More

    ವಿಜ್ಞಾನ ಪದವೀಧರರಿಗೆ ಉತ್ತಮ ಅವಕಾಶ: ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

    ಕೌನ್ಸಿಲ್ ಆಫ್​ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್‍ನ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಫಿಜಿಕಲ್ ಲ್ಯಾಬೊರೇಟರಿಯಲ್ಲಿ (ಎನ್‍ಪಿಎಲ್) ಬಿಎಸ್ಸಿ ಪದವೀಧರರಿಗೆ ವಿವಿಧ ಉದ್ಯೋಗಾವಕಾಶ ಇದೆ.
    ಒಟ್ಟು ಹುದ್ದೆಗಳು: 14

    ಸಿಎಸ್‍ಐಆರ್-ಎನ್‍ಪಿಎಲ್ ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಾಣ, ಎಕ್ಸಿಟೋನಿಕ್ ಸೌರಕೋಶಗಳಿಗೆ ಪಿ ಮತ್ತು ಎನ್ ಮಾದರಿ ವಸ್ತುಗಳ ತಯಾರಿಕೆ, ರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಫೆಲೋಶಿಪ್ (ಎನ್‍ಆರ್‍ಇಎಎಫ್​) ಕಾರ್ಯಕ್ರಮ ಹಾಗೂ ಇತರ ಹಲವು ಯೋಜನೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

    ಯೋಜನೆಗಳಿಗೆ ಅನುಗುಣವಾಗಿ ಈ ಹುದ್ದೆಗಳು 1 ರಿಂದ 3 ವರ್ಷದ ಅವಧಿ ಹೊಂದಿದ್ದು, ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಬಹುದು. ಎಸ್ಸಿ, ಎಸ್ಟಿ , ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಸಾಮಾನ್ಯವರ್ಗದ ಅಭ್ಯರ್ಥಿಗಳಿಗಿಂತ ಮೊದಲ ಆದ್ಯತೆ ನೀಡಲಾಗುವುದು. ವಿವಿಧ ಹುದ್ದೆ, ಯೋಜನೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಪ್ರತ್ಯೇಕವಾಗಿ ಅರ್ಜಿ ಸಲ್ಲಿಸತಕ್ಕದ್ದು.

    ಹುದ್ದೆ ವಿವರ
    * ಪ್ರಾಜೆಕ್ಟ್ ಅಸಿಸ್ಟೆಂಟ್-ಐ – 3
    * ಪ್ರಾಜೆಕ್ಟ್ ಅಸಿಸ್ಟೆಂಟ್ – ಐಐ – 1
    * ರಿಸರ್ಚ್ ಅಸೋಸಿಯೇಟ್ಸ್ – ಐ – 1
    * ಜೂನಿಯರ್ ರಿಸರ್ಚ್ ಫೆಲೋಷಿಪ್ – 6
    * ರಿಸರ್ಚ್ ಅಸೋಸಿಯೇಟ್ಸ್ – 1
    * ರಿಸರ್ಚ್ ಅಸೋಸಿಯೇಟ್ಸ್ – ಐಐಐ – 2

    ಶೈಕ್ಷಣಿಕ ಅರ್ಹತೆ: ಕೆಮಿಸ್ಟ್ರಿ, ಫಿಜಿಕ್ಸ್, ಅಪ್ಲೈಡ್ ಫಿಜಿಕ್ಸ್, ಆಪ್ಟಿಕ್ಸ್‍ನಲ್ಲಿ ಬಿಎಸ್ಸಿ/ ಎಂಎಸ್ಸಿ/ ಪಿಎಚ್.ಡಿ, ಬಿ.ಟೆಕ್/ ಎಂ.ಟೆಕ್ ಅಧ್ಯಯನ ಮಾಡಿದ್ದು, ಪದವಿಗಳಲ್ಲಿ ಕನಿಷ್ಠ ಶೇ.55 ಅಂಕ ಪಡೆದಿರಬೇಕು. ಜೂನಿಯರ್ ರಿಸರ್ಚ್ ಫೆಲೋಷಿಪ್‍ಗೆ ಗೇಟ್/ನೆಟ್ ಉತ್ತೀರ್ಣರಾಗಿರಬೇಕು.

    ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ 31.3.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 28, 30, 35, 50 ವರ್ಷ ಇದೆ.

    ಸ್ಟೈಪೆಂಡ್: ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ 20,000 – 54,000 ರೂ. ಸ್ಟೈಪೆಂಡ್ ಜತೆ ಮನೆ ಬಾಡಿಗೆ ಭತ್ಯೆ ನೀಡಲಾಗುವುದು.

    ಆಯ್ಕೆ ಪ್ರಕ್ರಿಯೆ: ಸ್ಕ್ರೀನಿಂಗ್ ಪ್ರಕ್ರಿಯೆ ಮೂಲಕ ಶಾರ್ಟ್‍ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.

    ಅರ್ಜಿ ಸಲ್ಲಿಸಲು ಕೊನೇ ದಿನ: 23.3.2021
    ಸಂದರ್ಶನ ನಡೆಯುವ ದಿನಾಂಕ: 31.3.2021

    ಅಧಿಸೂಚನೆಗೆ: https://bit.ly/2P3iYJk
    ಅರ್ಜಿ ಸಲ್ಲಿಕೆ ಮೇಲ್ ವಿಳಾಸ: [email protected]

    ಹೆಚ್ಚಿನ ಉದ್ಯೋಗ ಸುದ್ದಿಗೆ ಕ್ಲಿಕ್ಕಿಸಿ:

    https://www.vijayavani.net/category/%e0%b2%89%e0%b2%a6%e0%b3%8d%e0%b2%af%e0%b3%8b%e0%b2%97-%e0%b2%ae%e0%b2%bf%e0%b2%a4%e0%b3%8d%e0%b2%b0/

    ಲಖನೌ ಮೆಟ್ರೋ ರೈಲ್​ನಲ್ಲಿವೆ 292 ಖಾಲಿ ಹುದ್ದೆಗಳು: ಡಿಪ್ಲೋಮಾ ಪದವೀಧರರಿಗೆ ಆಹ್ವಾನ

    ಸೇನೆಗೆ ಸೇರುವ ಆಸೆಯೆ? ಇಲ್ಲಿದೆ ಉತ್ತಮ ಅವಕಾಶ- ಎಸ್​ಎಸ್​ಎಲ್​ಸಿ ಪಾಸಾದವರೂ ಪಾಲ್ಗೊಳ್ಳಿ…

    ಸಿವಿಲ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ ಮುಗಿಸಿದವರಿಗೆ ಇಲ್ಲಿ ಉದ್ಯೋಗಾವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts