ನರೇಗಾ ಯೋಜನೆಯಲ್ಲಿ ಸಂಯೋಜಕರ ಹುದ್ದೆಗೆ ಅರ್ಜಿ ಆಹ್ವಾನ

udyoga-narega
Published on

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಉದ್ಯೋಗ ಸೃಜನೆ ಮುಖ್ಯ ಗುರಿಯಾಗಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಇವುಗಳಲ್ಲಿ ಪ್ರಮುಖವಾಗಿದೆ. ಕಲಬುರಗಿ ಜಿಲ್ಲಾ ಪಂಚಾಯತ್​ನಲ್ಲಿ ಈ ಯೋಜನೆಯಡಿಯಲ್ಲಿ ತಾಲೂಕ ಮಟ್ಟದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಈ ನೇಮಕಾತಿ ಪ್ರಕ್ರಿಯೆಯನ್ನು ಕಲಬುರಗಿಯ ಎಮ್​ಎಸ್​ಕೆ ಮಿಲ್​ ರೋಡ್​ನಲ್ಲಿರುವ ಮೆಸರ್ಸ್‌ ಮನೀಷ ಮ್ಯಾನ್​ಪವರ್​ ಏಜೆನ್ಸಿಗೆ ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತಿದೆ. ತಾಂತ್ರಿಕ ಸಹಾಯಕರು ಹುದ್ದೆಗೆ ಹೆಚ್ಚಿನ ಬೇಡಿಕೆ ಇದ್ದು, ಬಿಇ/ ಬಿಟೆಕ್​ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು: 32

ಹುದ್ದೆ ವಿವರ

* ತಾಲೂಕು ಎಮ್​ಐಎಸ್​ ಸಂಯೋಜಕರು - 3

* ತಾಲೂಕು ಐಇಸಿ ಸಂಯೋಜಕರು - 4

* ತಾಂತ್ರಿಕ ಸಹಾಯಕರು - 25

ವಿದ್ಯಾರ್ಹತೆ: ಎಂಐಎಸ್​ ಸಂಯೋಜಕ ಹುದ್ದೆಗೆ ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಸಿಎ/ ಬಿಎಸ್ಸಿ/ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.45 ಅಂಕ ಪಡೆದಿರಬೇಕು. ಎಂಎಸ್​ ಆಫೀಸ್​ ಜ್ಞಾನ ಅವಶ್ಯ. ಐಇಸಿ ಸಂಯೋಜಕ ಹುದ್ದೆಗೆ ಮಾಸ್​ ಕಮ್ಯುನಿಕೇಷನ್​ ಅಡ್ವೆ$ಸೈಸಿಂಗ್​ ಆ್ಯಂಡ್​ ಪಬ್ಲಿಕ್​ ರಿಕೇಷನ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಂಪ್ಯೂಟರ್​ ಜ್ಞಾನ ಅವಶ್ಯ. ತಾಂತ್ರಿಕ ಸಹಾಯಕ ಹುದ್ದೆಗೆ ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಬಿಇ/ಬಿಟೆಕ್​ ಅಧ್ಯಯನ/ ಸಿವಿಲ್​ನಲ್ಲಿ ಇಂಟರ್​ನೆಟ್​ ಡಿಪ್ಲೊಮಾ ಮಾಡಿದ್ದು, ಕಂಪ್ಯೂಟರ್​ ಜ್ಞಾನದ ಜತೆ ಇಂಟರ್​ನೆಟ್​ ಬಳಕೆಯ ಜ್ಞಾನ ಕೂಡ ಅವಶ್ಯ.

ವಯೋಮಿತಿ: ಎಲ್ಲ ಹುದ್ದೆಗಳಿಗೂ ಗರಿಷ್ಠ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ: ಎಮ್​ಐಎಸ್​ಗೆ ಮಾಸಿಕ 18,000 ರೂ., ಐಇಸಿಗೆ ಮಾಸಿಕ 18,000+2000 ರೂ., ಪದವಿ ಮಾಡಿದ ತಾಂತ್ರಿಕ ಸಹಾಯಕರಿಗೆ ಮಾಸಿಕ 24,000 ರೂ., ಡಿಪ್ಲೊಮಾ ಅಧ್ಯಯನ ಮಾಡಿದವರಿಗೆ ಮಾಸಿಕ 19,000 ರೂ. ವೇತನ ನಿಗದಿಪಡಿಸಲಾಗಿದೆ.

ಸೂಚನೆ: ಪ್ರತಿ ಹುದ್ದೆಗೂ ಪ್ರತ್ಯೇಕ ಅರ್ಜಿ ಸಲ್ಲಿಕೆ ಲಿಂಕ್​ ನೀಡಲಾಗಿದ್ದು, ಅಭ್ಯರ್ಥಿಗಳು ಆ ಲಿಂಕ್​ಗಳ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಕೆ ಸಮಯದಲ್ಲಿ ಪಾಸ್​ಪೋರ್ಟ್​ ಸೈಜ್​ ಫೋಟೋ, ಎಸ್ಸೆಸ್ಸೆಲ್ಸಿ ಪ್ರಮಾಣಪತ್ರ, ಶೈಕ್ಷಣಿಕ ಅರ್ಹತೆಯ ದಾಖಲೆ, ವೃತ್ತಿ ಅನುಭವ ಪ್ರಮಾಣಪತ್ರ, ಕಂಪ್ಯೂಟರ್​ ಜ್ಞಾನದ ಮಾಹಿತಿ ಕುರಿತ ದಾಖಲೆಗಳನ್ನು ಪಿಡಿಎಫ್‌ ರೂಪದಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 15.7.2021

ಅಧಿಸೂಚನೆಗೆ: https://bit.ly/3hKGCVK

ಮಾಹಿತಿಗೆ: http://kalaburagi.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net