VIDEO: ‘ಅಯ್ಯೋ ನನ್‌ ಬೂಟ್‌ ಒದ್ದೆಯಾಗತ್ತೆ’ ಅಂತ ಚಡಪಡಿಸಿದ ಮೀನುಗಾರರ ಸಚಿವ! ಮುಂದೇನಾಯ್ತು ನೋಡಿ...

minister
Published on

ಚೆನ್ನೈ: ತಮಿಳುನಾಡಿನ ಮೀನುಗಾರಿಕೆ ಮತ್ತು ಮೀನುಗಾರರ ಕಲ್ಯಾಣ ಮತ್ತು ಪಶುಸಂಗೋಪನಾ ಸಚಿವ ಅನಿತಾ ರಾಧಾಕೃಷ್ಣನ್ ಅವರ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದೇನೆಂದರೆ ಮೀನುಗಾರಿಕೆ ಸಚಿವರಾಗಿರುವ ಇವರು, ಸಮುದ್ರದಲ್ಲಿ ಬೂಟು ಒದ್ದೆಯಾಗುತ್ತದೆ ಎಂದು ಚಡಪಡಿಸಿದ ವಿಡಿಯೋ ಇದು!

ಸಮುದ್ರ ಕೊರೆತದ ಬಗ್ಗೆ ತನಿಖೆ ನಡೆಸಲು ಡಿಎಂಕೆ ಸಚಿವರು ಪಾಲವರ್ಕಡಿಗೆ ಹೋಗಿದ್ದರು. ದೋಣಿ ವಿಹಾರ ಮುಗಿಸಿ ಬಂದ ಮೇಲೆ ದೋಣಿಯ ದಡಕ್ಕೆ ಬಂದಿದೆ. ದಡದಿಂದ ಸ್ವಲ್ಪ ದೂರ ಈಚೆಗೆ ಬರಬೇಕಲ್ಲ, ಆಗ ಈ ಮೀನುಗಾರಿಕೆ ಸಚಿವರಿಗೆ ಚಡಪಡಿಕೆ ಶುರುವಾಗಿದೆ. ಅದಕ್ಕೆ ಕಾರಣ, ಅವರ ಬಿಳಿದಾದ ಬೂಟ್‌ ಎಲ್ಲಿ ನೀರಿನಲ್ಲಿ ಒದ್ದೆಯಾಗಿ ಬಿಡುತ್ತದೆಯೋ ಎಂಬ ಭಯ!

ಅದೇ ವೇಳೆ, ಮೀನುಗಾರರು ಸಚಿವರು ದೋಣಿಯಿಂದ ಇಳಿಯುವಂತೆ ಕುರ್ಚಿಯನ್ನು ಇರಿಸಿದ್ದಾರೆ. ಆದರೆ ಬೂಟೂಗಳು ಒದ್ದೆಯಾಗುತ್ತದೆ ಎಂದು ಸಚಿವರು ಚಡಪಡಿಸುವುದನ್ನು ನೋಡಲಾಗದೇ ಕೊನೆಗೆ ಮೀನುಗಾರರು ಅವರ ಭುಜದ ಮೇಲೆ ಕುರಿಸಿಕೊಂಡು ಎತ್ತಿಕೊಂಡು ಬಂದಿದ್ದು, ಅದೀಗ ವೈರಲ್‌ ಆಗಿದೆ.

ಈ ವಿಡಿಯೋ ಇದೀಗ ಸಾಕಷ್ಟು ವೈರಲ್‌ ಆಗಿದ್ದು, ಸಚಿವರ ವಿರುದ್ಧ ಗರಂ ಆಗಿದ್ದಾರೆ ಕಮೆಂಟಿಗರು. ಇದಕ್ಕೆ ಪ್ರತಿಕ್ರಿಯೆ ನೀಡಿರು ಸಚಿವರು, ಏನು ತಪ್ಪಿದೆ? ಅವರು ಪ್ರೀತಿಯಿಂದ ಕೇಳಿದ್ದಕ್ಕೆ ನಾನು ಅವರ ಹೆಗಲ ಮೇಲೆ ಹತ್ತಿದೆ ಎಂದಿದ್ದಾರೆ!

ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net