More

    ಇಂಜಿನಿಯರಿಂಗ್‌ ಪದವೀಧರರಿಗೆ ಬ್ಯೂರೋ ಆಫ್‌​ ಇಂಡಿಯನ್​ ಸ್ಟ್ಯಾಂಡರ್ಡ್ಸ್​ನಲ್ಲಿವೆ 28 ಹುದ್ದೆಗಳು

    ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಬ್ಯೂರೋ ಆಫ್‌​ ಇಂಡಿಯನ್​ ಸ್ಟ್ಯಾಂಡರ್ಡ್ಸ್​ (ಬಿಐಎಸ್​) ದೇಶದ ರಾಷ್ಟ್ರೀಯ ಮಾನದಂಡಗಳನ್ನು ತಿಳಿಸುವ ಸಂಸ್ಥೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕರಣಕ್ಕೆ ಕಾರಣವಾಗಿದೆ. ಪ್ರಸ್ತುತ ಸಂಸ್ಥೆಯಲ್ಲಿ ಸೈಂಟಿಸ್ಟ್​ – ಬಿ ಹುದ್ದೆಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳು 2 ವರ್ಷದ ಅವಧಿಗೆ ಒಳಪಟ್ಟಿದ್ದು, ದೇಶದ ಯಾವುದೇ ಭಾಗಕ್ಕೆ ಬೇಕಾದರೂ ನೇಮಕ ಮಾಡಬಹುದು. ಒಬ್ಬ ಅಭ್ಯರ್ಥಿ ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬಹುದಾಗಿದೆ.
    ಒಟ್ಟೂ ಹುದ್ದೆಗಳು 28

    ವಿಭಾಗವಾರು ಹುದ್ದೆಗಳ ವರ್ಗೀಕರಣ
    * ಸಿವಿಲ್​ ಇಂಜಿನಿಯರಿಂಗ್​ – 13
    * ಇನ್​ಸ್ಟ್ರುಮೆಂಟೇಷನ್​ ಇಂಜಿನಿಯರಿಂಗ್​ – 2
    * ಎನ್ವಿರಾನ್​ಮೆಂಟಲ್​ ಇಂಜಿನಿಯರಿಂಗ್​ – 2
    * ಕೆಮಿಸ್ಟ್ರಿ – 7
    * ಟೆಕ್ಸ್​ಟೈಲ್​ ಇಂಜಿನಿಯರಿಂಗ್​ – 4

    ವಿದ್ಯಾರ್ಹತೆ: ಸಿವಿಲ್​, ಇನ್​ಸ್ಟ್ರುಮೆಂಟೇಷನ್​, ಎನ್ವಿರಾನ್​ಮೆಂಟಲ್​, ಟೆಕ್ಸ್​ಟೈಲ್​ ಇಂಜಿನಿಯರಿಂಗ್​ನಲ್ಲಿ ಪದವಿ, ನ್ಯಾಚುರಲ್​ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಪದವಿಗಳಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಎಲ್ಲ ಹುದ್ದೆಗಳಿಗೆ 2019, 20, 21ರ ಗೇಟ್​ ಪರೀಕ್ಷೆಯ ಅಂಕಗಳನ್ನು ಪರಿಗಣಿಸಲಾಗುವುದು.

    ವಯೋಮಿತಿ: 25.6.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 30 ವರ್ಷ ವಯೋಮತಿ ನಿಗದಿಪಡಿಸಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ನೀಡಲಾಗಿದೆ.

    ಮೀಸಲಾತಿ: ಸಾಮಾನ್ಯವರ್ಗದ ಅಭ್ಯರ್ಥಿಗೆ 11 ಸ್ಥಾನ, ಎಸ್ಸಿಗೆ 2, ಎಸ್ಟಿಗೆ 4, ಇತರ ಹಿಂದುಳಿದ ವರ್ಗಕ್ಕೆ 9, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 2 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಇದರಲ್ಲಿ 3 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: 2019, 2020, 2021ರ ಗೇಟ್​ ಪರೀಕ್ಷೆಯ ಅಂಕಗಳನ್ನು ಆಧರಿಸಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 100 ರೂ, ಶುಲ್ಕ ಪಾವತಿಸತಕ್ಕದ್ದು.

    ಅರ್ಜಿ ಸಲ್ಲಿಸಲು ಕೊನೇ ದಿನ: 25.6.2021
    ಅಧಿಸೂಚನೆಗೆ: https://bit.ly/3g71WoC
    ಮಾಹಿತಿಗೆ:

     https://bis.gov.in

    ವಿಜ್ಞಾನ ಪದವೀಧರರಿಗೆ ಏಮ್ಸ್​ನಲ್ಲಿದೆ ಅವಕಾಶ- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts