More

    ಬಿಎಸ್ಸಿ ಪದವೀಧರರಿಗೆ ರಸಗೊಬ್ಬರ ಸಂಸ್ಥೆಯಲ್ಲಿ ಆಪರೇಟರ್​ಗಳ ಹುದ್ದೆಗೆ ಅರ್ಜಿ ಆಹ್ವಾನ

    ದೇಶದ ಪ್ರಮುಖ ರಸಗೊಬ್ಬರ ಮತ್ತು ರಾಸಾಯನಿಕ ಉತ್ಪಾದನಾ ಕಂಪನಿಯಾಗಿರುವ ಮುಂಬೈನ ರಾಷ್ಟ್ರೀಯ ಕೆಮಿಕಲ್​ ಆ್ಯಂಡ್​ ಫರ್ಟಿಲೈಸರ್ಸ್​ ಲಿಮಿಟೆಡ್​ನಲ್ಲಿ (ಆರ್​ಸಿಎಫ್‌​) ಆಪರೇಟರ್​ ಗ್ರೇಡ್​ 1 ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
    ಒಟ್ಟು ಹುದ್ದೆಗಳು: 50

    ಆರ್​ಸಿಎಫ್‌ಎಲ್​ನ ಕೆಮಿಕಲ್​ ವಿಭಾಗದಲ್ಲಿ 50 ಆಪರೇಟರ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 24 ಸ್ಥಾನ, ಎಸ್ಸಿಗೆ 5 ಸ್ಥಾನ, ಎಸ್ಟಿಗೆ 4 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 13 ಸ್ಥಾನ, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 4 ಸ್ಥಾನ ಮೀಸಲಿರಿಸಲಾಗಿದೆ. ಎಲ್ಲ ಅರ್ಹತಾ ಮಾನದಂಡಗಳನ್ನು 31.5.2021 ಅನ್ವಯವಾಗುವಂತೆ ನಿರ್ಧರಿಸಲಾಗುವುದು.

    ಶೈಕ್ಷಣಿಕ ಅರ್ಹತೆ: ಕೆಮಿಸ್ಟ್ರಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದು, ಫಿಜಿಕ್ಸ್​ಅನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು. ಬಿಎಸ್ಸಿಯಲ್ಲಿ ಕನಿಷ್ಠ ಶೇ.55 ಅಂಕ (ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಶೇ.50) ಪಡೆದಿರಬೇಕು. ಬಿಎಸ್ಸಿ ನಂತರ ನ್ಯಾಷನಲ್​ ಕೌನ್ಸಿಲ್​ ಆ್​ ವೆಕೇಷನಲ್​ ಟೆನಿಂಗ್​ನಲ್ಲಿ (ಎನ್​ಸಿವಿಟಿ) ತರಬೇತಿ ಪಡೆದಿರಬೇಕು. ಅಥವಾ ಕೆಮಿಕಲ್​ ಇಂಜಿನಿಯರಿಂಗ್​/ ಟೆಕ್ನಾಲಜಿಯಲ್ಲಿ 3 ವರ್ಷದ ಡಿಪ್ಲೊಮಾ ಮಾಡಿದ್ದು, 1 ವರ್ಷದ ಬಿಒಎಟಿ ತರಬೇತಿ ಪಡೆದಿರಬೇಕು. ವೃತ್ತಿ ಅನುಭವ ಕೇಳಲಾಗಿದೆ. ತರಬೇತಿಯನ್ನು ವೃತ್ತಿ ಅನುಭವ ಎಂದು ಪರಿಗಣಿಸಲಾಗುವುದಿಲ್ಲ.

    ವಯೋಮಿತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ ಗರಿಷ್ಠ 36 ವರ್ಷ, ಎಸ್ಸಿ, ಎಸ್ಟಿಗೆ 41 ವರ್ಷ, ಇತರ ಹಿಂದುಳಿದ ವರ್ಗಕ್ಕೆ 39 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

    ವೇತನ: 26,000-80,000 ವೇತನ ಶ್ರೇಣಿ ಅನ್ವಯವಾಗಲಿದ್ದು, ಆರಂಭದಲ್ಲಿ ವಿಡಿಎ, ಮನೆ ಬಾಡಿಗೆ ಭತ್ಯೆ ಎಲ್ಲ ಸೇರಿ ಮಾಸಿಕ ಅಂದಾಜು 47,000 ರೂ. ವೇತನ ದೊರೆಯಲಿದೆ.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 700 ರೂ., ಬ್ಯಾಂಕ್​ ಶುಲ್ಕ ಹಾಗೂ ಜಿಎಸ್​ಟಿ ಶುಲ್ಕಗಳನ್ನು ಪಾವತಿಸಬೇಕು.

    ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳು ರಾತ್ರಿ ಪಾಳಿ ಮಾಡಲು ಸಿದ್ಧರಿರಬೇಕು. ಅಲ್ಲದೇ ಆರ್​ಸಿಎ್​ಎಲ್​ನ ಯಾವುದೇ ಟಕದಲ್ಲಾದರೂ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ದೈಹಿಕ ಪರಿಶ್ರಮದ ಕೆಲಸ ಇದಾದ್ದರಿಂದ ಅಭ್ಯರ್ಥಿಗಳು ದೈಹಿಕವಾಗಿ, ವೈದ್ಯಕಿಯವಾಗಿ ಫಿಟ್​ ಆಗಿರಬೇಕು.

    ಆಯ್ಕೆ ಪ್ರಕ್ರಿಯೆ: ಆನ್​ಲೈನ್​ನಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಶಾರ್ಟ್​ಲಿಸ್ಟ್​ ಮಾಡಿ 1 ಹುದ್ದೆಗೆ 1:7ರ ಅನುಪಾತದಲ್ಲಿ ಟ್ರೇಡ್​ ಪರೀಕ್ಷೆಗೆ ಆಹ್ವಾನಿಸಲಾಗುವುದು. ನಂತರ ಶೈಕ್ಷಣಿಕ ಅಂಕ, ವೃತ್ತಿ ಅನುಭವ, ವಯಸ್ಸು, ಮೀಸಲಾತಿ ಎಲ್ಲವನ್ನು ಪರಿಗಣಿಸಿ ಅಂತಿಮ ಆಯ್ಕೆಗೆ ಪರಿಗಣಿಸಲಾಗುವುದು. ಟ್ರೇಡ್​ ಪರೀಕ್ಷೆಯ ಸಂಭಾವ್ಯ ದಿನಾಂಕ: 15.7.2021, ಲಿತಾಂಶದ ಸಂಭಾವ್ಯ ದಿನಾಂಕ 30.7.2021 ಎಂದು ತಿಳಿಸಲಾಗಿದೆ.

    ಅರ್ಜಿ ಸಲ್ಲಿಸಲು ಕೊನೇ ದಿನ: 21.6.2021
    ಅಧಿಸೂಚನೆಗೆ: ಜಠಿಠಿಟಠ://ಚಿಜಿಠಿ.್ಝಢ/3್ಢಟ5ಏಖಿ
    ಮಾಹಿತಿಗೆ: ಡಿಡಿಡಿ.್ಟ್ಚ್ಛ್ಝಠಿಛ.್ಚಟಞ

    ಸೇನೆಯಲ್ಲಿ ಮಹಿಳೆಯರಿಗೆ ಭರ್ಜರಿ ಅವಕಾಶ: 100 ಹುದ್ದೆಗಳಿಗೆ ಅರ್ಜಿ ಆಹ್ವಾನ

    ನಿಮಾನ್ಸ್​ನಲ್ಲಿ ಶುಶ್ರೂಷಕ ಅಧಿಕಾರಿಗಳ ನೇಮಕಕ್ಕೆ ಅರ್ಜಿ ಆಹ್ವಾನ: 275 ಹುದ್ದೆಗಳು ಖಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts