ಇಸ್ರೋದಲ್ಲಿ ಕೆಲಸ ಮಾಡಲು ಬಯಸುವವರಿಗೆ ಗುಡ್​ ನ್ಯೂಸ್​: ವಿವಿಧ ಘಟಕಗಳಲ್ಲಿ ಭರ್ಜರಿ ಉದ್ಯೋಗಾವಕಾಶ

isro
Published on

ಇಂಡಿಯನ್ ಸ್ಪೇಸ್ ರಿಸರ್ಚ್ ಆರ್ಗನೈಸೇಷನ್ (ಇಸ್ರೋ) ಕೇಂದ್ರಗಳಲ್ಲಿ ಗ್ರೂಪ್ ಎ ಗೆಜೆಟೆಡ್ ಹುದ್ದೆ ಹಾಗೂ ನಾನ್‍ಗೆಜೆಟೆಡ್ ಗ್ರೂಪ್ ಎ ಹುದ್ದೆಗಳಿಗೆ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ.

ಒಟ್ಟು ಹುದ್ದೆಗಳು: 24

ಇಸ್ರೋದಲ್ಲಿನ ಹುದ್ದೆಗಳಿಗೆ ಒಬ್ಬ ಅಭ್ಯರ್ಥಿ ಒಂದು ಹುದ್ದೆಗೆ ಮಾತ್ರ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವುದಕ್ಕೂ ಮುನ್ನ ಅಭ್ಯರ್ಥಿಗಳು ನ್ಯಾಷನಲ್ ಕರಿಯರ್ ಸರ್ವೀಸಸ್‍ನಲ್ಲಿ ನೋಂದಾಯಿತರಾಗಿರಬೇಕು.

ಹುದ್ದೆ ವಿವರ

- ಇಸ್ರೋ ಕೇಂದ್ರ ಹಾಗೂ ಘಟಕಗಳಲ್ಲಿನ ಹುದ್ದೆ

* ಅಡ್ಮಿನಿಸ್ಟ್ರೇಟೀವ್ ಆಫೀಸರ್ - 4

* ಅಕೌಂಟ್ಸ್ ಆಫೀಸರ್ - 4

* ಪರ್ಚೇಸ್ ಆ್ಯಂಡ್ ಸ್ಟೋರ್ಸ್ ಆಫೀಸರ್ - 9

- ಬಾಹ್ಯಾಕಾಶ ಇಲಾಖೆ ಅಡಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಯಲ್ಲಿನ ಹುದ್ದೆಗಳು

* ಅಡ್ಮಿನಿಸ್ಟ್ರೇಟೀವ್ ಆಫೀಸರ್ - 2

* ಅಕೌಂಟ್ಸ್ ಆಫೀಸರ್ - 2

* ಪರ್ಚೇಸ್ ಆ್ಯಂಡ್ ಸ್ಟೋರ್ಸ್ ಆಫೀಸರ್ - 3

ವಿದ್ಯಾರ್ಹತೆ: ಅಡ್ಮಿನಿಸ್ಟ್ರೇಟೀವ್ ಆಫೀಸರ್ ಹುದ್ದೆಗೆ ಎಂಬಿಎ ಪದವಿ. ಅಕೌಂಟ್ ಆಫೀಸರ್‍ಗೆ ಎಸಿಎ/ ಎïಸಿಎ/ ಎಐಸಿಡಬ್ಲುೃಎ/ ಎïಐಸಿಡಬ್ಲುೃಎ/ ಎಂಬಿಎ. ಪರ್ಚೇಸ್ ಆ್ಯಂಡ್ ಸ್ಟೋರ್ ಆಫೀಸರ್ ಹುದ್ದೆಗೆ ಮಾರ್ಕೇಟಿಂಗ್/ ಮೆಟಿರಿಯಲ್ ಮ್ಯಾನೇಜ್‍ಮೆಂಟ್‍ನಲ್ಲಿ ಎಂಬಿಎ ಮಾಡಿರಬೇಕು. ಎಲ್ಲ ಹುದ್ದೆಗೂ ಒಂದು ವರ್ಷದ ಸೂಪರ್‍ವೈಸರ್ ವೃತ್ತಿ ಅನುಭವ ಅವಶ್ಯ. ಹುದ್ದೆ ಆಧಾರಿತ ವಿಷಯಗಳಲ್ಲಿ ಪದವಿ/ ಸ್ನಾತಕೋತ್ತರ ಪದವಿಗಳಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.

ವಯೋಮಿತಿ: 21.4.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 35 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಮಾಜಿ ಸೈನಿಕ, ಮಹಿಳಾ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ಏ.24ರ ಒಳಗೆ ಆನ್‍ಲೈನ್ ಮೂಲಕ 250 ರೂ. ಶುಲ್ಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ: ಬೆಂಗಳೂರು ಸೇರಿ ಇತರ 12 ಸ್ಥಳಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಕನಿಷ್ಠ ಶೇ.50 ಅಂಕ ಪಡೆಯಬೇಕು. ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1:7ರ ಅನುಪಾತದಲ್ಲಿ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮಾಹಿತಿಗಳನ್ನು ಅಭ್ಯರ್ಥಿಗಳಿಗೆ ಮೇಲ್ ಹಾಗೂ ವೆಬ್‍ಸೈಟ್‍ನಲ್ಲಿ ಮೂಲಕ ತಿಳಿಸಲಾಗುವುದು.

ವೇತನ: ಮಾಸಿಕ ಮೂಲ ವೇತನ 56,100 ರೂ. ಇರಲಿದ್ದು, ಡಿಎ, ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ, ಪೆನ್ಷನ್, ವೈದ್ಯಕೀಯ, ಕ್ಯಾಂಟೀನ್ ಸೌಲಭ್ಯ, ರಜಾ ಭತ್ಯೆ ಹಾಗೂ ಇತರ ಸೌಲಭ್ಯಗಳನ್ನು ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 21.4.2021

ಅಧಿಸೂಚನೆಗೆ: https://bit.ly/3cJOOnF

ಮಾಹಿತಿಗೆ: http://www.isro.gov.in

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net