೊಟ್ಟ ದೊಡ್ಡಣ್ಣ

    ವಾಷಿಂಗ್ಟನ್​: ಇಡೀ ವಿಶ್ವಕ್ಕೆ ಕರೊನಾ ತಂದಿಟ್ಟು, ಸಂಕಷ್ಟಕ್ಕೆ ದೂಡಿದ ಕುತಂತ್ರಿ ಚೀನಾಕ್ಕೆ ಇದೀಗ ಪೆಟ್ಟಿನ ಮೇಲೆ ಪೆಟ್ಟು ಬೀಳುತ್ತಲೇ ಸಾಗಿದೆ.

    ಇದಾಗಲೇ ಹಲವಾರು ಆ್ಯಪ್​ಗಳನ್ನು ಭಾರತ ನಿಷೇಧ ಮಾಡುವುದರೊಂದಿಗೆ ಲಕ್ಷಲಕ್ಷ ಕೋಟಿ ಹಣದ ನಷ್ಟದಿಂದ ಒದ್ದಾಡುತ್ತಿರುವ ಚೀನಾಕ್ಕೆ ಇದಾಗಲೇ ಅಮೆರಿಕ ಕೂಡ ಭಾರಿ ಶಾಕ್​ ನೀಡಿ, ಚೀನಾಕ್ಕೆ ಮುಖಭಂಗ ಮಾಡಿದೆ.

    ಆದರೆ ಅಮೆರಿಕ ಇಷ್ಟಕ್ಕೇ ಸುಮ್ಮನಾಗಿಲ್ಲ. ಇದೀಗ ಕಂಪ್ಯೂಟರ್ ಭಾಗಗಳು, ಹತ್ತಿ, ಕೂದಲಿನ ಉತ್ಪನ್ನಗಳನ್ನು ಒಳಗೊಂಡಂತೆ ಐದು ವಸ್ತುಗಳ ಆಮದನ್ನು ಅಮೆರಿಕ ನಿಷೇಧಿಸಿದೆ.

    ಹತ್ತಿ, ಕಂಪ್ಯೂಟರ್ ಭಾಗಗಳು, ಕೂದಲು ಉತ್ಪನ್ನಗಳು ಹಾಗೂ ಕ್ಸಿನ್ ಜಿಯಾಂಗ್​ನಲ್ಲಿನ ಕೌಶಲ ಹಾಗೂ ತರಬೇತಿ ಕೇಂದ್ರಗಳಲ್ಲಿ ತಯಾರಿಸಿದ ಎಲ್ಲ ಉತ್ಪನ್ನಗಳಿಗೆ ನಿಷೇಧ ಹೇರಲಾಗಿದೆ ಎಂದು ಅಮೆರಿಕದ ಡಿಪಾರ್ಟ್​ಮೆಂಟ್​ ಆಫ್ ಹೋಮ್ ಲ್ಯಾಂಡ್ ಸೆಕ್ಯುರಿಟಿ (ಡಿಎಚ್​ಎಸ್) ಪ್ರಕಟಣೆಯಲ್ಲಿ ತಿಳಿಸಿದೆ.

    ಇದನ್ನೂ ಓದಿ: ಪ್ರಯೋಗಾಲಯದಲ್ಲಿಯೇ ಕರೊನಾ ಸೃಷ್ಟಿ: ಚೀನಿಯರ ಕ್ರೌರ್ಯಕ್ಕೆ ಪುರಾವೆ ನೀಡುವೆ ಎಂದ ಚೀನಾದ ವೈರಾಲಾಜಿಸ್ಟ್​!

    ಅಷ್ಟಕ್ಕೂ ಡಿಎಚ್​ಎಸ್​ನಲ್ಲಿ ತಯಾರಿಸಿರುವ ಉತ್ಪನ್ನಗಳ ಮೇಲೆ ಅಮೆರಿಕ ಕಿಡಿ ಕಾರಿರುವ ಕಾರಣವೆಂದರೆ, ಈ ಭಾಗದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಇವರನ್ನು ಬಲವಂತವಾಗಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಳ್ಳಲಾಗುತ್ತಿದೆ. ಬಂಧಿತ ಕಾರ್ಮಿಕ ಶಿಬಿರಗಳಲ್ಲಿ ಇವುಗಳನ್ನು ತಯಾರಿಸಲಾಗುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

    ಈ ಉತ್ಪನ್ನಗಳನ್ನು ತಯಾರು ಮಾಡುತ್ತಿರುವುದು ಉಯ್ಘರ್ ಸ್ವಾಯತ್ತ ಪ್ರದೇಶದಲ್ಲಿ. ಅಲ್ಲಿ ಸರ್ಕಾರಿ ಪ್ರಾಯೋಜಿತ ಬಲವಂತದ ಕಾರ್ಮಿಕ ಪದ್ಧತಿ ಇದೆ. ಚೀನಾ ಸರ್ಕಾರವೇ ಉಯ್ಘರ್ ಜನರು ಹಾಗೂ ಅಲ್ಲಿನ ಅಲ್ಪಸಂಖ್ಯಾತ ಜನಾಂಗದ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಡಿಎಚ್ ಎಸ್ ಹೇಳಿಕೆ ತಿಳಿಸಿದೆ.

    ಕರೊನಾ ಹರಡುವಿಕೆಯ ನಂತರ ಚೀನಾದ ವಿರುದ್ಧ ಕಿಡಿಕಾರುತ್ತಲೇ ಬಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇದೀಗ ಕೋಟ್ಯಂತರ ವ್ಯವಹಾರ ನಡೆಸುತ್ತಿರುವ ಐದು ಉತ್ಪನ್ನಗಳನ್ನು ಬ್ಯಾನ್​ ಮಾಡುವ ಮೂಲಕ ಚೀನಾಕ್ಕೆ ಭಾರಿ ಆಘಾತ ನೀಡಿದ್ದಾರೆ.

    ಸುಮ್ಮನಿರದೇ ಇರುವೆ ಬಿಟ್ಟುಕೊಂಡ ಪ್ರೇಮಿಗಳು: ಕೋರ್ಟ್​ನಿಂದ ಬಿತ್ತು ₹50 ಸಾವಿರ ದಂಡ!

    16 ಬಾರಿ ಬಂಧಿಸಿದ್ದ ಪೊಲೀಸ್​ ಅಧಿಕಾರಿಗೇ ಕಿಡ್ನಿ ಕೊಟ್ಟು ಕಾಪಾಡಿದಳು!

    ಪ್ರಧಾನಿಗೆ ದೇಶದ ಬಗ್ಗೆ ಕಾಳಜಿ ಇಲ್ಲ ಎಂದು ಅಮೆರಿಕದಿಂದ ರಾಹುಲ್​ ಗಾಂಧಿ ಟ್ವೀಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts