ಎಲೆಕ್ಟ್ರಿಕಲ್‌, ಸಿವಿಲ್‌ನಲ್ಲಿ ಡಿಪ್ಲೋಮಾ ಆಗಿದೆಯೆ? ಕೇಂದ್ರದ ಪವರ್‌ಗ್ರಿಡ್‌ನಿಂದ ಅರ್ಜಿ ಆಹ್ವಾನ

powergrid
Published on

ಪವರ್​ ಗ್ರಿಡ್​ ಕಾರ್ಪೋರೇಷನ್‌ ಆಫ್‌​ ಇಂಡಿಯಾ ಲಿಮಿಟೆಡ್​ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದ್ದು, ಪ್ರಸ್ತುತ ಉತ್ತರಭಾರತ ಪ್ರದೇಶದ ಹಲವು ನಗರಗಳಲ್ಲಿ ಡಿಪ್ಲೊಮಾ ಟ್ರೇನಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಒಟ್ಟು ಸ್ಥಾನಗಳು: 40

ಪವರ್​ ಗ್ರಿಡ್​ ಸಂಸ್ಥೆಗೆ ನೇಮಕ ಮಾಡಿಕೊಳ್ಳಲಾಗುವ ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ. ಉತ್ತರಪ್ರದೇಶ, ಉತ್ತರಾಖಂಡ, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಲಿಖಿತ ಪರೀಕ್ಷೆ/ ಕಂಪ್ಯೂಟರ್​ ಆಧಾರಿತ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ದೆಹಲಿ, ಜೈಪುರ, ಡೆಹ್ರಾಡೂನ್​ ಪರೀಕ್ಷಾ ಕೇಂದ್ರವಾಗಿರಲಿದೆ.

ಸ್ಥಾನಗಳ ವಿವರ

* ಡಿಪ್ಲೊಮಾ ಟ್ರೇನಿ (ಎಲೆಕ್ಟ್ರಿಕಲ್​) -30

* ಡಿಪ್ಲೊಮಾ ಟ್ರೇನಿ (ಸಿವಿಲ್​) -5

ವಿದ್ಯಾರ್ಹತೆ: ಎಲೆಕ್ಟ್ರಿಕಲ್​/ ಎಲೆಕ್ಟ್ರಿಕಲ್​ ಆ್ಯಂಡ್​ ಎಲೆಕ್ಟ್ರಾನಿಕ್ಸ್​/ ಪವರ್​ ಸಿಸ್ಟಂ/ ಪವರ್​ ಇಂಜಿನಿಯರಿಂಗ್​/ ಸಿವಿಲ್​ ಇಂಜಿನಿಯರಿಂಗ್​ನಲ್ಲಿ 3 ವರ್ಷದ ಡಿಪ್ಲೊಮಾ ಮಾಡಿರಬೇಕು. ಬಿಇ, ಬಿ.ಟೆಕ್​/ ಎಂಇ/ ಎಂ.ಟೆಕ್​ ಮಾಡಿದ್ದು ಡಿಪ್ಲೊಮಾ ಮಾಡಿರದ ಅಭ್ಯರ್ಥಿಗಳು ಅರ್ಹರಾಗಿರುವುದಿಲ್ಲ.

ವಯೋಮಿತಿ: 15.6.2021ಕ್ಕೆ ಅನ್ವಯವಾಗುವಂತೆ ಸಾಮಾನ್ಯವರ್ಗದ ಅಭ್ಯರ್ಥಿ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ ಗರಿಷ್ಠ 27 ವರ್ಷ, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ ಗರಿಷ್ಠ 30 ವರ್ಷ, ಎಸ್ಸಿ, ಎಸ್ಟಿಗೆ 32 ವರ್ಷ ನಿಗದಿಪಡಿಸಲಾಗಿದೆ.

ಮೀಸಲಾತಿ: 35 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 13 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 8, ಎಸ್​ಸಿಗೆ 7, ಎಸ್ಟಿಗೆ 2, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 5 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ಎಲೆಕ್ಟ್ರಿಕಲ್​ ಡಿಪ್ಲೊಮಾ ಟ್ರೇನಿಯಲ್ಲಿ 2 ಸ್ಥಾನ ಕಾಯ್ದಿರಿಸಲಾಗಿದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಸಂಸ್ಥೆಯ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 300 ರೂ. ಶುಲ್ಕ ಪಾವತಿಸಬೇಕು.

ವೇತನ: ತರಬೇತಿ ಅವಧಿಯಲ್ಲಿ ಮಾಸಿಕ 27,500 ರೂ. ಸ್ಟೈಪೆಂಡ್​ ನೀಡಲಾಗುವುದು. ನಂತರ ಇದೇ ವೇತನ ಶ್ರೇಣಿಯಲ್ಲಿ ಜೂನಿಯರ್​ ಇಂಜಿನಿಯರ್​ ಹುದ್ದೆಗೆ ನೇಮಿಸಲಾಗುವುದು. ಆಗ ಡಿಎ, ಮನೆ ಬಾಡಿಗೆ ಭತ್ಯೆ, ಮಾಸಿಕ ಭತ್ಯೆ ಹಾಗೂ ಇತರ ಭತ್ಯೆಗಳನ್ನು ನೀಡಲಾಗುವುದು.

ಸೇವಾ ಬಾಂಡ್​: ಆಯ್ಕೆಯಾಗಿವ ಅಭ್ಯರ್ಥಿಗಳು ಒಂದು ವರ್ಷದ ತರಬೇತಿ ಪಡೆಯಬೇಕು. ನಂತರ ಸಂಸ್ಥೆಯಲ್ಲಿ 3 ವರ್ಷ ಸೇವೆ ಸಲ್ಲಿಸುವುದಾಗಿ ಸಾಮಾನ್ಯವರ್ಗ, ಇತರ ಹಿಂದುಳಿದ ವರ್ಗ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳು 2,50,000 ರೂ. ಸೇವಾ ಬಾಂಡ್​ ಹಾಗೂ ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳು 1,25,000 ರೂ. ಸೇವಾ ಬಾಂಡ್​ ನೀಡಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 15.6.2021

ಅಧಿಸೂಚನೆಗೆ: https://bit.ly/3wzf3UZ

ಮಾಹಿತಿಗೆ: https://careers.powergrid.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net