ಐಟಿಐ, ಡಿಪ್ಲೋಮಾ ಪದವೀಧರರಿಗೆ ಮೈಸೂರಲ್ಲಿ ಅವಕಾಶ: 45 ಹುದ್ದೆಗಳಿಗೆ ಆಹ್ವಾನ- ಎರಡೇ ದಿನ ಬಾಕಿ

udyoga
Published on

ಪರಮಾಣು ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ಸ್​ ಕಾರ್ಪೋರೇಷನ್‌ ಆಫ್‌ ​ ಇಂಡಿಯಾ ಲಿಮಿಟೆಡ್​ನ (ಇಸಿಐಎಲ್​) ಮೈಸೂರು ಘಟಕಕ್ಕೆ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಅರ್ಹ, ಆಸಕ್ತ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. 4 ವರ್ಷದ ಒಪ್ಪಂದ ಇದಾಗಿದ್ದು, ದೂರ ಶಿಕ್ಷಣ ಮೂಲಕ ಪಡೆದ ಪದವಿಗೆ ಮಾನ್ಯತೆ ಇಲ್ಲ.
ಒಟ್ಟು ಹುದ್ದೆಗಳು: 45

ಹುದ್ದೆ ವಿವರ
* ಸೈಂಟಿಫಿಕ್​ ಅಸಿಸ್ಟೆಂಟ್​-ಎ – 6
* ಜೂನಿಯರ್​ ಆಟಿರ್ಸನ್​ – 39

ಯಾವ ವಿಭಾಗದಲ್ಲಿ ನೇಮಕ?
ಕೆಮಿಕಲ್​, ಎಲೆಕ್ಟ್ರಾನಿಕ್ಸ್​ ಆಫ್‌ ಯಂಡ್​ ಕಮ್ಯುನಿಕೇಷನ್​/ ಇನ್​ಸ್ಟ್ರುಮೆಂಟೇಷನ್​, ಎಲೆಕ್ಟ್ರಿಕಲ್​, ಫಿಟ್ಟರ್​ ಕೆಮಿಕಲ್​ ಪ್ಲಾಂಟ್​ ಆಪರೇಟರ್​ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಹತೆ: ಎಲೆಕ್ಟ್ರಾನಿಕ್ಸ್​ ಆ್ಯಂಡ್‌ ಕಮ್ಯುನಿಕೇಷನ್​/ ಎಲೆಕ್ಟ್ರಿಷಿಯನ್​/ ಫಿಟ್ಟರ್​/ ಪವರ್​ ಎಲೆಕ್ಟ್ರಾನಿಕ್ಸ್​/ ಇಂಡಸ್ಟ್ರಿಯಲ್​ ಎಲೆಕ್ಟ್ರಾನಿಕ್ಸ್​/ ಇನ್​ಸ್ಟ್ರುಮೆಂಟೇಷನ್​/ ಪ್ರೋಸೆಸ್​ ಇನ್​ಸ್ಟ್ರುಮೆಂಟೇಷನ್​/ ಮೆಕ್ಯಾನಿಕಲ್​(ಫಿಟ್ಟರ್​/ ಡೀಸೆಲ್​ ಮೆಕ್ಯಾನಿಕ್​)ನಲ್ಲಿ 2 ವರ್ಷದ ಐಟಿಐ ಮಾಡಿರಬೇಕು. ಕೆಮಿಷ್ಟ್ರಿಯಲ್ಲಿ ಬಿಎಸ್ಸಿ/ 3 ವರ್ಷದ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು.

ವಯೋಮಿತಿ: ಎಲ್ಲ ಹುದ್ದೆಗಳಿಗೂ ಗರಿಷ್ಠ 25 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋ ಸಡಿಲಿಕೆ ಇದೆ.

ವೇತನ: ಸೈಂಟಿಫಿಕ್​ ಅಸಿಸ್ಟೆಂಟ್​ ಹುದ್ದೆಗೆ ಮಾಸಿಕ 20,984 ರೂ. ವೇತನ ಇದೆ. ಜೂನಿಯರ್​ ಆಟಿರ್ಸನ್​ಗೆ 19,064 ರೂ. ವೇತನ ನಿಗದಿಪಡಿಸಲಾಗಿದೆ. ಯೂನಿಾಮ್​ರ್ ಹೊಲಿಗೆ ಹಾಗೂ ವಾಷಿಂಗ್​ ವೆಚ್ಚ, ಪಿಪಿಎ್​, ಪ್ರಯಾಣ ಭತ್ಯೆ, ಇಎಸ್​ಐ ಜತೆ ವಿಮಾ ಪರಿಹಾರ ನೀಡಲಾಗುವುದು.

ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 21 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವವರಿಗೆ 2, ಇತರ ಹಿಂದುಳಿದ ವರ್ಗದವರಿಗೆ 12, ಎಸ್ಸಿಗೆ 7, ಎಸ್ಟಿಗೆ 3 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ 4 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಶೈಕ್ಷಣಿಕ ಅಂಕ ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಲಿಖಿತ ಹಾಗೂ ಟ್ರೇಡ್​ ಪರೀಕ್ಷೆಗೆ ಆಹ್ವಾನಿಸಲಾಗುವುದು. ನಂತರ ದಾಖಲೆ ಪರಿಶೀಲನೆ ನಡೆಸಿ ಸಂದರ್ಶನ ನಡೆಸಿ ಅಂತಿಮ ಪಟ್ಟಿ ಪ್ರಕಟಿಸಲಾಗುವುದು.

ಸಂದರ್ಶನ ನಡೆಯುವ ದಿನಾಂಕ: ಜೂನ್​ 15 ರಂದು ಬೆಳಗ್ಗೆ 10 ಗಂಟೆಗೆ.
ಸಂದರ್ಶನ ನಡೆಯುವ ಸ್ಥಳ: Atomic Energy Central School, RMP Yelwal Colony, Hunsur Road, Yelwal Post, Mysore – 571130

ಅಧಿಸೂಚನೆಗೆ: https://bit.ly/34AELwp
ಮಾಹಿತಿಗೆ: www.ecil.co.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net