ಫಾದರ್ ಮುಲ್ಲರ್ ಸೇವಾ ಮನೋಭಾವ ಸ್ತುತ್ಯರ್ಹ : ಡಾ.ಸಂಜಯ್ ಗುಪ್ತಾ ಮೆಚ್ಚುಗೆ

mullar
‘ಮುಲ್ಲರ್ ಕಾಂಪ್ಲೆಕ್ಸ್’ ವಾಣಿಜ್ಯ ಸಂಕೀರ್ಣಕ್ಕೆ ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಶಂಕುಸ್ಥಾಪನೆ ನೆರವೇರಿಸಿದರು.
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಫಾದರ್ ಮುಲ್ಲರ್ ಸಂಸ್ಥೆ ಸೇವಾ ಮನೋಭಾವದೊಂದಿಗೆ ನಿರಂತರವಾಗಿ ಕಾರ್ಯಾಚರಿಸುತ್ತಿರುವುದು ಸ್ತುತ್ಯರ್ಹ ಎಂದು ಭಾರತ ಸರ್ಕಾರದ ಹೋಮಿಯೋಪಥಿ ರಾಷ್ಟ್ರೀಯ ಆಯೋಗದ ಕಾರ್ಯದರ್ಶಿ ಡಾ.ಸಂಜಯ್ ಗುಪ್ತಾ ಅಭಿಪ್ರಾಯಪಟ್ಟರು.

ಫಾದರ್ ಮುಲ್ಲರ್ ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ಪದವಿಯ ರಜತ ಮಹೋತ್ಸವದ ಸಂಭ್ರಮ ‘ರಜತೋತ್ಸವ’ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕುವೆಲ್ಲೋ ಅಧ್ಯಕ್ಷತೆ ವಹಿಸಿ, ಹೋಮಿಯೋಪಥಿ ಚಿಕಿತ್ಸಾ ಪದ್ಧತಿಯಲ್ಲಿ ‘ಗುಣಪಡಿಸಿ ಮತ್ತು ಸಾಂತ್ವನಿಸು’ ಎನ್ನುವ ಧ್ಯೇಯದೊಂದಿಗೆ ಸಂಸ್ಥೆ ಮುಂದುವರೆಸುವಲ್ಲಿ ಅಗಸ್ಟಸ್ ಮುಲ್ಲರ್ ಕಠಿಣ ಪರಿಶ್ರಮ, ಸೇವಾ ಬದ್ಧತೆ ಕಾರಣ ಎಂದರು.

ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆಡಳಿತಾಧಿಕಾರಿ ರೋಶನ್ ಕ್ರಾಸ್ತಾ, ಸಹಾಯಕ ಆಡಳಿತಾಧಿಕಾರಿ ಅಶ್ವಿನ್ ಕ್ರಾಸ್ತಾ, ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲೆ ಡಾ.ವಿಲ್ಮಾ ಮೀರಾ ಡಿಸೋಜ, ಡಾ.ಜ್ಯೋಷ್ನಾ ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ಸ್ನಾತಕೋತ್ತರ ಪದವಿಯ 7 ವಿಭಾಗಗಳು ಆಯೋಜಿಸಿದ್ದ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ 27 ಕಾಲೇಜುಗಳಿಂದ 200 ಪ್ರತಿನಿಧಿಗಳು ಭಾಗವಹಿಸಿದ್ದರು. ಹೋಮಿಯೋಪಥಿಕ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಇಎಸ್‌ಜೆ ಪ್ರಭುಕಿರಣ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ಶ್ರೇಯಾಂಕ್ ಕೋಟ್ಯಾನ್ ವಂದಿಸಿದರು. ಡಾ.ಶಿವಾನಿ ಸಿಂಗ್ ಮತ್ತು ಡಾ.ಮೆಹರ್ ವರ್ಗೀಸ್ ಕಾರ್ಯಕ್ರಮ ನಿರೂಪಿಸಿದರು.

ಸ್ಮರಣ ಸಂಚಿಕೆ ಬಿಡುಗಡೆ

ರಜತೋತ್ಸವ ಸವಿನೆನಪಿಗಾಗಿ ಹೊರತರಲಾದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ‘ಮುಲ್ಲರ್ ಕಾಂಪ್ಲೆಕ್ಸ್’ ವಾಣಿಜ್ಯ ಸಂಕೀರ್ಣಕ್ಕೆ ರಿಚರ್ಡ್ ಅಲೋಶಿಯಸ್ ಕೊವೆಲ್ಲೋ ಶಂಕುಸ್ಥಾಪನೆ ನೆರವೇರಿಸಿದರು. ಸ್ಪೀಚ್ ಆ್ಯಂಡ್ ಹಿಯರಿಂಗ್ ಥೆರಪಿ ಒಪಿಡಿ ಉದ್ಘಾಟಿಸಲಾಯಿತು. ಡಾ.ಜಸ್ವಂತ್ ಪಾಟೀಲ್ (ಆಲ್ಟ್ ಥೆರಪಿ) ಫೆಲೋಶಿಪ್ ಇನ್ ಮೆಡಿಕಲ್ ಯೋಗ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ‘ಸಾಕ್ಷ್ಯಾಧಾರಿತ ಹೋಮಿಯೋಪಥಿ ವಿಧಾನಗಳ ಮೂಲಕ ಕಷ್ಟಕರ ಪ್ರಕರಣಗಳನ್ನು ಪರಿಹರಿಸುವುದು’ ಈ ವಿಚಾರದ ಕುರಿತು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net