ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಿರಾ?ವಿಜ್ಞಾನ, ತಂತ್ರಜ್ಞಾನ ಇಲಾಖೆಯಲ್ಲಿ ಇವೆ ಹುದ್ದೆಗಳು...

job
Published on

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾಗಿರುವ ವಿಜ್ಞಾನ ಪ್ರಸಾರ್​ನಲ್ಲಿ ಆರಂಭಿಸುತ್ತಿರುವ ಡಿಎಸ್‍ಟಿ ಮೀಡಿಯಾ ಕೋ-ಆರ್ಡಿನೇಷನ್ ಆ್ಯಂಡ್ ಕಮ್ಯುನಿಕೇಷನ್ ಸೆಲ್ ಯೋಜನೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳು 3 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಪ್ರತಿವರ್ಷ ಒಪ್ಪಂದವನ್ನು ನವೀಕರಿಸಲಾಗುವುದು.

ಒಟ್ಟು ಹುದ್ದೆಗಳು: 12

ಹುದ್ದೆ ವಿವರ

- ಪ್ರಿಂಟ್, ಎಡಿಟೋರಿಯಲ್, ಪ್ರೊಡಕ್ಷನ್

* ಸೀನಿಯರ್ ಪ್ರಾಜೆಕ್ಟ್ ಕನ್ಸಲ್ಟಂಟ್ - 1

* ಪ್ರಾಜೆಕ್ಟ್ ಕನ್ಸಲ್ಟಂಟ್ - 1

* ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟಂಟ್ (ಇಂಗ್ಲಿಷ್, ಹಿಂದಿ) - 2

* ಪ್ರಾಜೆಕ್ಟ್ ಅಸೋಸಿಯೇಟ್ - 2

* ಪ್ರಾಜೆಕ್ಟ್ ಅಸಿಸ್ಟೆಂಟ್ - 2

- ಡಿಜಿಟಲ್ ಆ್ಯಂಡ್ ವೆಬ್ ಮೀಡಿಯಾ ಮ್ಯಾನೇಜ್‍ಮೆಂಟ್

* ಪ್ರಾಜೆಕ್ಟ್ ಕನ್ಸಲ್ಟಂಟ್ - 1

* ಅಸೋಸಿಯೇಟ್ ಪ್ರಾಜೆಕ್ಟ್ ಕನ್ಸಲ್ಟಂಟ್ - 1

- ಎಲೆಕ್ಟ್ರಾನಿಕ್ ಆ್ಯಂಡ್ ಸೋಷಿಯಲ್

* ಪ್ರಾಜೆಕ್ಟ್ ಕನ್ಸಲ್ಟಂಟ್ - 1

* ಪ್ರಾಜೆಕ್ಟ್ ಅಸೋಸಿಯೇಟ್ - 1

ವಿದ್ಯಾರ್ಹತೆ: ವಿಜ್ಞಾನ/ ಫೈನ್ ಆಟ್ರ್ಸ್ ನಲ್ಲಿ ಪದವಿ/ ಡಿಪ್ಲೋಮಾ, ವಿಜ್ಞಾನ, ಇನ್ಫಾರ್ಮೇಷನ್ ಟೆಕ್ನಾಲಜಿ/ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಪರಿಸರ, ಕೃಷಿ, ಮೆಡಿಸಿನ್, ಮೀಡಿಯಾ ಆ್ಯಂಡ್ ಮಾಸ್‍ಕಮ್ಯುನಿಕೇಷನ್, ಸೈನ್ಸ್ ಕಮ್ಯುನಿಕೇಷನ್, ಇಂಗ್ಲಿಷ್ ಅಥವಾ ತತ್ಸಮಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ವೃತ್ತಿ ಅನುಭವ ಹೊಂದಿರಬೇಕು. ವಿಜ್ಞಾನ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದಿರಬೇಕು.

ವಯೋಮತಿ: ಗರಿಷ್ಠ 60 ವರ್ಷ. ಯುವಕರಿಗೆ ಮೊದಲ ಆದ್ಯತೆ.

ವೇತನ: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 32,500 - 1,04,000 ರೂ. ವೇತನ ಇದೆ.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ವಯಸ್ಸು ಆಧರಿಸಿ ಷಾರ್ಟ್‍ಲಿಸ್ಟ್ ಮಾಡಲಾಗುವ ಅಭ್ಯರ್ಥಿಗಳನ್ನು ಕೌಶಲ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 16.4.2021

ಅಧಿಸೂಚನೆಗೆ: https://bit.ly/3un6qfh

ಮಾಹಿತಿಗೆ: https://vigyanprasar.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net