

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಅಧೀನ ಸಂಸ್ಥೆ ಆಗಿರುವ ಯಲಹಂಕದಲ್ಲಿರುವ ಕೆಪಿಸಿ ಗ್ಯಾಸ್ ಪವರ್ ಕಾರ್ಪೋರೇಷನ್ ಲಿಮಿಟೆಡ್ನಲ್ಲಿ ಶಿಶಿಕ್ಷು ತರಬೇತಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಒಟ್ಟು ಸ್ಥಾನಗಳು: 12
ಕೆಪಿಸಿಎಲ್ನಲ್ಲಿ ತರಬೇತಿ ನಂತರ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಲಾಗುವುದು ಹಾಗೂ ಈ ಅಭ್ಯರ್ಥಿಗಳನ್ನು ನಿಗಮದ ಕಾಯಂ ಸೇವೆಗೆ ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸತಕ್ಕದ್ದು.
ಶಿಶಿಕ್ಷು ವೃತ್ತಿ ವಿವರ
* ಐಟಿಐ (ಎಲೆಕ್ಟ್ರಿಷಿಯನ್)- 3
ಎಲೆಕ್ಟ್ರಿಷಿಯನ್ನಲ್ಲಿ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ತರಬೇತಿ ಅವಧಿಯು 1 ವರ್ಷದಾಗಿದೆ. ಈ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ 10,000 ರೂ. ತರಬೇತಿ ಭತ್ಯೆ ನೀಡಲಾಗುವುದು.
* ಐಟಿಐ ಫಿಟ್ಟರ್ - 3
ಫಿಟ್ಟರ್ನಲ್ಲಿ ಐಟಿಐ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಮಾಸಿಕ 10,000 ರೂ. ತರಬೇತಿ ಭತ್ಯೆ ಇದ್ದು, ತರಬೇತಿ ಅವಧಿಯು 1 ವರ್ಷದ್ದಾಗಿದೆ.
* ಅಸಿಸ್ಟೆಂಟ್ ಫ್ರಂಟ್ ಆಫೀಸ್ ಮ್ಯಾನೇಜರ್ - 6
ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ತರಬೇತಿ ಅವಧಿಯು 1 ವರ್ಷ 3 ತಿಂಗಳದ್ದಾಗಿದೆ. ಮಾಸಿಕ 7,000 ರೂ. ತರಬೇತಿ ಭತ್ಯೆ ನಿಗದಿಯಾಗಿದೆ.
ಸೂಚನೆ: ಕೆಪಿಸಿಎಲ್ನಲ್ಲಿ ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವ ಅಭ್ಯರ್ಥಿಗಳು ಮತ್ತೆ ತರಬೇತಿಗೆ ಅರ್ಹರಾಗಿರುವುದಿಲ್ಲ. ಆಫ್ಲೈನ್ ಮೂಲಕ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳು ಎಲ್ಲ ಅಗತ್ಯ ದಾಖಲೆಗಳನ್ನು ಚಾಲ್ತಿಯಲ್ಲಿರುವ ತಮ್ಮ ಸ್ವಂತ ಇಮೇಲ್ ಮೂಲಕ ಕಳುಹಿತಕ್ಕದ್ದು. ಆನ್ಲೈನ್ ಅರ್ಜಿಯಲ್ಲಿ ಅಭ್ಯರ್ಥಿಗಳು ಅಪೂರ್ಣ ಮಾಹಿತಿ ನೀಡಿದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ನೋಂದಾಯಿತರಾಗಿ: ಐಟಿಐ/ ಐಟಿಐಯೇತರ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು https://apprenticeshipindia.org ದಲ್ಲಿ ಮೊದಲು ಹೆಸರು ನೋಂದಣಿ ಮಾಡಿಕೊಳ್ಳಬೇಕು. ನಂತರ ಕೆಪಿಸಿಎಲ್ ಗ್ಯಾಸ್ ಪವರ್ ಕಾರ್ಪೋರೇಷನ್ ಯಲಹಂಕ ಕಂಬೈನ್ಡ ಸೈಕಲ್ ಪವರ್ ಪ್ಲಾಂಟ್ ಎಸ್ಟಾಬ್ಲಿಷ್ಮೆಂಟ್ಗೆ ಆನ್ಲೈನ್ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 30.3.2021
ನೋಂದಾಯಿತರಾಗುವ ವೆಬ್ಸೈಟ್: https://apprenticeshipindia.org
ಮಾಹಿತಿಗೆ ದೂ. ಸಂ.: 9008901376/ 7483246567
ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ: