More

    ಕ್ರೀಡಾ ಪ್ರಾಧಿಕಾರದಲ್ಲಿ ಯುವ ವೃತ್ತಿಪರರಿಗೆ ಅವಕಾಶ- 60 ಸಾವಿರ ರೂ.ವರೆಗೆ ಸಂಬಳ

    ಭಾರತೀಯ ಕ್ರೀಡಾ ಪ್ರಾಧಿಕಾರದ (ಸ್ಪೋಟ್ರ್ಸ್ ಅಥಾರಿಟಿ ಆಫ್ ಇಂಡಿಯಾ- ಎಸ್‍ಎಐ) ದೆಹಲಿ ಕಚೇರಿಯಲ್ಲಿ ಯಂಗ್ ಪೆÇÉ್ರಷನಲ್ಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
    ಒಟ್ಟು ಹುದ್ದೆಗಳು: 21

    ಎಸ್‍ಎಐನ ಹುದ್ದೆಗಳಿಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳನ್ನು ಆರಂಭಿಕವಾಗಿ 2 ವರ್ಷದ ಒಪ್ಪಂದದ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ನಂತರ ಸಂಸ್ಥೆಯ ಅಗತ್ಯತೆ ಹಾಗೂ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಅವಧಿಯನ್ನು 1 ವರ್ಷ ವಿಸ್ತರಿಸಲಾಗುವುದು. ಅಭ್ಯರ್ಥಿಗಳನ್ನು ದೇಶದ ಯಾವುದೇ ಭಾಗಕ್ಕಾದರೂ ವರ್ಗಾವಣೆ ಮಾಡಬಹುದಾಗಿದೆ. ಆನ್‍ಲೆನ್‍ಮೂಲಕ ಸಲ್ಲಿಕೆಯಾಗುವ ಅರ್ಜಿಗಳಿಗಷ್ಟೇ ಮಾನ್ಯತೆ ಎಂದು ತಿಳಿಸಲಾಗಿದೆ.

    ಹುದ್ದೆ ವಿವರ
    * ಯಂಗ್ ಪ್ರೊಫೆಷನಲ್ಸ್ (ಅಥ್ಲೀಟ್ ರಿಲೇಷನ್ ಮ್ಯಾನೇಜರ್) – 21
    ಬಿ.ಟೆಕ್/ ಎಂಬಿಎ/ ಪಿಜಿಡಿಎಂ/ ಸ್ಪೋಟ್ಸ್ ಮ್ಯಾನೇಜ್‍ಮೆಂಟ್‍ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಅಥವಾ ಎಂಬಿಎ/ ಪಿಜಿಡಿಎಂ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

    ಹುದ್ದೆ ಜವಾಬ್ದಾರಿ: ಅಭ್ಯರ್ಥಿಗೆ ನಿಯೋಜಿಸಲಾದ ಕ್ರೀಡಾಪಟುಗಳ ಅಗತ್ಯ ಸೇವೆ ಸಲ್ಲಿಸುವುದು, ಎಸ್‍ಎಐನಲ್ಲಿ ಕ್ರೀಡಾಪಟುವಿನ ಪ್ರಸ್ತಾಪದ ಬಗ್ಗೆ ಆರಂಭದಿಂದ ಕೊನೆಯವರೆಗೆ ನೋಡಿಕೊಳ್ಳುವುದು, ಅಗತ್ಯವಿದ್ದಾಗ ಕ್ರೀಡಾಪಟುವಿನ ಜತೆ ವೈಯಕ್ತಿಕ ಸಂವಹನ ನಡೆಸಿ ಬೆಂಬಲ ನೀಡುವುದು ಇತ್ಯಾದಿ.

    ವಯೋಮಿತಿ: ಗರಿಷ್ಠ 35 ವರ್ಷ.

    ವೇತನ: ಮಾಸಿಕ 40,000-60,000 ರೂ.ವರೆಗೆ ಇದೆ. ಇತರ ಯಾವುದೇ ಭತ್ಯೆ ಇರುವುದಿಲ್ಲ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಕ್ರೀಡಾ ಕ್ಷೇತ್ರದಲ್ಲಿನ ವೃತ್ತಿ ಅನುಭವ, ಸರ್ಕಾರಿ/ ಖಾಸಗಿ ಸಂಸ್ಥೆಯಲ್ಲಿನ ವೃತ್ತಿ ಅನುಭವ, ರಾಷ್ಟ್ರೀಯ, ಅಂತಾರಾಷ್ಟ್ರಿಯ ಕ್ರೀಡೆಯಲ್ಲಿ ಪಾಲ್ಗೊಂಡ ಅನುಭವ ಆಧರಿಸಿ 1:5 ಅನುಪಾತದಲ್ಲಿ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ನಂತರ ಅಂತಿಮ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಲಾಗುವುದು. ಕೆಲಸಕ್ಕೆ ಸೇರುವಾಗ ಅಭ್ಯರ್ಥಿಗಳು ತಮ್ಮ ಎಲ್ಲ ದಾಖಲೆಗಳ ಮೂಲ ಪ್ರತಿಯನ್ನು ಸಲ್ಲಿಸತಕ್ಕದ್ದು.

    ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಹೆಸರಲ್ಲಿ ಅಥವಾ ಅನಾಮಧೇಯವಾಗಿ ಅಥವಾ ಬೇರೆಯವರ ಹೆಸರಲ್ಲಿ ಪುಸ್ತಕ ಪ್ರಕಾಶನ, ರೇಡಿಯೋಗಳಲ್ಲಿ ಸಂದರ್ಶನ ನೀಡುವುದು, ಲೇಖನಗಳನ್ನು ಬರೆಯುವಂತಿಲ್ಲ. ಸಂಸ್ಥೆಯ ಗೌಪ್ಯತೆ, ರಹಸ್ಯಗಳನ್ನು ಇತರರಿಗೆ ಬಹಿರಂಗಪಡಿಸುವಂತಿಲ್ಲ, ಸರ್ಕಾರದ ಹಿತಾಸಕ್ತಿಗೆ ಸಂಬಂಧಿಸಿದಂತೆ ಸಿಬ್ಬಂದಿಯು ಯಾವುದೇ ಸಂದರ್ಭದಲ್ಲಿ ಅಭಿಪ್ರಾಯ, ಸಲಹೆ ನೀಡುವಂತಿಲ್ಲ ಹಾಗೂ ಪ್ರತಿನಿಧಿಯಾಗಿ ಭಾಗವಹಿಸುವಂತಿಲ್ಲ.

    ಅರ್ಜಿ ಸಲ್ಲಿಸಲು ಕೊನೇ ದಿನ: 16.4.2021
    ಅಧಿಸೂಚನೆಗೆ: https://bit.ly/2Ptj1ii

    ಮಾಹಿತಿಗೆ: https://sportsauthorityofindia.nic.in

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಮಷಿನ್ ಟೂಲ್ಸ್ ಇಂಡಸ್ಟ್ರಿಯ ಅನುಭವಸ್ಥರಿಗೆ ಎಚ್‌ಎಂಟಿಯಲ್ಲಿದೆ ದೊಡ್ಡ ಅವಕಾಶ: ಅರ್ಜಿ ಆಹ್ವಾನ

    ಪದವೀಧರರಿಗೆ ಮೈಸೂರಿನ ವಾಕ್ ಶ್ರವಣ ಸಂಸ್ಥೆಯಲ್ಲಿ ಉದ್ಯೋಗ- ₹60 ಸಾವಿರದವರೆಗೆ ಸಂಬಳ

    ಇಸ್ರೋದಲ್ಲಿ ಕೆಲಸ ಮಾಡಲು ಬಯಸುವವರಿಗೆ ಗುಡ್​ ನ್ಯೂಸ್​: ವಿವಿಧ ಘಟಕಗಳಲ್ಲಿ ಭರ್ಜರಿ ಉದ್ಯೋಗಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts