

ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ಒಂದು ಸಾರ್ವಜನಿಕ ಉದ್ಯಮ ವಲಯವಾಗಿದ್ದು, ಪರಮಾಣು ಇಂಧನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಜಾರ್ಖಂಡ್ನ ಘಟಕದಲ್ಲಿ ಮೈನಿಂಗ್ ಮೇಟ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಒಟ್ಟು ಹುದ್ದೆಗಳು: 51
ಯುಸಿಐಎಲ್ನ ಮೈನಿಂಗ್ ಮೇಟ್ ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಯ ಕಾರ್ಯಕ್ಷಮತೆ, ಸಂಸ್ಥೆಯ ಅವಶ್ಯಕತೆ ಅನುಸಾರ ಅವಧಿ ವಿಸ್ತರಿಸಲಾಗುವುದು. ಅಭ್ಯರ್ಥಿಗಳು ದೈಹಿಕವಾಗಿ ಫಿಟ್ ಇರಬೇಕು ಎಂದು ಸೂಚಿಸಲಾಗಿದೆ. ಹುದ್ದೆಗಳಲ್ಲಿ ಸರ್ಕಾರದ ನಿಯಮದನ್ವಯ ಮೀಸಲಾತಿ ಅನ್ವಯಿಸುತ್ತದೆ.
ವಿದ್ಯಾರ್ಹತೆ: ಇಂಟರ್ಮೀಡಿಯೇಟ್ ಜತೆ ಡಿಜಿಎಂಎಸ್ನಿಂದ ನೀಡಲ್ಪಟ್ಟ ಕಾಂಪಿಟೆನ್ಸಿ ಫಾರ್ ಮೆಟಲಿೆರಸ್ ಮೈನ್ಸ್ನಲ್ಲಿ ಮೈನಿಂಗ್ ಮೇಟ್ ಪ್ರಮಾಣಪತ್ರ ಪಡೆದಿರಬೇಕು. ಪ್ರಮಾಣ ಪತ್ರ ಪಡೆದ ನಂತರ ಅಂಡರ್ಗ್ರೌಂಡ್ ಮೆಟಲ್ ಮೈನ್ಸ್ನಲ್ಲಿ ಮೈನಿಂಗ್ ಮೇಟ್ ಆಗಿ ಕೆಲಸ ಮಾಡಿರುವ ಕನಿಷ್ಠ ಒಂದು ವರ್ಷದ ವೃತ್ತಿ ಅನುಭವ ಹೊಂದಿರಬೇಕು. ಅಭ್ಯರ್ಥಿಗಳಿಗೆ ಹಿಂದಿ/ ಸ್ಥಳಿಯ ಭಾಷೆ ತಿಳಿದಿರಬೇಕು.
ವಯೋಮಿತಿ: 30.4.2021ಕ್ಕೆ ಅನ್ವಯವಾಗುವಂತೆ ಸಾಮಾನ್ಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಎಸ್ಸಿ, ಎಸ್ಟಿಗೆ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ವೇತನ: ಮಾಸಿಕ 34,785 ರೂ. ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ಆಧರಿಸಿ ಶಾರ್ಟ್ಲಿಸ್ಟ್ ಮಾಡಲಾಗುವುದು. ನಂತರ ಈ ಅಭ್ಯರ್ಥಿಗಳನ್ನು ಟ್ರೇಡ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು.
ಸೂಚನೆ: ವೃತ್ತಿ ಅನುಭವ ಪ್ರಮಾಣಪತ್ರವನ್ನು ಸಂಬಂಧಪಟ್ಟ ಗಣಿ ವ್ಯವಸ್ಥಾಪಕರಿಂದ ಸರಿಯಾಗಿ ಪ್ರಮಾಣೀಕರಿಸಿ ಪಡೆದು ಸಲ್ಲಿಸತಕ್ಕದ್ದು. ಆಸಕ್ತ ಅಭ್ಯರ್ಥಿಗಳು ತಮ್ಮ ದೂರವಾಣಿ ಸಂಖ್ಯೆ, ಇಮೇಲ್ ಐಡಿ, ಪ್ರಸ್ತುತ ವಿಳಾಸ, ಜಾತಿ ಪ್ರಮಾಣಪತ್ರ, ಶೈಕ್ಷಣಿಕ ದಾಖಲೆಗಳ ಪತ್ರಿ ಹಾಗೂ ಭಾವಚಿತ್ರವನ್ನು ಸ್ಪೀಡ್ ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಚೇರಿಗೆ ತಲುಪಿಸಬೇಕು ಎಂದು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 10.6.2021
ಅರ್ಜಿಸಲ್ಲಿಕೆ ವಿಳಾಸ: General Manager(I/P&IRs/CP), Uranium Corporation of India Limited, PO : Jaduguda Mines, Dist: East Singhbhum, Jharkhand - 832 102
ಅಧಿಸೂಚನೆಗೆ: https://bit.ly/2TaCJRa
ಮಾಹಿತಿಗೆ: http://www.ucil.gov.in