

ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ವಿಭಾಗದ ಅಧೀನದಲ್ಲಿ ಕಾರ್ಯನಿರ್ವಹಿಸುವ ಇನ್ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಸೈನ್ಸ್ ಆ್ಯಂಡ್ ರಿಜೆನರೇಟೀವ್ ಮೆಡಿಸಿನ್ (ಇನ್ಸ್ಟೆಮ್) ಬೆಂಗಳೂರು ವಿಭಾಗದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳು: 11
ಇನ್ಸ್ಟೆಮ್ನ ಲೈಫ್ ಸೈನ್ಸ್ ಕ್ಲಸ್ಟರ್ನ ತಾಂತ್ರಿಕ ಕೇಡರ್ನಲ್ಲಿ ತಾಂತ್ರಿಕ ಸಹಾಯಕರ ಅವಶ್ಯಕತೆ ಇದೆ. ಆನ್ಲೈನ್ ಅರ್ಜಿ ಹೊರತುಪಡಿಸಿ ಉಳಿದ ಯಾವುದೇ ವಿಧಾನದಲ್ಲಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಹುದ್ದೆಗಳು 2 ವರ್ಷ ಪೆÇ್ರಬೆಷನರಿ ಅವಧಿ ಹೊಂದಿದೆ.
ಹುದ್ದೆ ವಿವರ
* ಸೀನಿಯರ್ ಟೆಕ್ನಿಕಲ್ ಆಫೀಸರ್ (ಇನ್ಸ್ಟ್ರುಮೆಂಟೇಷನ್ -1, ಇನ್ಫಾರ್ಮೇಷನ್ ಟೆಕ್ನಾಲಜಿ-1)- 2
* ಟೆಕ್ನಿಕಲ್ ಆಫೀಸರ್ ಐಐ (ಇನ್ಸ್ಟ್ರುಮೆಂಟೇಷನ್) - 1
* ಟೆಕ್ನಿಕಲ್ ಆಫೀಸರ್ ಐ (ಎಚ್ವಿಎಸಿ-1, ಲ್ಯಾಬೊರೇಟರಿ ಸಪೋರ್ಟ್-1) - 2
* ಟೆಕ್ನಿಕಲ್ ಅಸಿಸ್ಟೆಂಟ್ (ಇನ್ಸ್ಟ್ರುಮೆಂಟೇಷನ್-1, ಇನ್ಫಾರ್ಮೇಷನ್ ಟೆಕ್ನಾಲಜಿ-1, ಎಲೆಕ್ಟ್ರಿಕಲ್-2, ಎಚ್ವಿಎಸಿ-1, ಸಿವಿಲ್-1) - 6
ಮೀಸಲಾತಿ: 12 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗಳಿಗೆ 7 ಸ್ಥಾನ, ಎಸ್ಸಿಗೆ 1, ಇತರ ಹಿಂದುಳಿದ ವರ್ಗ ಅಭ್ಯರ್ಥಿಗೆ 3 ಸ್ಥಾನ ಮೀಸಲಿರಿಸಲಾಗಿದೆ.
ವಿದ್ಯಾರ್ಹತೆ: ಬಿಇ, ಬಿ.ಟೆಕ್/ ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೋಮಾ ಮಾಡಿದ್ದು, ಕನಿಷ್ಠ ಶೇ.60 ಅಂಕ ಪಡೆದಿರಬೇಕು. ಆಯಾ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷ ವೃತ್ತಿ ಅನುಭವ ಹೊಂದಿರಬೇಕು.
ವಯೋಮಿತಿ: 31.3.2021ಕ್ಕೆ ಅನ್ವಯವಾಗುವಂತೆ ಹುದ್ದೆಗಳಿಗೆ ಅನುಗುಣವಾಗಿ ನೇರ ನೇಮಕಾತಿಗೆ ಗರಿಷ್ಠ 35 -40 ವರ್ಷ, ಡೆಪ್ಯುಟೇಷನ್ ಹುದ್ದೆಗೆ ಗರಿಷ್ಠ 56 ವರ್ಷ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಮಹಿಳಾ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಶುಲ್ಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಟ್ರೇಡ್/ ಸ್ಕಿಲ್ ಪರೀಕ್ಷೆ ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯು ಬಹು ಆಯ್ಕೆ ಮಾದರಿಯಲ್ಲಿ ಇರಲಿದ್ದು, ಪ್ರಶ್ನೆ ಪತ್ರಿಕೆ ಇಂಗ್ಲಿಷ್ ಹಾಗೂ ಹಿಂದಿಯಲ್ಲಿರಲಿದ್ದು, ಬೆಂಗಳೂರಿನಲ್ಲಿ ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 31.3.2021
ಅಧಿಸೂಚನೆಗೆ: http://bit.ly/396PIZq
ಮಾಹಿತಿಗೆ: http://www.instem.res.in
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: