ಬಾಡಿಗೆ ಕೊಡೋದು ಬೇಡ, ಗಂಡ ಇಲ್ಲದಾಗ ಕಿಸ್‌ ಮಾಡ್ತಿರು ಎಂದ ಮಾಲೀಕ: ಮುಂದಾದದ್ದು ದುರಂತ

man
Published on

ಚೆನ್ನೈ: ದಂಪತಿಯೊಬ್ಬರಿಗೆ ಬಾಡಿಗೆ ನೀಡಿದ ಮನೆ ಮಾಲೀಕ ಪದೇ ಪದೇ ಬಾಡಿಗೆದಾರ ಮಹಿಳೆಗೆ ಕಿರುಕುಳ ನೀಡುತ್ತಿದ್ದು, ಇದೀಗ ಜೈಲಿನಲ್ಲಿ ಇರುವ ಘಟನೆ ಚೆನ್ನೈನ ಕೊಡುಂಗೈಯೂರ್‌ನಲ್ಲಿ ನಡೆದಿದೆ.

ಜಯಕುಮಾರ್ ಎಂಬ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದ ಮಹಿಳೆ, ಪದೇ ಪದೇ ತಮ್ಮ ಪತಿ ಇಲ್ಲದಾಗ ಈತ ಬಂದು ಕಿಸ್‌ ಕೊಡು, ಬಾಡಿಗೆ ಕೊಡುವುದು ಬೇಡ ಎಂದು ಪೀಡಿಸುತ್ತಿದ್ದುದಾಗಿ ಆರೋಪಿಸಿದ್ದಾರೆ. ಇದರ ಆಧಾರದ ಮೇಲೆ ಜಯಕುಮಾರ್‌ ವಿರುದ್ಧ ದೂರು ದಾಖಲಿಸಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಜಯಕುಮಾರ್‌ ಆಟೋ ಚಾಲಕರಾಗಿರುವರೊಬ್ಬರಿಗೆ ಮನೆ ಬಾಡಿಗೆ ನೀಡಿದ್ದಾರೆ. ಚಾಲಕ ಮತ್ತು ದಂಪತಿ ಮಾತ್ರ ಆ ಮನೆಯಲ್ಲಿ ವಾಸವಾಗಿದ್ದರು. ಗಂಡ ಕೆಲಸಕ್ಕೆ ಹೋದ ಸಮಯದಲ್ಲಿ ಪದೇ ಪದೇ ಬಂದು ಜಯಕುಮಾರ್‌ ಕಿಸ್‌ ಕೊಡು, ಕಿಸ್‌ ಕೊಡು ಎಂದು ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಹಿಳೆ ಪತಿಗೆ ಕೂಡ ಹೇಳಿದ್ದರು. ನಂತರ ಅವರ ಪತಿ ಮಾಲೀಕನಿಗೆ ವಾರ್ನ್‌ ಕೂಡ ಮಾಡಿದ್ದರು.

ಆದರೆ ಇನ್ನೂ ಮುಂದುವರೆದ ಜಯಕುಮಾರ್‌, ನಿನ್ನೆ ಮಹಿಳೆ ಒಬ್ಬರೇ ಇರುವಾಗ ಏಕಾಏಕಿ ಮನೆಗೆ ನುಗ್ಗಿ ಮಹಿಳೆಯನ್ನು ಬಲವಂತವಾಗಿ ಹಿಡಿದು ಬಾಡಿಗೆ ಕೊಡುವುದು ಬೇಡ, ಕಿಸ್‌ ಕೊಡು ಸಾಕು ಎಂದು ಪೀಡಿಸಿದ. ಮಹಿಳೆ ಆತನನ್ನು ಹೊರಕ್ಕೆ ತಳ್ಳಿ ಪೊಲೀಸರಲ್ಲಿ ದೂರು ದಾಖಲಿಸಿದರು. ಸದ್ಯ ಜಯಕುಮಾರ್‌ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net