ಮಷಿನ್ ಟೂಲ್ಸ್ ಇಂಡಸ್ಟ್ರಿಯ ಅನುಭವಸ್ಥರಿಗೆ ಎಚ್‌ಎಂಟಿಯಲ್ಲಿದೆ ದೊಡ್ಡ ಅವಕಾಶ: ಅರ್ಜಿ ಆಹ್ವಾನ

udyoga
Published on

ಎಚ್‍ಎಂಟಿ ಮಷಿನ್ ಟೂಲ್ಸ್ ಲಿಮಿಟೆಡ್ ಭಾರತದಾದ್ಯಂತ ಕಾರ್ಯಕ್ಷೇತ್ರ ಹೊಂದಿದ್ದು, ಸಂಸ್ಥೆಯ ಹೈದರಾಬಾದ್ ಘಟಕದಲ್ಲಿ ಖಾಲಿ ಇರುವ ಕಂಪನಿ ಟ್ರೇನಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಿದೆ.

ಒಟ್ಟು ಹುದ್ದೆಗಳು: 12

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಮಷಿನ್ ಟೂಲ್ಸ್ ಇಂಡಸ್ಟ್ರಿಯಲ್ಲಿ ಅನುಭವ ಇರಬೇಕು. ಎಚ್‍ಎಂಟಿ ಮಷಿನ್ ಟೂಲ್ಸ್ ಲಿಮಿಟೆಡ್‍ನಲ್ಲಿ ವೃತ್ತಿ ಅನುಭವ ಅಥವಾ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಕಂಪನಿ ಟ್ರೇನಿ (ಮಲ್ಟಿ-ಸ್ಕಿಲ್ಡ್/ ಎಕ್ಸ್‍ಪೀರಿಯನ್ಸ್‍ಡ್) (ಡೈರೆಕ್ಟ್ ಟೆಕ್ನಿಕಲ್) ಹುದ್ದೆಗಳಿಗೆ `ಪೊಸಿಷನ್ ಎ ಮತ್ತು ಬಿ' ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ ಸ್ಥಾನ ಮೀಸಲಿರಿಸಲಾಗಿದೆ.

ಹುದ್ದೆ ವಿವರ

*ಪೊಸಿಷನ್ ಎ ವಿಭಾಗದಲ್ಲಿ 10 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಟರ್ನರ್, ಮಷಿನಿಸ್ಟ್, ಮಷಿನಿಸ್ಟ್ ಗ್ರೈಂಡರ್, ಫಿಟ್ಟರ್ ಮತ್ತು ಎಲೆಕ್ಟ್ರಿಷಿಯನ್ ಹುದ್ದೆಗಳಾಗಿವೆ.

ಪ್ರೌಢ ಶಿಕ್ಷಣ/ ಎಸ್ಸೆಸ್ಸೆಲ್ಸಿ ಜತೆ ಐಟಿಐ/ ಎನ್‍ಸಿವಿಟಿ+ ಎನ್‍ಎಸಿ ಅಧ್ಯಯನ ಅಥವಾ ಎಚ್‍ಎಂಟಿಯಲ್ಲಿ 3 ವರ್ಷದ ತರಬೇತಿ ಪಡೆದಿರುವ 33 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

* ಪೊಸಿಷನ್ ಬಿ ವಿಭಾಗದಲ್ಲಿ 2 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಮೆಕ್ಯಾನಿಕಲ್/ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಹುದ್ದೆಗಳಿವೆ. ಮೆಕ್ಯಾನಿಕಲ್/ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್‍ನಲ್ಲಿ 3 ವರ್ಷದ ಡಿಪ್ಲೋಮಾ ಮಾಡಿರುವ 33 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಸ್ಟೈಪೆಂಡ್: ಪೊಸಿಷನ್ ಎ ವಿಭಾಗದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮೊದಲ ವರ್ಷ ಮಾಸಿಕ 13,000 ರೂ. ಸ್ಟೈಪೆಂಡ್ ನೀಡಲಾಗುವುದು. ಎರಡನೇ ವರ್ಷ 13,500 ರೂ., 3ನೇ ವರ್ಷ 14,000 ರೂ. ವೇತನ ನೀಡಲಾಗುವುದು. ಪೆÇಸಿಷನ್ ಬಿ ವಿಭಾಗದ ಅಭ್ಯರ್ಥಿಗಳಿಗೆ ಮೊದಲ ವರ್ಷ ಮಾಸಿಕ 14,000 ರೂ., 2ನೇ ವರ್ಷ, 14,500 ರೂ. ಗೌರವಧನ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಸಂಸ್ಥೆಯ ನಿಯಮದ ಪ್ರಕಾರ ವೇತನ ಗ್ರೇಡ್ 2 ಹಾಗೂ 3ರ ಅನ್ವಯ ವೇತನ ಜತೆ ಡಿಎ, ಮನೆ ಬಾಡಿಗೆ ಭತ್ಯೆ, ಸಿಸಿಎ, ಕ್ಯಾಂಟೀನ್ ಭತ್ಯೆ, ವಾಷಿಂಗ್ ಭತ್ಯೆ, ಪಿಎï, ಗ್ರಾಚ್ಯುಟಿ, ಇಎಸ್‍ಐ/ ವೈದ್ಯಕೀಯ ಸೌಲಭ್ಯ, ಪ್ರಯಾಣ ಭತ್ಯೆ, ಕಾರ್ಯಕ್ಷಮತೆ ಭತ್ಯೆ, ಮಾಸಿಕ ಪೆÇ್ರೀತ್ಸಾಹ ಧನ, ಲೀವ್ ಎನ್‍ಕ್ಯಾಶ್‍ಮೆಂಟ್ ಭತ್ಯೆಗಳನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ಪ್ರಾಕ್ಟಿಕಲ್ ಪರೀಕ್ಷೆ/ ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಶಾರ್ಟ್‍ಲಿಸ್ಟ್ ಮಾಡಲಾಗುವುದು. ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಕೌಶಲ ಪರೀಕ್ಷೆ ಇರುತ್ತದೆ. ಲಿಖಿತ ಪರೀಕ್ಷೆಯಲ್ಲಿ ಆಪ್ಟಿಟ್ಯೂಡ್ ಆ್ಯಂಡ್ ಸಾಮಾನ್ಯ ಜ್ಞಾನದ ಕುರಿತು ಪ್ರಶ್ನೆಗಳಿರುತ್ತದೆ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 250 ರೂ., ಇತರ ಅಭ್ಯರ್ಥಿಗಳಿಗೆ 500 ರೂ. ಇದೆ. ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 20.4.2021

ಅಧಿಸೂಚನೆಗೆ: https://bit.ly/3cRf1km

ಮಾಹಿತಿಗೆ: www.hmtindia.com

ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net