More

    ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರುವಿರಾ? ಸೂಕ್ಷ್ಮಾಣು ಸಂಶೋಧನಾ ಸಂಸ್ಥೆಯಲ್ಲಿರುವ ಉದ್ಯೋಗಾವಕಾಶ

    ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್​ ವೈರಾಲಜಿ (ಎನ್‍ಐವಿ) ಮುಂಬೈನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. 11 ಹುದ್ದೆಗಳಲ್ಲಿ ಬ್ಯಾಕ್‍ಲಾಗ್ ಹುದ್ದೆಗಳೂ ಇವೆ. ಆಯ್ಕೆಯಾಗುವ ಅಭ್ಯರ್ಥಿಗಳನ್ನು ಮುಂಬೈನ ಶಾಖೆಗೆ ನೇಮಕ ಮಾಡಲಾಗುವುದು ಎಂದು ತಿಳಿಸಲಾಗಿದೆ.
    ಒಟ್ಟು ಹುದ್ದೆಗಳು: 11

    ಹುದ್ದೆ ವಿವರ
    * ಟೆಕ್ನಿಕಲ್ ಅಸಿಸ್ಟೆಂಟ್ – 3
    * ರಿಸರ್ಚ್ ಅಸಿಸ್ಟೆಂಟ್ – 1
    * ಲ್ಯಾಬೊರೇಟರಿ ಟೆಕ್ನಿಷಿಯನ್ – 4
    * ಕ್ಲರಿಕಲ್ ಅಸಿಸ್ಟೆಂಟ್ – 1
    * ಮಲ್ಟಿ ಟಾಸ್ಕಿಂಗ್ ಸ್ಟಾಫ್​ – 1
    * ಟೆಕ್ನಿಕಲ್ ಆಫೀಸರ್ – 1

    ಶೈಕ್ಷಣಿಕ ಅರ್ಹತೆ: ಪ್ರೌಢ ಶಿಕ್ಷಣ, ದ್ವಿತೀಯ ಪಿಯುಸಿ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಿಷಿಯನ್/ ಪಿಎಂಡಬ್ಲುೃ/ ರೇಡಿಯಾಲಜಿ/ ರೇಡಿಯೋಗ್ರಫಿಯಲ್ಲಿ 2 ವರ್ಷದ ಡಿಪ್ಲೋಮಾ, ಬಯೋಲಾಜಿಕಲ್ ಸೈನ್ಸ್/ ಬಯೋಟೆಕ್ನಾಲಜಿ/ ಮೈಕ್ರೋಬಯೋಲಜಿ/ ಜೆನೆಟಿಕ್ ಇಂಜಿನಿಯರಿಂಗ್‍ನಲ್ಲಿ ಪದವಿ, ವಿಜ್ಞಾನ ವಿಷಯದಲ್ಲಿ ಪದವಿ.

    ವಯೋಮಿತಿ: ಕ್ಲರಿಕಲ್ ಅಸಿಸ್ಟೆಂಟ್‍ಗೆ ಗರಿಷ್ಠ 28 ವರ್ಷ, ಮಲ್ಟಿ ಟಾಸ್ಕಿಂಗ್ ಸ್ಟಾಫ್​ಗೆ ಗರಿಷ್ಠ 25 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 30 ವರ್ಷ.
    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 6 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 3, ಎಸ್ಸಿಗೆ 1, ಎಸ್ಟಿಗೆ 1 ಸ್ಥಾನಗಳನ್ನು ಮೀಸಲಿರಿಸಲಾಗಿದೆ.

    ವೇತನ: ಅಸಿಸ್ಟೆಂಟ್ ಹುದ್ದೆಗೆ ಮಾಸಿಕ 31,000 ರೂ., ಲ್ಯಾಬೊರೇಟರಿ ಟೆಕ್ನಿಷಿಯನ್ಸ್‍ಗೆ ಮಾಸಿಕ 18,000 ರೂ., ಕ್ಲ್ಲರಿಕಲ್ ಅಸಿಸ್ಟೆಂಟ್‍ಗೆ 17,000 ರೂ., ಮಲ್ಟಿ ಟಾಸ್ಕಿಂಗ್ ಸ್ಟಾïಗೆ 13,450 ರೂ., ಟೆಕ್ನಿಕಲ್ ಆಫೀಸರ್​ಗೆ ಮಾಸಿಕ 32,000 ರೂ. ವೇತನ ನಿಗದಿಯಾಗಿದ್ದು, ಯೋಜನೆಗೆ ಹಣ ಸಹಾಯ ಮಾಡುವ ಸಂಸ್ಥೆಯ ನಿಯಮಾನುಸಾರ ವೇತನ ಬದಲಾದರೂ ಆಗಬಹುದು ಎಂದು ತಿಳಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಆನ್‍ಲೈನ್ ವಿಡಿಯೋ ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ, ಸಮಯವನ್ನು ಅಭ್ಯರ್ಥಿಗಳಿಗೆ ಮೇಲ್ ಮೂಲಕ ತಿಳಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 16.4.2021
    ಅಧಿಸೂಚನೆಗೆ: https://bit.ly/3sL68OU
    ಮಾಹಿತಿಗೆ: https://niv.co.in/

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಷನ್​ನಲ್ಲಿ ಇಂಜಿನಿಯರಿಂಗ್​ ಪದವೀಧರರಿಗೆ ಭರ್ಜರಿ ಅವಕಾಶ

    ಸಿರಿಧಾನ್ಯ ಸಂಶೋಧನಾ ಸಂಸ್ಥೆಗೆ ಬೇಕಾಗಿದ್ದಾರೆ ಟೆಕ್ನಿಕಲ್ ಅಸಿಸ್ಟೆಂಟ್ಸ್- ಕರ್ನಾಟಕದಲ್ಲಿಯೂ ಅವಕಾಶ

    ಮಾನವ ಸಂಪನ್ಮೂಲ ವ್ಯಕ್ತಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಡಿಎಸ್​ಐಐಡಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts