More

    VIDEO: ಸೃಜನ್‌ ಖುಷಿಗಾಗಿ ನಾನು ಮದುವೆ ಮುರಿದೆ: ಯಾವ ಬೀದಿಗೆ ಬಂದೆ ಅಂತ ಹೇಳ್ತೀರಾ? ನಟಿ ವಿಜಯಲಕ್ಷ್ಮಿ ಕಣ್ಣೀರು

    ಬೆಂಗಳೂರು: ನಟ ಸೃಜನ್‌ ಲೋಕೇಶ್‌ ಮತ್ತು ನಟಿ ವಿಜಯಲಕ್ಷ್ಮಿ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಕೆಲ ವರ್ಷಗಳ ಹಿಂದೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದ ಇವರು ಮದುವೆಯಾಗಲು ಸಾಧ್ಯವಾಗಿರಲಿಲ್ಲ, ನಂತರ ಸೃಜನ್‌ ಅವರು ಕಿರುತೆರೆ ನಟಿ ಗ್ರೀಷ್ಮಾ ಜತೆ ವಿವಾಹವಾಗಿದ್ದಾರೆ.

    ಮೂರು ವರ್ಷಗಳವರೆಗೆ ಸೃಜನ್‌ ಮತ್ತು ವಿಜಯಲಕ್ಷ್ಮಿ ಪ್ರೀತಿಸಿದ್ದರು. ಆದರೆ ಕೆಲವು ಕಾರಣಗಳಿಂದ ಅವರು ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಅದೇ ವಿಷಯವನ್ನು ಇಟ್ಟುಕೊಂಡು ಈಗ ಮತ್ತೆ ಕೆಲವರು ಜಾಲತಾಣದಲ್ಲಿ ವಿಷಯ ಕೆದಕಿದ್ದು, ಇದರಿಂದ ನೊಂದು ನಟಿ ಫೇಸ್‌ಬುಕ್‌ ಲೈವ್‌ನಲ್ಲಿ ಬಂದು ಕಣ್ಣೀರು ಹಾಕಿದ್ದಾರೆ. ಸೃಜನ್‌ಗೆ ಮೋಸ ಮಾಡಿದ್ದರಿಂದ ವಿಜಯಲಕ್ಷ್ಮಿ ಬೀದಿಗೆ ಬಂದಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು, ಇದು ವಿಜಯಲಕ್ಷ್ಮಿ ಅವರಿಗೆ ಬೇಸರ ಮೂಡಿಸಿದೆ.

    ವಿಜಯಲಕ್ಷ್ಮಿ ಹೇಳಿದ್ದು ಇಷ್ಟು:
    ನನ್ನ ಮತ್ತು ಸೃಜನ್‌ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಷಯ ನೋಡಿ ತುಂಬಾ ದುಃಖ ಆಗುತ್ತಿದೆ. ನಾನು ಕರ್ನಾಟಕಕ್ಕೆ ಪುನಃ ಬರುತ್ತಿದ್ದೇನೆ ಎಂಬ ಬೆನ್ನಲ್ಲೇ ಏನೇನೋ ಸುದ್ದಿಗಳು ಹರಿದಾಡುತ್ತಿವೆ. ‘ಸೃಜನ್‌ಗೆ ನಾನು ಯಾಮಾರಿಸಿದ್ದಕ್ಕೆ ಬೀದಿಗೆ ಬಂದ್ಬಿಟ್ಟೆ’ ಎನ್ನುತ್ತಿದ್ದಾರೆ. ನಾನು ಯಾವ ಬೀದಿಗೆ ಬಂದಿದ್ದೇನೆ ಎಂದು ಸ್ವಲ್ಪ ಹೇಳ್ತೀರಾ?

    ಈಗ ನನ್ನ ಸ್ಥಿತಿ ‘ನಾಗಮಂಡಲ’ ಚಿತ್ರದ ಕ್ಲೈಮಾಕ್ಸ್ ಥರ ಆಗಿದೆ. ಅದರಲ್ಲಿ ‘ನೀವು ನನ್ನ ಪ್ರೀತಿಸಿದಾಗ ನಾನು ಗುಬ್ಬಿಯಾಗಿದ್ದೆ, ಆದ್ರೆ ಈವಾಗ ನನಗೆ ಎಲ್ಲಾ ಗೊತ್ತಾಗುತ್ತಿದೆ. ನನಗೆ ಉತ್ತರ ಕೊಡಿ’ ಎಂದು ನಾಗಪ್ಪ ಬಳಿ ಕೇಳುವ ಒಂದು ಸನ್ನಿವೇಶ ಬರುತ್ತದೆ. ಇದೇ ರೀತಿ ಈಗ ನನ್ನ ಜೀವನದಲ್ಲಿಯೂ ಆಗುತ್ತಿದೆ. ಕಳೆದ 20 ವರ್ಷಗಳಿಂದ ನನ್ನ ಬಗ್ಗೆ ಏನೇನೋ ವಿವಾದಗಳು ಆಗಿಹೋಗಿದ್ದರೂ ಸುಮ್ಮನಿದ್ದೆ. ಆದರೆ ಇದೀಗ ನಾಗಮಂಡಲ’ ಚಿತ್ರದ ಕ್ಲೈಮಾಕ್ಸ್ ಥರ ಬಂದುಮುಟ್ಟಿದೆ ನನ್ನ ಜೀವನ.

    ಈಗ ನನಗೆ 39 ವರ್ಷ ವಯಸ್ಸು, ನಾನು ಚಿಕ್ಕ ಮಗುವಲ್ಲ. ನನ್ನ ಜೀವನದಲ್ಲಿ ಏನೇನು ಆಗಿದೆ ಎಂಬುದು ಹಿರಿಯರಿಗೆ ತಿಳಿದಿದ್ದು, ಹೀಗಾಗಿ ಅವರು ಕೂಡ ನನ್ನ ಮಾತುಗಳನ್ನು ಒಪ್ಪಿಕೊಳ್ಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ನನ್ನ ಮಾತೃ ಭಾಷೆ ತಮಿಳು. ಆದರೆ ನಾನು ಹುಟ್ಟಿದ್ದು ಕರ್ನಾಟಕದಲ್ಲಿ, ಬೆಂಗಳೂರಿನಲ್ಲಿ. ನಾಗಮಂಡಲದ ಮೂಲಕ ನಾನು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದೇನೆ. ಒಟ್ಟಿನಲ್ಲಿ ನನ್ನ ಫೌಂಡೇಶನ್ ಕರ್ನಾಟಕದಲ್ಲಿ. ಫ್ರೆಂಡ್ಸ್ ಅನ್ನೋ ತಮಿಳೂ ಚಿತ್ರದ ಮೂಲಕ ನನ್ನ ಜೀವನ ಪ್ರಾರಂಭವಾಗಿದೆ. ಇಂದಿಗೂ ಎಲ್ಲರೂ ನನ್ನ ಬೆಂಗಳೂರು ವಿಜಯಲಕ್ಷ್ಮಿ ಅಂತಾನೆ ರೆಫರ್ ಮಾಡುತ್ತಾರೆ.

    ಲಕ್ಷ ಲಕ್ಷ ಖರ್ಚು ಮಾಡಿ ಚೆನ್ನೈನಲ್ಲಿ ಎಂಗೇಜ್ಮೆಂಟ್ ಮಾಡಿಸಿದ್ದು ನಾವೇ. ಆದರೆ ಪ್ರತಿಬಾರಿಯೂ ‘ಹೋ ನೀವು ತಮಿಳುರು ಅಲ್ವಾ.. ನಾವು ಕನ್ನಡದವರು..’ ಎನ್ನೋ ಮಾತುಗಳೇ ಕೇಳಿಬಂದವು. ದಿನನಿತ್ಯವೂ ಇದೇ ವಿಷಯ ಪದೇ ಪದೇ ಕೇಳತೊಡಗಿತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆಯಲು ಶುರುವಾಯ್ತು. ಹೀಗಿದ್ದರೂ ನನ್ನ ಹಾಗೂ ಸೃಜನ್ ನಡುವಿನ ಸಂಬಂಧದಲ್ಲಿ ಯಾವುದೇ ಬಿರುಕು ಮೂಡಿರಲಿಲ್ಲ. ಏಕೆಂದ್ರೆ ನಾವು ಒಳ್ಳೇ ಸ್ನೇಹಿತರಾಗಿದ್ದೆವು.

    ನನ್ನ ಅಪ್ಪ ತೀರಿಕೊಂಡ ಸಂದರ್ಭದಲ್ಲಿ ಮನೆಯಲ್ಲಿ ನಾವು ಇದ್ದುದು ಮೂವರು ಹುಡುಗಿಯರು ಮಾತ್ರ. ನಾವು ಕಷ್ಟಪಡುತ್ತಿರುವುದನ್ನು ಕಂಡ ಸೃಜನ್, ಮದುವೆ ಮಾಡಿಕೊಳ್ಳಬೇಕು ಎಂಬ ಒಳ್ಳೆಯ ಉದ್ದೇಶದಿಂದಲೇ ಬಂದಿದ್ದರು. ಹೀಗಾಗಿ ನಮ್ಮಿಬ್ಬರ ಮಧ್ಯೆ ಭಾಷೆಯ ಬಗ್ಗೆ ಏನೂ ಇರಲಿಲ್ಲ.ಆದರೆ ಬಹಳ ಕಡೆಗಳಲ್ಲಿ ‘ನೀವು ತಮಿಳರಲ್ವಾ…’ ಎಂಬ ಮಾತು ಬಂತು. ಇದನ್ನು ಸರಿ ಮಾಡಲು ಆಗುತ್ತಾ ಅಂತ ತುಂಬಾ ಸಮಯದವರೆಗೆ ನೋಡಿದೆ, ಹೋರಾಡಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಇದರ ಬಗ್ಗೆ ಇಬ್ಬರೂ ಕೂತು ಮಾತನಾಡಿದೆವು. ನಮ್ಮದು ಸ್ವಚ್ಛ ಪ್ರೀತಿ. ನಮಗೊಬ್ಬರು ಸಿಗ್ತಾರೋ, ಇಲ್ಲವೋ ಅನ್ನೋದು ಪ್ರೀತಿಯಲ್ಲ, ಅವರು ಚೆನ್ನಾಗಿರಬೇಕು ಎಂದು ಬಯಸುವುದೇ ನಿಜವಾದ ಪ್ರೀತಿ. ಅಂದು ನಾನು ಕೂಡ ಇದನ್ನೇ ಮಾಡಿದೆ. ಮನೆಯಲ್ಲಿ ಎಲ್ಲರೂ ಏನು ಆಸೆ ಪಡುತ್ತಾರೋ, ಆ ರೀತಿಯಾದ ಹೆಣ್ಣು ಅವರಿಗೆ ಸಿಗಬೇಕು, ಅವರು ಚೆನ್ನಾಗಿರಬೇಕು ಎಂದು ನಾನು ಬಯಸಿದೆ ಅಷ್ಟೇ.

    ಭಾಷೆ ಅನ್ನೋ ವಿಚಾರದಲ್ಲಿ ಮದುವೆಗಿಂತ ಮುಂಚೆನೇ ಕಿರಿಕಿರಿಯಾಗುತ್ತಿದೆ ಅಂದ್ರೆ ಬಿಟ್ಟುಬಿಡೋಣ ಎಂದು ನಾನು ಸೃಜನ್ ಅವರ ಮುಂದೆ ಪ್ರಸ್ತಾಪ ಮಾಡಿದೆ. ಅಂದು ನಾನು ಏನು ಅಂದ್ಕೊಂಡೆನೋ ಅದೇ ರೀತಿ ಸೃಜನ್ ಅವರ ಬದುಕು ಈಗ ಸಾಗುತ್ತಿದೆ. ಇದು ನನಗೆ ಖುಷಿ ನೀಡಿದೆ. ಆದರೆ ಜನ ನೀನು ಮಾಡಿದ ಮೋಸದಿಂದ ಬೀದಿಗೆ ಬಂದಿದ್ದೀಯಾ ಅಂತಾರೆ. ಇದು ನನಗೆ ತುಂಬಾ ನೋವು ಕೊಡುತ್ತಿದೆ. ನಾನೇನು ಮೋಸ ಮಾಡಿದೆ, ಯಾವ ಬೀದಿಗೆ ಬಂದಿದೆ ಎಂದು ಅರ್ಥವಾಗುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

    ವಿಜಯಲಕ್ಷ್ಮಿ ಅವರು ಹೇಳಿರುವ ವಿಡಿಯೋ ಇಲ್ಲಿದೆ ನೋಡಿ:

    ಸುಮಲತಾ v/s ಎಚ್‌ಡಿಕೆ: ಹುಲಿ ಮುಂದೆ ಇಲಿಯಂತೆ ನಿಂತವರು ಯಾರು? ಜಾಲತಾಣದಲ್ಲಿ ಟ್ರೋಲ್‌

    ನಿಂಬೆಹಣ್ಣಿನ ಬೆಡಗಿಗೆ ಹೈಕೋರ್ಟ್‌ ಪುನಃ ನೀಡಿತು ಶಾಕ್‌: 20 ಲಕ್ಷ ರೂ.ದಂಡ ಪ್ರಶ್ನಿಸಿದ್ದಕ್ಕೆ ಗರಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts